Health Tips: ಗಂಟು ನೋವಿನ ಬಗ್ಗೆ ವೈದ್ಯರಾದ ಡಾ.ಹರೀಶ್ ಪುರಾಣಿಕ್ ನಿಮಗೆ ಹಲವು ವಿವರಣೆಗಳನ್ನು ನೀಡಿದ್ದಾರೆ. ಅದೇ ರೀತಿ ಇಂದು ಕೂಡ, ಗಂಟು ನೋವಿನ ಬಗ್ಗೆ ವೈದ್ಯರು ನಿಮಗೆ ವಿವರಿಸಲಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಗಂಟುಗಳಲ್ಲಿ ಅಸಹಜ ಚಲನೆಯಾದಾಗ, ಉಳುಕು ಉಂಟಾಗುತ್ತದೆ. ಗಂಟುಗಳ ಮೂಮೆಂಟ್‌ನಲ್ಲಿ ಹೆಚ್ಚು ಕಡಿಮೆಯಾದಾಗಲೇ, ಉಳುಕು ಉಂಟಾಗುತ್ತದೆ. ನಡೆಯುವಾಗ, ಕಾಲು ಟ್ವಿಸ್ಟ್ ಆದಾಗ, ಕಾಲು ಉಳುಕುತ್ತದೆ. ಅಂಥ ಸಮಯದಲ್ಲಿ ಅದಕ್ಕೆ ಚಿಕಿತ್ಸೆ ಕೊಟ್ಟು ಸರಿ ಮಾಡಬಹುದು. ಆದರೆ ಮಂಡಿ ಚಿಪ್ಪಿನ ಬಳಿ ಉಳುಕು ಉಂಟಾದರೆ, ಅದು ವಾಸಿಯಾಗೋದು ತುಂಬಾ ಕಷ್ಟವಾಗುತ್ತದೆ. ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆ ಬೇಕಾಗುತ್ತದೆ.
ಹಾಗಾಗಿಯೇ ವೈದ್ಯರು ಈ ರೀತಿ ಉಳಿಕಿ ನೋವಾದಾಗ, ಉಳುಕು ತೆಗೆಯುವವರ ಬಳಿ ಹೋಗಬಾರದು, ವೈದ್ಯರ ಬಳಿ ಚಿಕಿತ್ಸೆಗೆ ಹೋಗಬೇಕು ಅಂತಾ ಹೇಳಿದ್ದಾರೆ. ಏಕೆಂದರೆ, ಉಳುಕು ತೆಗೆಯುವವರು, ಆ ವೇಳೆಯ ನೋವನ್ನಷ್ಟೇ ಗುಣಪಡಿಸಬಲ್ಲರು. ಆದರೆ, ಅಲ್ಲಿರುವ ನೋವು ಪರ್ಮನೆಂಟ್ ಆಗಿ ಹೋಗಬೇಕು ಅಂದ್ರೆ, ನೀವು ವೈದ್ಯರ ಬಳಿ ಚಿಕಿತ್ಸೆ ಪಡೆಯಲೇಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..