Health Tips: ಕ್ಯಾನ್ಸರ್ ಬಗ್ಗೆ ನಾವು ನಿಮಗೆ ಈಗಾಗಲು ಹಲವು ಮಾಹಿತಿಗಳನ್ನು ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರೊಬ್ಬರು ಕ್ಯಾನ್ಸರ್ ಅಂದ್ರೇನು..? ಇದು ಹೇಗೆ ಹುಟ್ಟುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಕ್ಯಾನ್ಸರ್ ಅದಂರೇನು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಹಾಂಗದ ಅತೀಯಾದ ಬೆಳವಣಿಗೆಯನ್ನು ಕ್ಯಾನ್ಸರ್ ಎನ್ನಲಾಗುತ್ತದೆ. ದೇಹದಲ್ಲಿರುವ ಯಾವುದೇ ಅಂಗ, ತನ್ನ ಲಿಮಿಟ್ಸ್ ಕಳೆದುಕೊಂಡು, ಅಗತ್ಯಕ್ಕಿಂತ ಹೆಚ್ಚು ಬೆಳೆದಾಗಲೇ, ದೇಹದಲ್ಲಿ ಕ್ಯಾನ್ಸರ್ ಗಡ್ಡೆ ಹುಟ್ಟುಕೊಳ್ಳುತ್ತದೆ. ಹಳ್ಳಿಯಲ್ಲಿ ವಾಸಿಸುವವರಿಗಿಂತ ಹೆಚ್ಚಾಗಿ, ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಕ್ಯಾನ್ಸರ್ ಕಂಡುಬರುತ್ತಿದೆ.
ಇನ್ನು ಪ್ರಪಂಚದಲ್ಲಿ ಮೊದಲನೇಯ ಸ್ಥಾನದಲ್ಲಿರುವ ಕ್ಯಾನ್ಸರ್ ಅಂದ್ರೆ ಗರ್ಭಕೋಶದ ಕ್ಯಾನ್ಸರ್. ಅಂದರೆ ಪ್ರಪಂಚದಲ್ಲಿ ಹೆಚ್ಚಿನ ಜನರಿಗೆ ಗರ್ಭಕೋಶದ ಕ್ಯಾನ್ಸರ್ ಇದೆ. ಎರಡನೇಯದಾಗಿ ಬ್ರೀಸ್ಟ್ ಕ್ಯಾನ್ಸರ್ ಇದೆ. ಇನ್ನು ಕ್ಯಾನ್ಸರ್ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ ಉತ್ತರ, ಬರೀ 10ರಿಂದ 15 ಪರ್ಸೆಂಟ್ ಅಷ್ಟೇ, ಅನುವಂಶಿಕವಾಗಿ ಕ್ಯಾನ್ಸರ್ ಬರುತ್ತದೆ.
ಇನ್ನು ಹೆಣ್ಣು ಮಕ್ಕಳು ಮಗುವನ್ನು ಹೆತ್ತು, ತಮ್ಮ ಸೌಂದರ್ಯ ಎಲ್ಲಿ ಹಾಳಾಗಿ ಹೋಗುತ್ತದೆಯೋ ಎಂಬ ಕಾರಣಕ್ಕೆ, ಎದೆ ಹಾಲು ಕುಡಿಸುವುದಿಲ್ಲ. ಇದೇ ಕಾರಣಕ್ಕೆ ಸ್ತನ ಕ್ಯಾನ್ಸರ್ ಬರುತ್ತದೆ. ಇನ್ನು ವಿವಾಹವಾಗುವುದು ತಡವಾಗಿ, ಮಕ್ಕಳಾಗುವುದು ತಡವಾದಾಗ ಕೂಡ ಕೆಲವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಇನ್ನು ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವರಲ್ಲಿ ಕೆಲವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?
ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?