Health Tips: ವೈದ್ಯೆಯಾದ ಅಶ್ವಿನಿ ಚಕ್ರಸಾಲಿ ಅವರು ಮಧುಮೇಹದ ಬಗ್ಗೆ ವಿವರಿಸಿದ್ದಾರೆ. ಸಕ್ಕರೆ ಎಂದರೆ ಬರೀ ಸಕ್ಕರೆಯಲ್ಲ. ನಾವು ತಿನ್ನೋ ಹಲವು ಆಹಾರಗಳಲ್ಲಿ ಸಕ್ಕರೆ ಅಂಶವಿರುತ್ತದೆ. ಆದರೆ ಆ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದೆಯೇ, ನಮ್ಮ ದೇಹಕ್ಕೆ ಹಲವು ಆಹಾರ ಸೇವನೆಗಳ ಮೂಲಕ, ಸಕ್ಕರೆ ಅಂಶ ದೇಹ ಸೇರುತ್ತದೆ.
ನಾವು ಮಾರುಕಟ್ಟೆಯಿಂದ ತರುವ ಹಲವು ಪದಾರ್ಥಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿಯೇ ಇರುತ್ತದೆ. ಬಿಸ್ಕಿಟ್, ಬ್ರೆಡ್, ಜ್ಯೂಸ್, ಬೇರೆ ಬೇರೆ ತಿಂಡಿ ಸೇರಿ ಹಲವು ಪದಾರ್ಥಗಳಲ್ಲಿ ಸಕ್ಕರೆ ಅಂಶ ಇರುತ್ತದೆ. ಇನ್ನು ಬೇಕರಿ ತಿಂಡಿಗಳಾದ ಕೇಕ್, ಕುಕೀಸ್, ಡೋನಟ್ಸ್, ಪೆಸ್ಟ್ರೀಸ್, ಸೇರಿ ಹಲವು ತಿಂಡಿಗಳಲ್ಲೂ ಸಕ್ಕರೆ ಅಂತೂ ಇದ್ದೇ ಇರುತ್ತದೆ. ಇಂಥ ಆಹಾರಗಳ ಸೇವನೆಯಿಂದ, ನಮಗೆ ಮತ್ತಷ್ಟು ಇಂಥ ತಿಂಡಿ ತಿನ್ನುತ್ತಲೇ ಇರಬೇಕು ಎನ್ನಿಸುತ್ತದೆ. ಇದು ಅನಾರೋಗ್ಯಕರ ಸಂಕೇತ.
ನಾವು ಸಕ್ಕರೆ ಅಂಶ ದೇಹಕ್ಕೆ ಹೋಗದಂತೆ ಹೇಗೆ ತಡೆಯಬೇಕು ಅಂದ್ರೆ, ನಾವು ಸರಿಯಾದ ಆಹಾರವನ್ನು ಆಯ್ಕೆ ಮಾಡಬೇಕು. ಸಾಮಾನ್ಯವಾಗಿ ಕುಡಿಯುವ ಟೀ, ಕಾಫಿ ಬದಲು ಗ್ರೀನ್ ಟೀ, ಹರ್ಬಲ್ ಟೀ ಬಳಸಬಹುದು. ಮಿಲ್ಕ್‌ಶೇಕ್, ಕಶಾಯ, ಸ್ಮೂದೀಸ್ ಮಾಡುವಾಗ, ಅದಕ್ಕೆ ಸಕ್ಕರೆ ಬಳಸಬೇಡಿ. ಆಗ ಅದು ಆರೋಗ್ಯಕರವಾಗಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ..

