Health Tips: ತಮ್ಮ ವಿರೋಧಿಗಳನ್ನು ಮನೆಗೆ ಕರೆಸಿ, ಅದರಲ್ಲಿ ಮದ್ದು ಬೆರೆಸಿ ಊಟ ಮಾಡಿಸುತ್ತಾರೆ. ಅದನ್ನೇ ಕೈ ಮದ್ದು, ಕೈ ವಿಷ, ಕೈ ಮಸುಕು, ಮಾಟ ಮಾಡಿಸಿದ ಮದ್ದು ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ.
ಎಷ್ಟೋ ಕಡೆ ಸ್ವಂತ ಸಹೋದರ ಸಹೋದರಿಯ ಊಟಕ್ಕೆ, ಪತಿ, ಪತ್ನಿಯ ಊಟಕ್ಕೆ, ಸ್ವಂತ ಸಂಬಂಧಿಕರ ಊಟಕ್ಕೆ ಮದ್ದು ಬೆರೆಸಿ, ಅವರು ನಿಧಾನಗತಿಯಲ್ಲಿ ಸಾಯುವಂತೆ ಮಾಡಿದ ಎಷ್ಟೋ ಉದಾಹರಣೆಗಳಿದೆ. ಮೊದಲೆಲ್ಲ ಬ್ರಿಟೀಷರಿಗಾಗಿ ಈ ಮದ್ದು ತಯಾರಿಸಿ ನೀಡುತ್ತಿದ್ದರಂತೆ. ಆದರೆ, ಇದೀಗ ಆ ವಿಷ ಸಂಬಂಧದ ಮಧ್ಯೆ ಬಂದು ಆವರಿಸಿದೆ. ಆಸ್ತಿ ವಿಷಯವಾಗಿ, ಮದುವೆ ವಿಷಯವಾಗಿ, ಒಳದ್ವೇಷವಿದ್ದಾಗ, ಹೀಗೆ ನಾನಾಕಾರಣಗಳಿಗಾಗಿ ಸ್ವಂತದವರನ್ನೇ ಊಟಕ್ಕೆ ಕರೆದು, ಅದರಲ್ಲಿ ಮದ್ದು ಬೆರೆಸುತ್ತಾರೆ.
ಈ ಮದ್ದು ಬೆರೆಸಿದ ಊಟ ಮಾಡುವುದರಿಂದ ಮೊದ ಮೊದಲು ಏನೂ ಆಗುವುದಿಲ್ಲ. ಆದರೆ ತಿಂಗಳು ಕಳೆಯುತ್ತಿದ್ದಂತೆ, ಅದರ ಪ್ರಭಾವ ಶುರುವಾಗುತ್ತದೆ. ದೇಹದ ಮೇಲೆ ಗುಳ್ಳೆಗಳಾಗುತ್ತದೆ. ವಾಂತಿ ಬೇಧಿ ಶುರುವಾಗಿ, ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗುತ್ತದೆ. ಎಂಥ ಚಿಕಿತ್ಸೆ ಪಡೆದರೂ ಗುಣವಾಗದ ಅನಾರೋಗ್ಯ ಆವರಿಸುತ್ತದೆ. ಹಾಗಾಗಿಯೇ ಮದ್ದು ತೆಗೆಯುವವರ ಬಳಿಯೇ ಹೋಗಿ, ಮದ್ದು ತೆಗೆಸಬೇಕು.
ಮದ್ದು ತೆಗೆಯುವವರು ನಿಮ್ಮ ಕೈ ನೋಡಿ ಮದ್ದು ಹಾಕಿದ್ದಾರಾ ಇಲ್ಲವಾ ಅನ್ನುವುದನ್ನು ಹೇಳಿ, ಔಷಧಿ ಕೊಟ್ಟು ಮದ್ದು ತೆಗೆಯುತ್ತಾರೆ. ಕೆಲವರು ಯಾರು ಮದ್ದು ಹಾಕಿದ್ದರು ಅಂತಲೂ ಹೇಳುತ್ತಾರೆ. ಇನ್ನು ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೇನು ಬಳಸುತ್ತಾರೆ ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..
ಕೂದಲು ಅಂದವಾಗಿರಬೇಕು, ದಟ್ಟವಾಗಿರಬೇಕು ಎಂದಲ್ಲಿ ಈ ಆಹಾರಗಳನ್ನು ಸೇವಿಸಿ..
ಮುಟ್ಟು ಮುಂದೂಡಲು ಪದೇ ಪದೇ ಮಾತ್ರೆ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ..?
ಇಲ್ಲಿದೆ ಸ್ವಾದಿಷ್ಟಕರ ಮನೆ ಊಟ: Good morning Hotel ಸ್ಪೆಶಾಲಿಟಿ ಏನು..?