Health Tips: ಇಂದಿನ ಕಾಲದಲ್ಲಿ ಮುಂದುವರಿದಿರುವ ವಿಜ್ಞಾನದ ಕಾರಣ, ರೋಗಿಗಳಿಗೆ ತರಹೇವಾರಿ ಚಿಕಿತ್ಸೆ ಕೊಟ್ಟ, ದೊಡ್ಡ ದೊಡ್ಡ ರೋಗಗಳನ್ನು ಗುಣಪಡಿಸಬಹುದು. ಅಂಥ ಚಿಕಿತ್ಸೆಗಳಲ್ಲಿ ಎಂಡೋಸ್ಕೊಪಿ ಕೂಡ ಒಂದು. ಈ ಚಿಕಿತ್ಸೆ ಮೂಲಕ ನಮ್ಮ ದೇಹದಲ್ಲಿರುವ ರೋಗಗಳನ್ನು ಪತ್ತೆಹಚ್ಚಬಹುದು. ವೈದ್ಯರಾದ ಡಾ.ಆಂಜೀನಪ್ಪಾ ಈ ಬಗ್ಗೆ ವಿವರಿಸಿದ್ದಾರೆ.
ಬಾಯಿ ಮೂಲಕ ಚಿಕ್ಕ ಮಷಿನ್ ಹಾಕಿ, ದೇಹದಲ್ಲಿ ಏನಾದರೂ ಸೋಂಕಿದೆಯಾ ಎಂದು ಪರೀಕ್ಷಿಸಲಾಗುತ್ತದೆ. ಈ ಯಂತ್ರದಲ್ಲಿಕ್ಯಾಮೆರಾ ಕೂಡ ಇರುತ್ತದೆ. ಹಾಗಾಗಿ ದೇಹದಲ್ಲಿ ಏನು ಸಮಸ್ಯೆ ಇದೆ ಎಂಬುದನ್ನು ಈ ಕ್ಯಾಮೆರಾ ಸೆರೆ ಹಿಡಿದು, ಕಂಪ್ಯೂಟರ್‌ನಲ್ಲಿ ತೋರಿಸುತ್ತದೆ. ಇದರಲ್ಲಿ ಹಲವು ವಿಧಗಳಿದೆ.
ಎಂಡೋಸ್ಕೊಪಿ ಬಳಸಿದರೆ, ಯಾವುದೇ ಆಪರೇಷನ್ ಇಲ್ಲದೇ, ಕೆಲವು ರೋಗಗಳಿಗೆ ಚಿಕಿತ್ಸೆ ನೀಡಬಹುದು. ದೇಹದ ಯಾವ ಭಾಗವನ್ನೂ ಕತ್ತರಿಸಿದೇ, ಯಂತ್ರದ ಮೂಲಕ ಚಿಕಿತ್ಸೆ ಕೊಡುವುದನ್ನು ಎಂಡೋಸ್ಕೊಪಿ ಎಂದು ಕರೆಯಲಾಗುತ್ತದೆ. ಇನ್ನು ಪ್ರಾಕ್ಟೋಸ್ಕೋಪಿ ಎಂದು ಕರೆಯುವ ಚಿಕಿತ್ಸೆಯಿಂದ ಪೈಲ್ಸ್, ಕ್ಯಾನ್ಸರ್ ಸಮಸ್ಯೆ ಇದೆಯಾ ಎಂಬುದನ್ನು ಕಂಡು ಹಿಡಿಯಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..