ಫುಡ್ ಪಾಯ್ಸನ್ ಅಂದ್ರೆ ಏನು? ಇದು ಯಾಕಾಗುತ್ತೆ ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರುವುದು, ನೆಮ್ಮದಿಯಾಗಿ ಜೀವನ ಮಾಡುವುದೆಲ್ಲ ಆಹಾರದಿಂದಲೇ. ನಾವು ಆರೋಗ್ಯಕರವಾದ ಆಹಾರ ತಿಂದಾಗಲೇ, ನಾವು ಆರೋಗಯವಾಗಿರುತ್ತೇವೆ. ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇವಿಸದಿದ್ದಲ್ಲಿ, ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಫುಡ್ ಪಾಯ್ಸನ್‌ ಆದಾಗಲೂ, ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ಫುಡ್ ಪಾಯ್ಸನ್ ಹೇಗಾಗುತ್ತದೆ..? ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ..

ವೈದ್ಯರಾದ ಡಾ.ಆಂಜಿನಪ್ಪ ಅವರು ಈ ಬಗ್ಗೆ ವಿವರಿಸಿದ್ದಾರೆ. ಹೆಚ್ಚಾಗಿ ಹೊಟೇಲ್ ಊಟ, ಬೀದಿಬದಿ ಊಟ ಮಾಡುವವರಿಗೆ ಫುಡ್ ಪಾಾಯ್ಸನ್ ಆಗುತ್ತದೆ. ಏಕೆಂದರೆ ಅಲ್ಲಿ ನಿಮಗೆ ಫ್ರೆಶ್ ಫುಡ್ ಮಾಡಿಕೊಡುವುದಿಲ್ಲ. ಬೆಳಿಗ್ಗೆಯದನ್ನೇ ಬಿಸಿ ಮಾಡಿ ಕೊಡಬಹುದು. ಅಥವಾ ಅಲ್ಲಿ ಬಳಸುವ ಎಣ್ಣೆ, ಪದಾರ್ಥಗಳ ಕ್ವಾಲಿಟಿ ಉತ್ತಮವಾಗಿರುವುದಿಲ್ಲ.

ಅದೇ ನೀವು ಮನೆಯಲ್ಲೇ ಬಿಸಿ ಬಿಸಿ ಅಡುಗೆ ಮಾಡಿ ತಿಂದ್ರೆ, ನಿಮಗೆ ಫುಡ್ ಪಾಯ್ಸನ್ ಆಗುವುದಿಲ್ಲ. ನಾವು ಹೊರಗೆ ತಿನ್ನುವ ಆಹಾರದಲ್ಲಿ ಕೆಮಿಕಲ್ ಇರಬಹುದು. ಅಥವಾ ಏನಾದರೂ ಬಿದ್ದಿರಬಹುದು. ಇಂಥ ಸಮಯದಲ್ಲಿ ಮಾಡಿದ ಆಹಾರವನ್ನು ಸೇವಿಸಿದಾಗ, ಫುಡ್‌ ಪಾಯ್‌ಸನ್ ಆಗುತ್ತದೆ. ಆಹಾರ ಸೇವಿಸಿ, 12ರಿಂದ 48 ಗಂಟೆಯೊಳಗೆ ಫುಡ್ ಪಾಯ್ಸನ್ ಆಗುತ್ತದೆ. ಹೀಗಾದಾಗ ವಾಂತಿ ಬೇಧಿಯಾಗುತ್ತದೆ.

ಇಂಥ ಸಮಯದಲ್ಲಿ ಮನೆ ಮದ್ದು ಮಾಡಿ, ಉಪಯೋಗವಾಗದಿದ್ದಲ್ಲಿ, ಖಂಡಿತವಾಗಿಯೂ ವೈದ್ಯರ ಬಳಿ ಚಿಕಿತ್ಸೆ ಪಡೆಯಲೇಬೇಕು. ಹೆಚ್ಚು ಸಮಮಯ ವ್ಯಯಿಸಿದರೆ, ಜೀವಕ್ಕೆ ತೊಂದರೆ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

About The Author