Thursday, September 25, 2025

Latest Posts

ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್ಗಳಿದೆ..?

- Advertisement -

Health Tips: ಹಲ್ಲಿನ ಸಮಸ್ಯೆ ಬಗ್ಗೆ, ಟೂತ್ ಪೇಸ್ಟ್, ಟೂತ್ ಬ್ರಶ್ ಬಳಕೆ ಬಗ್ಗೆ, ಪ್ರತಿದಿನ ಎರಡು ಬಾರಿ ಬ್ರಶ್ ಮಾಡದೇ ಇದ್ದಲ್ಲಿ ಏನಾಗುತ್ತದೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ರೂಟ್ ಕೆನಲ್ ಅಂದ್ರೇನು..? ಯಾವೆಲ್ಲಾ ರೀತಿಯ ಕ್ಯಾಪ್‌ಗಳಿರುತ್ತದೆ ಅನ್ನೋ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ ನೋಡಿ..

ದಂತ ವೈದ್ಯರಾದ ಗೀತಿಕಾ ಈ ಬಗ್ಗೆ ವಿವರಿಸಿದ್ದು, ಜನ ಹಲ್ಲು ನೋವಾದಾಗಲಷ್ಟೇ ವೈದ್ಯರ ಬಳಿ ಬರುತ್ತಾರೆ. ಅಂದ್ರೆ ರೂಟ್‌ ಕೆನಲ್ ಸ್ಟೇಜ್‌ನಲ್ಲಿದ್ದಾಗ ನೋವಿನ ಅರಿವಾಗುತ್ತದೆ. ಆವಾಗಲೂ ರೋಗಿಗಳು ನಮ್ಮ ಬಳಿ ಬರುತ್ತಾರೆ. ಕ್ಯಾವಿಟಿ ಶುರುವಾದಾಗ, ನೋವು ಗೊತ್ತಾಗುವುದಿಲ್ಲ. ಆದರೆ ಕ್ಯಾವಿಟಿ ವಿಸ್ತರಿಸಿದಾಗ, ತುಂಬಾ ಹಲ್ಲು ನೋವಾಗುತ್ತದೆ. ಈ ವೇಳೆ ರೂಟ್ ಕೆನಲ್ ಚಿಕಿತ್ಸೆ ಮಾಡುವುದು ಅನಿವಾರ್ಯವಾಗಿರುತ್ತದೆ ಅಂತಾರೆ ವೈದ್ಯರು.

ರೂಟ್ ಕೆನೆಲ್ ಚಿಕಿತ್ಸೆಯಲ್ಲಿ ನಾವು ಕ್ಯಾವಿಟಿ ರಿಮೂವ್ ಮಾಡಿ, ಫಿಲ್ ಮಾಡಿ, ಕ್ಯಾಪ್ ಹಾಕುತ್ತೇವೆ. ಬೇರೆ ಬೇರೆ ರೀತಿಯ ಕ್ಯಾಪ್‌ಗಳು ಈಗ ಲಭ್ಯವಿದೆ. ಮೆಟಲ್‌, ಲೈಟ್ ವೇಟ್ ಕ್ಯಾಪ್‌ಗಳು ಮತ್ತು ಹಲ್ಲಿನಂತೆ ಇರುವ ಕ್ಯಾಪ್‌ಗಳು ಸೇರಿ, ಹಲವು ರೀತಿಯ ಕ್ಯಾಪ್‌ಗಳು ಲಭ್ಯವಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss