Thursday, April 3, 2025

Latest Posts

ಕೂದಲಿಗೆ ಮೊಸರು ಹಚ್ಚುವುದರಿಂದೇನು ಪ್ರಯೋಜನ..?

- Advertisement -

Health Tips: ಕೂದಲ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು. ಕೂದಲು ಗಟ್ಟಿಯಾಗಿರಬೇಕು ಅಂದ್ರೆ ಹೇಗೆ ಎಣ್ಣೆ ಬಳಸಬೇಕು..? ಯಾವ ಹೇರ್ ಪ್ಯಾಕ್ ಹಾಕಬೇಕು ಅನ್ನುವ ಬಗ್ಗೆ ನಾವು ನಿಮಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ನಾವು ಕೂದಲಿಗೆ ಮೊಸರು ಹಚ್ಚುವುದರಿಂದ ಏನು ಪ್ರಯೋಜನ ಎಂದು ಹೇಳಲಿದ್ದೇವೆ.

ಮೊಸರಿನ ಸೇವನೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆಯಬಹುದು. ದೇಹದಲ್ಲಿ ಉಷ್ಣತೆ  ಹೆಚ್ಚಾದಾಗ, ಮಲಬದ್ಧತೆ ಸಮಸ್ಯೆ ಉಂಟಾದಾಗ, ಹೊಟ್ಟೆ ನೋವಿನ ಸಮಸ್ಯೆ, ಅಜೀರ್ಣ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಮೊಸರಿನ ಸೇವನೆಯೇ ರಾಮಬಾಣ. ಮೊಸರು ದೇಹವನ್ನು ತಂಪಾಗಿರಿಸುವುದರ ಜೊತೆಗೆ. ನಮ್ಮ ಕೂದಲು ಗಟ್ಟಿಗೊಳ್ಳಲು ಸಹಕಾರಿಯಾಗಿದೆ. ಅಲ್ಲದೇ, ನಮ್ಮ ತ್ವಚೆ ಆರೋಗ್ಯವಾಗಿ, ಸಾಫ್ಟ್ ಆಗಿ ಇರಬೇಕು ಅಂದ್ರೆ, ನಾವು ಮೊಸರು ಸೇವಿಸಬೇಕು.

ಇನ್ನು ಕೂದಲಿಗೆ ಮೊಸರಿನಿಂದ ಮಸಾಜ್ ಮಾಡುವುದರಿಂದ, ಕೂದಲ ಬುಡ ಗಟ್ಟಿಗೊಳ್ಳುತ್ತದೆ. ಕೂದಲು ಉದುರುವುದು ನಿಲ್ಲುತ್ತದೆ. ಮತ್ತು ಕೂದಲು ಶೈನ್ ಆಗುತ್ತದೆ. ನಿಮಗೆ ನಾವು ಬನಾನಾ ಹೇರ್ ಪ್ಯಾಕ್ ಬಗ್ಗೆ ಹೇಳುವಾಗ, ಮೊಸರಿನೊಂದಿಗೆ ಬಾಳೆಹಣ್ಣು ಮಿಕ್ಸ್ ಮಾಡಿ, ಹೇರ್ ಪ್ಯಾಕ್ ಹಾಕಬೇಕು ಎಂದು ಹೇಳಿದ್ದೆವು. ಏಕೆಂದರೆ, ಕೂದಲು ಉದುರುವುದನ್ನು ತಡೆಯುವ ಮತ್ತು ತಲೆ ಹೊಟ್ಟಾಗದಂತೆ ಸಹಕರಿಸುವ ಗುಣ ಬಾಳೆಹಣ್ಣು ಮತ್ತು ಮೊಸರಿನಲ್ಲಿದೆ.

ಮೊಸರು ಮತ್ತು ಬಾಳೆಹಣ್ಣು, ಮೊಸರು ಮತ್ತು ಮೊಟ್ಟೆ, ಮೊಸರು ಮತ್ತು ನಿಂಬೆರಸ. ಈ ಮೂರರಲ್ಲಿ ಯಾವುದೇ ಹೇರ್ ಪ್ಯಾಕ್ ಹಾಕಿದ್ರು, ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇವೆಲ್ಲವೂ ಕೂದಲಿನ ಬುಡ ಗಟ್ಟಿಗೊಳಿಸಿ, ಕೂದಲು ಉದುರದಂತೆ ಕಾಪಾಡುತ್ತದೆ. ಕೂದಲು ಶೈನಿಯಾಗಿ, ಸಧೃಡವಾಗಿ ಬೆಳೆಯುತ್ತದೆ.

ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ..?

‘ಜೀನಿ ಕುಡಿದಿದ್ದರಿಂದ ದೇಹದಲ್ಲಿದ್ದ ಗಾಯಗಳು ಕೂಡ ಮಾಯವಾಗಿದೆ’

ಹುಟ್ಟುವ ಮಕ್ಕಳಲ್ಲಿ ಜಾಂಯ್ಡೀಸ್ ಖಾಯಿಲೆ ಯಾಕೆ ಬರುತ್ತದೆ..?

- Advertisement -

Latest Posts

Don't Miss