Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ ಉಬ್ಬುಸ ಬರಲು ಶುರುವಾಗುತ್ತದೆ. ಉಬ್ಬುಸವೆಂದರೆ, ಉಸಿರಾಟದ ಸಮಸ್ಯೆ. ಏದುಸಿರು ಬಿಡುವುದು. ಈ ಅಸ್ತಮಾ ಕೆಲವರಿಗೆ ಬಾಲ್ಯದಲ್ಲೇ ಬರುತ್ತದೆ. ಅದನ್ನು ಚೈಲ್ಡ್‌ಹುಡ್ ಅಸ್ತಮಾ ಎಂದು ಕರೆಯಲಾಗುತ್ತದೆ.
ಅಸ್ತಮಾ ರೋಗಕ್ಕೆ ಪರಿಹಾರ ಅಂದ್ರೆ, ಉತ್ತಮ ಚಿಕಿತ್ಸೆ ತೆಗೆದುಕೊಳ್ಳುವುದು. ಸ್ವಚ್ಛಂದವಾದ ಪರಿಸರದಲ್ಲಿ ವಾಸಿಸುವುದು. ಇನ್ನು ಮಕ್ಕಳಲ್ಲಿ ಅಸ್ತಮಾ ಲಕ್ಷಣಗಳು ಹೇಗಿರುತ್ತದೆ ಎಂದರೆ, ಪ್ರತಿದಿನ ಅವರಿಗೆ ಕೆಮ್ಮು- ನೆಗಡಿ ಇರುತ್ತದೆ. ಯಾವಾಗಲೂ ಮೂಗು ಸೋರುತ್ತಿರುತ್ತದೆ. ಆಡಿದಾಗ, ಓಡಿದಾಗ ಅತ್ತಾಗ ಸಿಕ್ಕಾಪಟ್ಟೆ ಕೆಮ್ಮುತ್ತಾರೆ. ಇಂಥ ಮಕ್ಕಳಿಗೆ ಅಸ್ತಮಾ ಬರುವ ಸಾಧ್ಯತೆ ಇದೆ. ಹಾಗಾಗಿ ಇಂಥ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಗರ್ಭಿಣಿಯರ ಹೊಟ್ಟೆ ಮೇಲಾಗುವ ಕಲೆ (ಸ್ಟ್ರೆಚ್ ಮಾರ್ಕ್) ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ..