Health Tips: ಶ್ವಾಸಕೋಶದ ಸಮಸ್ಯೆ ಬಂದಾಗ, ಅದನ್ನು ನಿರ್ಲಕ್ಷಿಸಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ, ಈ ಸಣ್ಣ ಸಮಸ್ಯೆಯೇ ಮುಂದೆ ಲಂಗ್ ಕ್ಯಾನ್ಸರ್ ಆಗಿ ಮಾರ್ಪಾಡಾಗುತ್ತದೆ. ಹಾಗಾದ್ರೆ ಲಂಗ್ ಕ್ಯಾನ್ಸರ್ಗೆ ಕಾರಣವೇನು..? ಇದು ಹೇಗೆ ಬರುತ್ತದೆ ಅಂತಾ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ಅಸ್ತಮಾ ಮತ್ತು ಲಂಗ್ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ. ಲಂಗ್ ಕ್ಯಾನ್ಸರ್ ಎಂದರೆ, ಶ್ವಾಸಕೋಶದಲ್ಲಿ ಅಬ್ನಾರ್ಮಲ್ ಸೆಲ್ಸ್ ಇರುತ್ತದೆ. ಅದೇ ಟ್ಯೂಮರ್ ಆಗುತ್ತದೆ. ಇದು ಧೂಳಿನಿಂದಲೂ ಬರಬಹುದು. ಅಥವಾ ಅನುವಂಶಿಕವಾಗಿ, ಅಂದರೆ ಕುಟುಂಬದಲ್ಲಿ ಒಬ್ಬರಿಗೆ ಲಂಗ್ ಕ್ಯಾನ್ಸರ್ ಇದ್ದರೆ, ಅದೇ ರೀತಿ ಮತ್ತೊಬ್ಬರಿಗೆ ಹೀಗೆ ಆಗಬಹುದು.
ಲಂಗ್ ಕ್ಯಾನ್ಸರ್ ಬರಲು ಅತೀ ಮುಖ್ಯವಾದ ಕಾರಣ ಅಂದ್ರೆ ಧೂಮಪಾನ ಮಾಡುವುದು. ಯಾರು ಹೆಚ್ಚು ಧೂಮಪಾನ ಮಾಡುತ್ತಾರೋ, ಅವರಿಗೆ ಲಂಗ್ ಕ್ಯಾನ್ಸರ್ ಬರುತ್ತದೆ. ಆದರೆ ಅದನ್ನು ಹಲವರು ಕಡೆಗಣಿಸುತ್ತಾರೆ. ಹಾಗಾಗಿ ಸ್ಟೇಜ್ ಒನ್‌ನಲ್ಲಿರುವಾಗ ವೈದ್ಯರ ಬಳಿ ಚಿಕಿತ್ಸೆಗೆ ಬರುವುದು ತುಂಬಾ ಕಡಿಮೆ. ಕ್ಯಾನ್ಸರ್ ಸ್ಟೇಜ್ 3ಗೆ ತಲುಪಿದಾಗ, ರೋಗಿಗಳು ವೈದ್ಯರ ಬಳಿ ಬರುತ್ತಾರೆ. ಹಾಗಾಗಿ ಹೆಚ್ಚಿನವರ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..
ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..
ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..
ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ