Health Tips: ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿಗೂ ನ್ಯುಮೋನಿಯಾ ಬರುತ್ತಿದೆ. ಈ ರೋಗದ ಲಕ್ಷಣ ಅಂದ್ರೆ ಶ್ವಾಸಕೋಶದ ಸಮಸ್ಯೆ. ಶ್ವಾಸಕೋಶದಲ್ಲಿ ಆಗುವ ಇನ್‌ಫೆಕ್ಷನ್‌ನಿಂದ ಆರೋಗ್ಯ ಹದಗೆಡುತ್ತದೆ. ಕಫ ಕಟ್ಟುತ್ತದೆ. ಉಸಿರಾಡಲು ಕಷ್ಟವಾಗುತ್ತದೆ. ಇವಿಷ್ಟು ನ್ಯುಮೋನಿಯಾ ರೋಗದ ಲಕ್ಷಣ. ಇದು ಯಾಕೆ ಹೆಚ್ಚಾಗಿ ಮಕ್ಕಳಿಗೆ ಬರುತ್ತದೆ ಎಂಬ ಬಗ್ಗೆ ಮಕ್ಕಳ ತಜ್ಞರಾದ ಡಾ. ಸುರೇಂದ್ರ ಮಾತನಾಡಿದ್ದಾರೆ.
ಮಕ್ಕಳಿಗೆ ಶೀತ ನೆಗಡಿಯಾದಾಗ, ಬೇಗ ಚಿಕಿತ್ಸೆ ಕೊಡಿಸಬೇಕು. ಮಗುವಿಗೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ, ಆ ಜ್ವರ ನ್ಯುಮೋನಿಯಾ ಆಗಿ ಬದಲಾಗುತ್ತದೆ. ಆಗ ನೀವು ವೈದ್ಯರ ಬಳಿ ಹೋಗಲೇಬೇಕಾಗುತ್ತದೆ. ಯಾಕೆ ಈ ಬಗ್ಗೆ ನೀವು ಮುನ್ನಚ್ಚೆರಿಕೆ ವಹಿಸಲೇಬೇಕು ಎಂದರೆ, ಇದು ನಿಮ್ಮ ಮಗುವಿನ ಜೀವಕ್ಕೆ ಕುತ್ತು ತರುತ್ತದೆ. ಉಸಿರಾಟದ ಸಮಸ್ಯೆ ಆಗುವ ಕಾರಣಕ್ಕೆ, ನೀವು ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಲೇಬಾರದು.
ಇನ್ನು ಹೇಗೆ ನ್ಯುಮೋನಿಯಾ ಬರುತ್ತದೆ ಎಂದರೆ, ಮಕ್ಕಳು ಶಾಲೆಗೆ ಹೋಗುತ್ತಾರೆ. ಅಲ್ಲಿ ಯಾವುದಾದರೂ ಮಗುವಿಗೆ ಶೀತ ಬಂದಿದ್ದರೆ, ಆ ಶೀತ ಇನ್ನುಳಿದ ಮಕ್ಕಳಿಗೆ ಹರಡುತ್ತದೆ. ಹೀಗೆ ಹರಡಿದಾಗ, ಆ ಶೀತ, ಜ್ವರವೇ ಕೊನೆಗೆ ನ್ಯುಮೋನಿಯಾ ಆಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..