ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?

Health Tips: ಮೊದಲಿನ ದಿನಗಳಲ್ಲಿ ಮಕ್ಕಳಾಗದವರು ಬಹಳ ಅಪರೂಪವಾಗಿರುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ, ಜೀವನ ರೀತಿ ಉತ್ತಮವಾಗಿತ್ತು. ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿರಲಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡೇ, ದೇಹದ ತೂಕ ಮೆಂಟೇನ್ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ, ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?ಅನ್ನೋ ಬಗ್ಗೆ ಡಾ..ಚಂದ್ರಿಕಾ ವಿವರಿಸಿದ್ದಾರೆ. ತಿಳಿಯೋಣ ಬನ್ನಿ..

ಇತ್ತೀಚಿನ ದಿನಗಳಲ್ಲಿ ಗರ್ಭಧಾರಣೆಯ ಸಮಸ್ಯೆ ಬರಲು ಕಾರಣ ಲೈಫ್ ಸ್ಟೈಲ್. ವಿದೇಶಿ ಜೀವನನೀತಿಯನ್ನು ಅಳವಡಿಸಿಕೊಳ್ಳುವ ಗೋಜಿಗೆ ಹೋಗಿ, ಜನ ಸಂತಾನ ಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತಾರೆ ವೈದ್ಯರು. ಮೊದಲೆಲ್ಲ 21ನೇ ವಯಸ್ಸಿಗೆ ಮದುವೆಯಾಗಿ, 25ನೇ ವಯಸ್ಸಿಗೆ ಎರಡು ಮಕ್ಕಳಾಗಿ, ಆಪರೇಶನ್ ಕೂಡ ಮುಗಿದು ಹೋಗಿರುತ್ತಿತ್ತು.

ಅದಕ್ಕೆ ಅಂದಿನ ಕಾಲದಲ್ಲಿ ಬಂಜೆತನ ಅನ್ನೋದು ಹೆಚ್ಚಾಗಿ ಇರಲಿಲ್ಲ. ಆದರೆ ಇಂದಿನ ಕಾಲದಲ್ಲಿ ವಯಸ್ಸು ಮೂವತ್ತಾದರೂ ಎಷ್ಟೋ ಹೆಣ್ಣು ಮಕ್ಕಳು ಮದುವೆಯಾಗುವುದಿಲ್ಲ. ಮೂವತ್ತರ ಬಳಿಕ ಮದುವೆಯಾಗಿ ಮಕ್ಕಳಾಗುವ ಹೊತ್ತಿಗೆ ಅವರ ದೇಹದಲ್ಲಿುವ ಮೊಟ್ಟೆಯ ಕ್ವಾಲಿಟಿ ಕಡಿಮೆಯಾಗಿರುತ್ತದೆ. ಹಾಗಾಗಿ ಬಂಜೆತನದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪುರುಷರಲ್ಲಿ ಸ್ಪರ್ಮ್ ಕ್ವಾಲಿಟಿ ಕ್ಷೀಣಿಸುತ್ತದೆ.

ತಾವು ಕಲಿತು, ಭವಿಷ್ಯ ರೂಪಿಸಿಕೊಳ್ಳಬೇಕು ಅನ್ನೋ ಆಸೆ ಇದಕ್ಕೆ ಕಾರಣವಾಗಿರುತ್ತದೆ. ಅಲ್ಲದೇ, ಅರ್ಬನ್ ಲೈಫ್‌ನಲ್ಲಿ ಅಡುಗೆ ಮಾಡಿಕೊಂಡು ತಿನ್ನುವವರು ಕಡಿಮೆ. ಆರ್ಡರ್ ಮಾಡಿ ತಿನ್ನುತ್ತಿದ್ದಾರೆ. ಇದರಿಂದಲೇ, ಆರೋಗ್ಯ ಹಾಳಾಗುತ್ತಿದೆ. ಈ ಕಾರಣಕ್ಕೆ ಬಂಜೆತನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author