ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದೇ ರೀತಿ ಅಂತ್ಯ ಸಂಸ್ಕಾರದ ವೇಳೆಯೇ ಕೆಲ ಪದ್ಧತಿಯನ್ನು ನಾವು ಅನುಸರಿಸಬೇಕಾಗುತ್ತದೆ. ಅದರಲ್ಲಿ ಶವದ ತಲೆಗೆ 3 ಬಾರಿ ಕೋಲಿನಿಂದ ಹೊಡೆಯುದು. ಹಾಗಾದ್ರೆ ಈ ಪದ್ಧತಿ ಹಿಂದಿರುವ ಸತ್ಯವೇನು..? ಯಾಕೆ ಹೀಗೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..?
ಓರ್ವ ಮನುಷ್ಯನಿಗೆ ಉತ್ತಮ ಜೀವನ ಸಿಗಬೇಕು. ಉತ್ತಮ ಕುಲದಲ್ಲಿ ಅವನು ಜನಿಸಬೇಕು ಅಂತಂದ್ರೆ, ಹಿಂದಿನ ಜನ್ಮದಲ್ಲಿ ಅವನ ಮನೆಜನರು ಅವನ ಅಂತ್ಯ ಸಂಸ್ಕಾರವನ್ನು ಸರಿಯಾಗಿ ಮಾಡಿರಬೇಕು. ಹಾಗೆ ಮಾಡಿದರಷ್ಟೇ ಅವನಿಗೆ ಮುಂದಿನ ಜನ್ಮದಲ್ಲಿ ಉತ್ತಮ ಕುಲದಲ್ಲಿ, ಉತ್ತಮ ರೀತಿಯಲ್ಲಿ ಜನ್ಮ ಸಿಗುತ್ತದೆ. ಹಾಗಾಗಿ ಓರ್ವ ಮನುಷ್ಯನ ಅಂತ್ಯಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಮಾಡುವುದು ತುಂಬಾ ಮುಖ್ಯವಾಗಿದೆ.
ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ..?
ಅದರಲ್ಲೂ ಅಂತ್ಯಸಂಸ್ಕಾರದ ವೇಳೆ ಇಡೀ ದೇಹ ಸರಿಯಾಗಿ ಸುಟ್ಟು ಹೋಗಬೇಕು. ದೇಹ ಅರ್ಧಂಬರ್ಧ ಸುಟ್ಟರೆ, ಆ ಅಂತ್ಯಸಂಸ್ಕಾರ ಮಾಡಿದ್ದೂ ವ್ಯರ್ಥವಾಗುತ್ತದೆ. ಹಾಗಾಗಿ ಪೂರ್ತಿ ದೇಹ ಸುಡಬೇಕು. ಆದ್ದರಿಂದಲೇ ಇಡೀ ದೇಹಕ್ಕೆ ಬೆಂಕಿ ಕೊಟ್ಟ ಬಳಿಕ, ತಲೆಯ ಭಾಗಕ್ಕೆ ತುಪ್ಪ ಸುರಿದು, ಬೆಂಕಿ ಹಚ್ಚಲಾಗತ್ತೆ. ಯಾಕಂದ್ರೆ ಮನುಷ್ಯನ ತಲೆಯ ಭಾಗ ಗಟ್ಟಿಯಾಗಿದ್ದು, ಅದನ್ನು ಒಡೆಯುವುದು ಅಷ್ಟು ಸುಲಭವಲ್ಲ.
ಶಿವನಿಗೆ ಮೂರನೇ ಕಣ್ಣು ಬಂದಿದ್ದು ಹೇಗೆ..? ಇದು ಯಾರ ತಪ್ಪಿನಿಂದ ಉದ್ಭವವಾದ ಕಣ್ಣು..?
ಇದನ್ನು ಕಪಾಲ ಕ್ರಿಯೆ ಎನ್ನಲಾಗುತ್ತದೆ. ಶವದ ತಲೆ ಒಡೆಯದಿದ್ದರೆ, ಮುಂದಿನ ಜನ್ಮದಲ್ಲಿ ಅವನ ಬೆಳವಣಿಗೆ ಕುಂಠಿತವಾಗಬಹುದು, ಅಥವಾ ಅವನು ಜನ್ಮ ಪಡೆಯಲು ತೊಂದರೆಯಾಗಬಹುದು ಎಂಬ ಕಾರಣಕ್ಕೆ, ಕಪಾಲ ಕ್ರಿಯೆಯನ್ನು ಸರಿಯಾಗಿ ಮಾಡಲಾಗುತ್ತದೆ. ಏನೇ ಮಾಡಿದರೂ, ತಲೆ ಒಡೆಯದಿದ್ದಲ್ಲಿ, ಕೋಲಿನಿಂದ ಹೊಡೆಯಲಾಗುತ್ತದೆ. ಇದ್ಯಾವುದೂ ಮಾಡದೇ, ಶವಕ್ಕೆ ಅಗ್ನಿ ಕೊಟ್ಟ ಮೇಲೆ, ತಾನಾಗಿಯೇ ಆ ಶವದ ತಲೆ ಒಡೆದು ಅದರ ಶಬ್ದ ಬಂದರೆ, ಅವನಿಗೆ ಮುಂದೆ ಉತ್ತಮ ಜನ್ಮ ಸಿಗುತ್ತದೆ. ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ ನಡೆದಿದೆ ಎಂದರ್ಥ.