Health Tips: ಹಲವು ಪುರುಷರ ಎದೆ ಹೆಣ್ಣು ಮಕ್ಕಳ ಎದೆಯಂತೆ ದಪ್ಪಗಿರುತ್ತದೆ. ಕೆಲವರು ಜಿಮ್‌ಗೆ ಹೋಗಿ ಹಾಗೆ ಆಗಿರುತ್ತದೆ. ಮತ್ತೆ ಕೆಲವರದ್ದು ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ರೀತಿಯಾಗುವುದನ್ನು ಗೈನೊಕೋಮ್ಯಾಸ್ಟೀಯಾ ಎನ್ನಲಾಗುತ್ತದೆ. ಗಂಡು ಹೆಣ್ಣು ಇಬ್ಬರಿಗೂ ಎದೆ ಭಾಗ ಸೇಮ್ ಇರುತ್ತದೆ. ಆದರೆ ಹೆಣ್ಣು ಮಕ್ಕಳಲ್ಲಿ ಹಾಲು ಉತ್ಪತ್ತಿಯಾಗುವ ಗ್ರಂಥವಿರುತ್ತದೆ. ಮತ್ತು ಪುರುಷರಲ್ಲಿ ಈ ಗ್ರಂಥಿ ಇರುವುದಿಲ್ಲ. ಆದರೂ ಕೂಡ ಕೆಲ ಗಂಡಸರ ಎದೆ ದಪ್ಪಗಾಗಿರುತ್ತದೆ. ಇದನ್ನೇ ವೈದ್ಯರು ಗೈನೊಕೋಮ್ಯಾಸ್ಟಿಯಾ ಎಂದು ಕರೆಯುತ್ತಾರೆ.
ಹೆಣ್ಣು ಮಕ್ಕಳಲ್ಲಿ ಬರಬೇಕಾದ ಹಾರ್ಮೋನುಗಳು ಗಂಡಸರಲ್ಲಿ ಬರುತ್ತದೆ. ಈ ವೇಳೆ ಗಂಡಸರ ಎದೆ ಭಾಗ ದೊಡ್ಡದಾಗುತ್ತದೆ. ಹೀಗಿರುವವರು ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಉತ್ತಮ. ಏಕೆಂದರೆ ಇದೊಂದು ಮೇಜರ್ ಪ್ರಾಬ್ಲಂ ಎನ್ನುತ್ತಾರೆ ವೈದ್ಯರು.
ಕೆಲವರ ಶರೀರ ದಪ್ಪವಾಗಿರುವ ಕಾರಣಕ್ಕೆ, ಈ ರೀತಿ ಎದೆ ದಪ್ಪವಿರಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಅದು ತಪ್ಪು. ಬರೀ ದಪ್ಪವಿದ್ದವರಿಗಷ್ಟೇ ಅಲ್ಲದೇ, ಸಣ್ಣ ಇದ್ದವರಿಗೂ ಎದೆ ಭಾಗ ದಪ್ಪವಿರುತ್ತದೆ. ಅಂಥವರು, ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಅಲ್ಲಿ ಸಮಸ್ಯೆ ಇದ್ದರೆ, ವೈದ್ಯರು ಚಿಕಿತ್ಸೆ ಕೊಟ್ಟು ಸಮಸ್ಯೆಗೆ ಪರಿಹಾರ ನೀಡುತ್ತಾರೆ.
ಆದರೆ ಕೆಲವರು ಈ ಸಮಸ್ಯೆಯನ್ನು ಹೇಳಿಕೊಳ್ಳಲು ಮುಜುಗರ ಪಟ್ಟು, ಆ ಸಮಸ್ಯೆ ದೊಡ್ಡದಾಗಿ, ಮಿತಿ ಮೀರಿ ಹೋದಾಗ ಚಿಕಿತ್ಸೆಗೆ ಬರುತ್ತಾರೆ. ಹೀಗೆ ಮಾಡಿದಾಗ, ಸರಿಯಾದ ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ಹಾಗಾಗಿ ಈ ಸಮಸ್ಯೆ ಇದೆ ಎಂದು ಗೊತ್ತಾದಾಗಲೇ, ಪುರುಷರು ವೈದ್ಯರ ಬಳಿ ಬಂದು ಪರೀಕ್ಷಿಸಿಕೊಳ್ಳಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..