Health Tips: ನಮಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಬರುವುದೇ ಚಳಿಗಾರದಲ್ಲಿ. ಕೂದಲು ಉದುರುವುದು, ಚರ್ಮ ಒಣಗುವುದು, ತುಟಿ ಒಣಗುವುದು, ಕೈ ಕಾಲು ನೋವು ಸೇರಿ, ಹಲವು ಆರೋಗ್ಯ ಸಮಸ್ಯೆಗಳು ಬರುವುದೇ ಚಳಿಗಾಲದಲ್ಲಿ. ಹಾಗಾದ್ರೆ ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ ಅಂತಾ ತಿಳಿಯೋಣ ಬನ್ನಿ..
ಯಾಕೆ ಚಳಿಗಾಲದಲ್ಲಿ ಹೆಚ್ಚು ಮೈ ಕೈ ನೋವಾಗುತ್ತದೆ ಅಂದ್ರೆ, ಚಳಿಗಾಲದಲ್ಲಿ ಹೆಚ್ಚು ಚಳಿಯಾಗುವುದರಿಂದ ದೇಹದಲ್ಲಿ ರಕ್ತ ಸಂಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಕೈ ಕಾಲು ನೋವು, ಮಂಡಿ ನೋವು ಹೆಚ್ಚಾಗುತ್ತದೆ. ಹಾಗಾಗಿ ಪ್ರತಿದಿನ ವಾಕಿಂಗ್, ವಾರ್ಮಪ್ ಮಾಡುವುದು ತುಂಬಾ ಮುಖ್ಯ. ನೀವು ಬೆಳಿಗ್ಗೆ ಯಾವುದೇ ವ್ಯಾಯಾಮ ಮಾಡದೇ, ಡೈರೆಕ್ಟ್ ಮನೆಗೆಲಸ ಮಾಡಲು ಶುರು ಮಾಡಿದಾಗ, ಆ ಭಾರಕ್ಕೆ ನಿಮಗೆ ಮೈ ಕೈ ನೋವು ಹೆಚ್ಚಾಗುತ್ತದೆ.
ಅಥವಾ ನೀವು ಜಿಮ್‌ಗೆ ಹೋಗುವವರಾಗಿದ್ದರೂ, ಜಿಮ್‌ಗೆ ಹೋಗುವ ಮುನ್ನ ಸ್ವಲ್ಪ ವಾರ್ಮಪ್ ಮಾಡಲೇಬೇಕು ಅೞತಾರೆ ವೈದ್ಯರು. ಹೀಗೆ ಮಾಡುವುದರಿಂದ ಮೈ ಕೈ ಸಡಿಲವಾಗುತ್ತದೆ. ರಕ್ತ ಸಂಚಲನೆ ಸರಿಯಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..