Wednesday, June 18, 2025

Latest Posts

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

- Advertisement -

Health Tips: ಎಲ್ಲಕ್ಕಿಂತ ಮುಖ್ಯವಾದ ಆರೋಗ್ಯ ಅಂದ್ರೆ ಹೃದಯದ ಆರೋಗ್ಯ. ನಾವು ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಂಡಲ್ಲಿ, ಗಟ್ಟಿಮುಟ್ಟಾಗಿ ಸಧೃಡವಾಗಿ ಇರುತ್ತೇವೆ. ಇಲ್ಲವಾದಲ್ಲಿ, ನಮಗೆ ಕೆಲಸ ಮಾಡಲು, ಓಡಾಡಲು ಕೂಡ ಕಷ್ಟವಾಗುತ್ತದೆ. ಇನ್ನು ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯೂ ಕಾರಣವಾಗಿದೆ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆ ಅಂತಾ ತಿಳಿಯೋಣ ಬನ್ನಿ..

ಕೆಲವರಿಗೆ ಕೋವಿಡ್ ಬಂದ ಬಳಿಕ ಹಾರ್ಟ್ ಅಟ್ಯಾಕ್ ಹೆಚ್ಚಾಗಿದೆ ಅನ್ನ್ನೋ ಕಲ್ಪನೆ ಇದೆ. ಇದು ನಿಜವೂ ಹೌದು. ಕೆಲವರಿಗೆ ಮಾನಸಿಕ ಒತ್ತಡ ಕಾಣಿಸಿಕೊಂಡು, ಈ ರೀತಿ ಹೃದಯಾಘಾತವಾಗುತ್ತದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ, ಹೃದಯಾಘಾತವಾಗುತ್ತದೆ. ಕೋರೋನಾ ಸಮಯದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಿತ್ತು.

ಇಷ್ಟೇ ಅಲ್ಲದೇ, ಇಂದಿನ ಕಾಲದಲ್ಲಿ ನಡಿಗೆ, ಮನೆಗೆಲಸ, ವ್ಯಾಯಾಮ ಮಾಡುವವರ ಸಂಖ್ಯೆಯೂ ಕಡಿಮೆ. ಬೆಳಿಗ್ಗೆ ಎದ್ದ ತಕ್ಷಣ ರೆಡಿಯಾಗಿ, ಕೆಲಸಕ್ಕೆ ಹೋದರೆ, ರಾತ್ರಿ ಮನೆಗೆ ಬಂದು,. ಊಟ ಮಾಡಿ ನಿದ್ರೆ ಮಾಡುತ್ತಾರೆ. ಮತ್ತೆ ಮರುದಿನ ಅದೇ ಕಥೆ. ಹೀಗಾಗಿ ತಪ್ಪು ಜೀವನನ ಶೈಲಿಯಿಂದ, ಹೃದಯಾಘಾತ ಹೆಚ್ಚಾಗಿದೆ.

ಅಷ್ಟೇ ಅಲ್ಲದೇ, ನಡಿಗೆಯ ಬದಲು, ಕಾರ್, ಬೈಕ್, ಸ್ಕೂಟರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ದೇಹಕ್ಕೆ ವ್ಯಾಯಾಮ ಸಿಗುತ್ತಿಲ್ಲ. ಈ ಕಾರಣಕ್ಕೆ ದೇಹದ ಅಂಗಾಂಗಗಳು ಆ್ಯಕ್ಟಿವ್ ಆಗಿ ಇರಲು ಸಾಧ್ಯವಾಗುವುದಿಲ್ಲ. ಆಗಲೇ, ರಕ್ತನಾಳಗಳಲ್ಲಿ ರಕ್ತಸಂಚಾರ ಸರಿಯಾಗಿ ಆಗದೇ, ಹೃದಯಾಘಾತವಾಗುವುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

ಸರ್ಪ ಸುತ್ತಿಗೆ ಯಾವ ಔಷಧಿ ಸೂಕ್ತ..? ನಾಟಿ ಔಷಧಿಯೋ..? ಇಂಗ್ಲೀಷ್ ಔಷಧಿಯೋ..?

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

ಚರ್ಮ ಕಸಿ ಹೇಗೆ ಮಾಡಲಾಗುತ್ತದೆ..?

- Advertisement -

Latest Posts

Don't Miss