Thursday, September 19, 2024

Latest Posts

ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?

- Advertisement -

Spiritual: ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೇವರ ನಾಮ ಹೇಳಬಾರದು. ದೇವರ ಪೂಜೆ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದರೆ ಇದಕ್ಕೆ ಇರುವ ಕಾರಣವೇನು..? ಯಾಕೆ ಮುಟ್ಟಾದ ಹೆಣ್ಣು ಮಕ್ಕಳು, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ತಿಳಿಯೋಣ ಬನ್ನಿ..

ಭಾರತೀಯ ಪೂರ್ವಜರು, ಈ ಲೋಕದ ಭವಿಷ್ಯದ ಬಗ್ಗೆ ಯೋಚನೆ ಮಾಡಿಯೇ, ಹಲವು ಪದ್ಧತಿಗಳನ್ನು ಹುಟ್ಟುಹಾಕಿದ್ದರು. ಹಲವು ಗ್ರಂಥಗಳನ್ನು ಬರೆದಿದ್ದರು. ಅಂಥ ಪದ್ಧತಿಗಳಲ್ಲಿ, ಮುಟ್ಟಾದ ಹೆಣ್ಣು ಮಕ್ಕಳು ನಾಲ್ಕು ದಿನಗಳವರೆಗೆ, ಯಾರನ್ನೂ ಮುಟ್ಟಬಾರದು. ಎಲ್ಲೂ ಹೋಗಬಾರದು. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಬಾರದು. ಯಾವುದೇ ಶ್ಲೋಕಗಳನ್ನು ಪಠಿಸಬಾರದು. ಆಕೆಗಾಗಿಯೇ ಸಪರೇಟ್ ಆಗಿರುವ ಚಾಪೆ, ದಿಂಪು, ಪ್ಲೇಟು, ಲೋಟಗಳನ್ನು ಇಡಬೇಕು. ನಾಲ್ಕನೇಯ ದಿನ ಶುದ್ಧವಾದ ಬಳಿಕ, ಸೆಗಣಿಯಿಂದ ಆಕೆ ಇದ್ದ ಜಾಗವನ್ನು ಒರೆಸಿ, ಗೋಮೂತ್ರವನ್ನು ಹಾಕಿ ಶುದ್ಧಗೊಳಿಸಿ, ಆಕೆ ಬಳಸಿದ ವಸ್ತುವನ್ನು ಆಕೆಗೆ ಸ್ವಚ್ಛ ಮಾಡಬೇಕು. ಬಳಿಕ ಅರಿಶಿನ ಬಳಸಿ, ತಲೆಸ್ನಾನ ಮಾಡಿ, ಶುದ್ಧವಾಗಬೇಕು ಅನ್ನುವ ಪದ್ಧತಿ ಇದೆ.

ಆದರೆ ಹೆಣ್ಣು ಮಕ್ಕಳು ಸಾಲೆ ಕಾಲೇಜಿಗೆ ಹೋಗಲು ಶುರುವಾದ ಮೇಲೆ ಈ ಪದ್ಧತಿಯನ್ನು ಯಾರೂ ಅನುಸರಿಸುತ್ತಿಲ್ಲ. ತೀರಾ ವಿರಳವಾಗಿ ಈ ಪದ್ಧತಿಯನ್ನು ಅನುಸರಿಸುವವರಿದ್ದಾರಷ್ಟೇ. ಆದರೆ ಯಾಕೆ ಹೀಗೆಲ್ಲ ಮಾಡುತ್ತಿದ್ದರು ಅನ್ನೋ ಬಗ್ಗೆ ವೈಜ್ಞಾನಿಕ ಕಾರಣಗಳಿದೆ. ಹಿಂದೆಲ್ಲ ಈ ಪದ್ಧತಿಯನ್ನು ಅನುಸರಿಸುತ್ತಿದ್ದ ಮಹಿಳೆಯರು, ವಿದೇಶಿ ಮಹಿಳೆಯರಿಗಿಂತ ಆರೋಗ್ಯವಂತರಾಗಿದ್ದರು.

ವಿದೇಶಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಮಾಡುವ ನಿರ್ಲಕ್ಷ್ಯದಿಂದ, ಅವರಿಗೆ ರೋಗ ಬರುತ್ತಿತ್ತು. ಆದರೆ ಈ ಪದ್ಧತಿಯನ್ನು ಪಾಲಿಸುವ ಹೆಣ್ಣು ಮಕ್ಕಳಿಗೆ, ರೋಗ ರುಜಿನಗಳು ಬರುತ್ತಿರಲಿಲ್ಲ. ಸಂತಾನ ಸಮಸ್ಯೆ ಆಗುತ್ತಿರಲಿಲ್ಲ. ಏಕೆಂದರೆ, ಹೆಣ್ಣು ಮಕ್ಕಳು ಸಪರೇಟ್ ಆಗಿರುವ ತಟ್ಟೆ, ಲೋಟ, ಚಾಪೆ, ದಿಂಬು ಬಳಸುವ ಕಾರಣಕ್ಕೆ, ಆಕೆಯಿಂದ ಯಾರಿಗೂ ರೋಗ ಹರಡುತ್ತಿರಲಿಲ್ಲ.

ಅಲ್ಲದೇ, ಯಾವುದೇ ಕೆಲಸ ಮಾಡದೇ, ಎಲ್ಲೂ ಹೋಗದೇ, ಆಕೆ 4 ದಿನ ಕೋಣೆಯೊಳಗೆ ಇದ್ದುದರಿಂದ ಆಕೆ, ಅನಾರೋಗ್ಯದಿಂದ ದೂರವಿರುತ್ತಿದ್ದಳು. ಪ್ರತಿದಿನ ತಾನು ಇರುವ ಜಾಗವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸುತ್ತಿದ್ದ ಕಾರಣ, ಆ ಸ್ಥಳ ಆರೋಗ್ಯಕರವಾಗಿರುತ್ತಿತ್ತು. ಮತ್ತು ಆಕೆ ಬಳಸುವ ಬಟ್ಟೆಯನ್ನು ಬಿಸಿ ನೀರಿನಿಂದ ತೊಳೆಯಲಾಗುತ್ತಿತ್ತು.

ಅಲ್ಲದೇ ಆ 4 ದಿನ ಯಾವುದೇ ಕೆಲಸ ಮಾಡದ ಕಾರಣ, ಆಕೆಗೆ ರೆಸ್ಟ್ ಸಿಗುತ್ತಿತ್ತು. ಈ ವೇಳೆ ಶ್ಲೋಕ ಹೇಳಲು, ಪೂಜೆ ಮಾಡಲು, ದೇವಸ್ಥಾನದ ತನಕ ಹೋಗಲು ತೊಂದರೆಯಾಗುತ್ತದೆ. ದೈಹಿಕವಾಗಿ ಹೆಣ್ಣು ದಣಿದಿರುತ್ತಾಳೆ. ಈ ಎಲ್ಲ ಕಾರಣಕ್ಕೆ, ಪೂರ್ವಜರು ಇಂಥ ನಿಯಮಗಳನ್ನು ಅನುಸರಿಸುತ್ತಿದ್ದರು.

ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

ಈ ಸಮಯದಲ್ಲಿ ಎಂದಿಗೂ ಕಸ ಗುಡಿಸಬಾರದು.. ಇದರಿಂದ ದರಿದ್ರ ಸಂಭವಿಸುವ ಸಾಧ್ಯತೆ ಹೆಚ್ಚು..

- Advertisement -

Latest Posts

Don't Miss