Tuesday, July 1, 2025

Latest Posts

ಪೂಜಾ ಸಮಯದಲ್ಲಿ ಕೆಂಪು ಉಡುಪನ್ನೇ ಧರಿಸಬೇಕು ಎನ್ನಲು ಕಾರಣವೇನು..?

- Advertisement -

Spiritual Story: ಕೆಲವರು ಪೂಜೆಯ ಸಮಯದಲ್ಲಿ ಕೆಂಪು ವಸ್ತ್ರವನ್ನು ಧರಿಸುತ್ತಾರೆ. ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಂಪು ಉಡುಪು, ಸೀರೆಯನ್ನು ಧರಿಸುವ ಪದ್ಧತಿ ಇದೆ. ಶುಭಕಾರ್ಯಗಳಲ್ಲಿ, ಪೂಜೆ, ಹೋಮ ಹವನದ ಸಂದರ್ಭದಲ್ಲಿ ಕೆಂಪು ಬಟ್ಟೆ ಧರಿಸುವ ನಿಯಮ ಕೆಲವೆಡೆ ಇದೆ. ಹಾಗಾದ್ರೆ ಕೆಂಪು ವಸ್ತ್ರವನ್ನು ದೇವರ ಕಾರ್ಯದಲ್ಲಿ ಧರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಕೆಂಪು ಬಣ್ಣದ ಉಡುಪು ಶುಕ್ರನ ಸ್ಥಾನವನ್ನು ಬಲಪಡಿಸಲು ಉಪಯೋಗವಾಗುತ್ತದೆ. ಹಾಗಾಗಿ ಶುಕ್ರವಾರದ ದಿನ ನೀವು ಕೆಂಪು ಉಡುಪು ಧರಿಸಿದರೆ, ನಿಮ್ಮ ಜಾತಕದಲ್ಲಿ ಶುಕ್ರನ ಸ್ಥಾನ ಬಲಗೊಳ್ಳುತ್ತದೆ. ಇನ್ನು ಕೆಂಪು ಅನ್ನೋದು, ಪ್ರೀತಿ, ಧೈರ್ಯದ ಸಂಕೇತ. ಹೀಗಾಗಿ ದೇವಿಯ ಪೂಜೆಯಲ್ಲಿ ಹೆಚ್ಚಾಗಿ, ಕೆಂಪು ಬಣ್ಣದ ಬಟ್ಟೆಯನ್ನು ಧರಿಸಲಾಗುತ್ತದೆ. ಕೆಲವೊಮ್ಮೆ ಪುರೋಹಿತರು ಕೂಡ ಕೆಂಪು ಬಣ್ಣದ ವಸ್ತ್ರವನ್ನೇ ಧರಿಸುತ್ತಾರೆ. ಮತ್ತು ಪೂಜೆ ಮಾಡುವ ಮನೆ ಯಜಮಾನನೂ ಕೂಡ ಕೆಂಪು ಬಣ್ಣದ ವಸ್ತ್ರವನ್ನೇ ಧರಿಸಬೇಕು ಎಂಬ ನಿಯಮವಿದೆ.

ಇನ್ನು ಕೆಂಪು ಬಟ್ಟೆಯನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಒಟ್ಟಾರೆ ಕೆಂಪು ಬಣ್ಣ ಶ್ರೇಷ್ಠವಾದ ಕಾರಣ, ಅದನ್ನು ಪೂಜೆ ಸೇರಿ ಹಲವು ಶುಭಕಾರ್ಯದಲ್ಲಿ ಬಳಸಲಾಗುತ್ತದೆ. ಇನ್ನು ಲಕ್ಷ್ಮೀ ದೇವಿಗೆ ಕೆಂಪು ಬಣ್ಣದ ಬಟ್ಟೆ, ಕೆಂಪು ಹೂವೆಂದರೆ ಬಲು ಇಷ್ಟ. ಹಾಗಾಗಿ ಶುಕ್ರವಾರದ ದಿನ ಯಾರು ಕೆಂಪು ಬಟ್ಟೆ ಧರಿಸಿ, ಕೆಂಪು ಹೂವನ್ನ ಹಾಕಿ, ಲಕ್ಷ್ಮೀ ದೇವಿಯ ಪೂಜೆ ಮಾಡುತ್ತಾರೋ, ಅವರಿಗೆ ದೇವಿ ಒಲಿಯುತ್ತಾಳೆಂಬ ನಂಬಿಕೆ ಇದೆ.

ಎಂಥ ಸಮಯದಲ್ಲಿ ಪತಿ ಪತ್ನಿಯ ಕಾಳಜಿ ಮಾಡಬೇಕು ಗೊತ್ತಾ..?

ಈ 5 ಗುಣಗಳುಳ್ಳ ಜನರು ಬುದ್ಧಿವಂತರು ಅಂತಾರೆ ಚಾಣಕ್ಯ..

ಪತಿ ಪತ್ನಿಯ ಬಳಿ ಇಂಥ ವಿಷಯಗಳನ್ನು ಹೇಳಲೇಬಾರದು ಅಂತಾರೆ ಚಾಣಕ್ಯ..

- Advertisement -

Latest Posts

Don't Miss