Friday, November 22, 2024

Latest Posts

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

- Advertisement -

Tips For Life: ನಾವು ನೀವು ನೋಡಿದ ನೂರು, ಇನ್ನೂರು ಜನರಲ್ಲಿ ಬರೀ ಇಬ್ಬರೋ, ಮೂವರೋ ಜೀವನದಲ್ಲಿ ಸಫಲರಾಗಿರುವುದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ಬರೀ ಕೆಲವೇ ಕೆಲವು ಜನ, ಜೀವನದಲ್ಲಿ ಉದ್ಧಾರವಾಗುತ್ತಾರೆ. ತಾವಂದುಕೊಂಡ ಗುರಿ ಸಾಧಿಸುತ್ತಾರೆ..? ಈ ಬಗ್ಗೆ ತಿಳಿಯೋಣ ಬನ್ನಿ..

ಯಶಸ್ಸು ಹೊಂದುವವರ ಯೋಚನೆ ಮತ್ತು ಯಶಸ್ಸು ಹೊಂದದೇ ಇರುವವ ಯೋಚನೆ ಬೇರೆ ಬೇರೆ ರೀತಿ ಇರುತ್ತದೆ. ಯಶಸ್ಸು ಹೊಂದದೇ ಇರುವವರು, ಯಾವುದಾದರೂ ಕೆಲಸಕ್ಕೆ ಮುಂದಾಗಬೇಕಾದರೆ, ನನ್ನ ಬಳಿ ಆ ವಸ್ತು ಇಲ್ಲ. ಈ ವಸ್ತು ಇಲ್ಲ. ಮುಂದೆ ತೊಂದರೆ ಎದುರಾಗಬಹುದು ಎಂದು ಯೋಚಿಸುತ್ತಾರೆ. ಆದರೆ ಯಶಸ್ಸು ಹೊಂದಿದವರು, ತಮ್ಮ ಬಳಿ ಏನು ಇದೆಯೋ, ಅದರೊಂದಿಗೆ ಕಲಸಕ್ಕೆ ಧುಮುಕುತ್ತಾರೆ. ಮುಂದೆ ತೊಂದರೆ ಬಂದರೆ ಏನು ಮಾಡುವುದು ಎಂದು ಯೋಚಿಸುವುದಿಲ್ಲ. ಬದಲಾಗಿ, ಮುಂದೆ ತೊಂದರೆ ಬಂದರೆ, ಎದುರಿಸಿದರಾಯಿತು ಎಂದು ಧೈರ್ಯದಿಂದ ಮುನ್ನುಗ್ಗುತ್ತಾರೆ.

ಯಾವುದಾದರೂ ಕೆಲಸ ಮಾಡುವ ಮುನ್ನ, ಒಂದು ಕಾಗದದಲ್ಲಿ ಆ ಬಗ್ಗೆ ಪ್ಲಾನ್ ಮಾಡಿ, ಬರಿಯಬೇಕು. ನಂತರ ಒಂದೊಂದೇ ಕೆಲಸವನ್ನು ಕಾರ್ಯಗತಕ್ಕೆ ತರಬೇಕು. ಮುಂದೆ ಯಾವ ರೀತಿಯ ತೊಂದರೆ, ಬರಬಹುದು. ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಯೋಚಿಸಬೇಕು. ಹೀಗೆ ಯೋಚಿಸಿ, ಕೆಲಸ ಶುರು ಮಾಡಿದವನಿಗೆ ಯಶಸ್ಸು ಸದಾ ಸಿಗುತ್ತದೆ.

ಅಲ್ಲದೇ, ಯಶಸ್ವಿ ವ್ಯಕ್ತಿಗಳಾಗಬಯಸುವವರು ಎಂದಿಗೂ ಯಾರ ಮಾತಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಮನಸ್ಸಿಗೆ ಸರಿ ಅನ್ನಿಸಿದ್ದನ್ನೇ ಮಾಡುತ್ತಾರೆ. ಅಲ್ಲದೇ ತಾವು ಯಾವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಅನ್ನೋದನ್ನ ಅವರು ಕೆಲಸ ಮಾಡಿ ತೋರಿಸುತ್ತಾರೆ ಹೊರತು, ಎಲ್ಲರ ಬಳಿ ಕೆಲಸ ಶುರುವಾಗುವ ಮುನ್ನವೇ ಬಾಯಿ ಬಡೆದುಕೊಳ್ಳುವುದಿಲ್ಲ. ತಮ್ಮ ಪ್ಲಾನನ್ನು ಸಿಕ್ರೇಟ್ ಆಗಿ ಇಡುತ್ತಾರೆ.

ಇನ್ನು ನಾವು ನಮ್ಮ ಬಗ್ಗೆ ಏನು ಯೋಚಿಸುತ್ತೇವೋ, ಅದೇ ಆಗುತ್ತೇವೆ. ಹಾಗಾಗಿ ಮೊದಲು ನಮಗೆ ನಮ್ಮ ಬಗ್ಗೆ ವಿಶ್ವಾಸವಿರಬೇಕು. ನನ್ನಿಂದ ಏನೂ ಮಾಡಲಾಗುವುದಿಲ್ಲ ಎಂದು ಕೈಚೆಲ್ಲಿ ಕುಳಿತರೆ, ನೀವು ಯಶಸ್ಸು ಗಳಿಸಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಈ ಕೆಲಸವನ್ನು ಮಾಡಬಲ್ಲೆ. ಯಾವುದೇ ಅಡೆ ತಡೆ ಬಂದರೂ ಎದುರಿಸಬಲ್ಲೆ ಎಂಬ ವಿಶ್ವಾಸ ನಿಮ್ಮಲ್ಲಿದ್ದರೆ, ನೀವು ಖಂಡಿತ ಸಫಲರಾಗುತ್ತೀರಿ.

ಐಸ್ ವಾಟರ್, ಐಸ್ ಕ್ರೀಮ್ ಸೇವನೆಯಿಂದ ದೇಹ ತಂಪಾಗಿರತ್ತಾ..?

ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?

ಅಂಜೂರದಿಂದ ಆಗುವ ಆರೋಗ್ಯ ಲಾಭವೇನು..? ಇದನ್ನು ಹೇಗೆ ಸೇವಿಸಬೇಕು..?

- Advertisement -

Latest Posts

Don't Miss