Health Tips: ವೈದ್ಯೆ ಮತ್ತು ಆಹಾರ ತಜ್ಞೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಈಗಾಗಲೇ ನಾವು ಸೇವಿಸುವ ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಇಂದು ನಾವು ಸೇವಿಸುವ ಆಹಾರ ಮತ್ತು ಹಾರ್ಟ್ ಅಟ್ಯಾಕ್‌ಗೂ ಇರುವ ಸಂಬಂಧದ ಬಗ್ಗೆ ವಿವರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಹಾರ್ಟ್ ಅಟ್ಯಾಕ್‌ಗೂ ಆಹಾರ ಸೇವನೆಗೂ ತುಂಬಾ ದೊಡ್ಡ ಸಂಬಂಧವಿದೆ. ಸರಿಯಾಗಿ ವ್ಯಾಯಾಮ ಮಾಡದೇ ಇದ್ದಾಗಲೂ ಹಾರ್ಟ್ ಅಟ್ಯಾಕ್ ಬರುತ್ತದೆ. ಆದರೆ ಆಹಾರದ ಮೂಲಕ ನಾವು ಅತೀಯಾದ ಕೊಲೆಸ್ಟ್ರಾಲ್ ಸ್ವೀಕಾರ ಮಾಡುವ ಕಾರಣಕ್ಕಾಗಿ, ಹಾರ್ಟ್ ಅಟ್ಯಾಕ್ ಕೇಸ್ ಹೆಚ್ಚಾಗುತ್ತಿದೆ ಅಂತಾರೆ ವೈದ್ಯರು.
ಏಕೆಂದರೆ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ತನ್ನಿಂದ ತಾನೇ ತಯಾರಾಗುತ್ತದೆ. ಹಾಗಾಗಿ ನಾವು ಎಕ್ಸ್‌ಟ್ರಾ ಕೊಲೆಸ್ಟ್ರಾಲ್ ಸೇವಿಸುವ ಅಗತ್ಯವಿಲ್ಲ. ಆದ್ದರಿಂದ ಅಗತ್ಯಕ್ಕಿಂತ ಹೆಚ್ಚು ಎಣ್ಣೆ, ತುಪ್ಪ, ಬೆಣ್ಣೆಯ ಸೇವನೆ ಮಾಡಿದ್ರೆ, ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಯಾರಾಗುತ್ತದೆ. ಇದರಿಂದಲೇ ಹೃದಯಕ್ಕೆ ರಕ್ತ ಸರಿಯಾಗಿ ಸರಬರಾಜಾಗದೇ, ಹಾರ್ಟ್ ಅಟ್ಯಾಕ್ ಬರುತ್ತದೆ.
ರಕ್ತನಾಳದಲ್ಲಿ ರಕ್ತ ಸರಾಗವಾಗಿ ಹೋಗಬೇಕು. ಅಂದರೆ ಮನೆಯ ಮೋರಿಯಲ್ಲಿ ಕಸ ಕಟ್ಟಿಕೊಳ್ಳದೇ ಹೇಗೆ ನೀರು ಹರಿದು ಹೋಗಬೇಕೋ, ಅದೇ ರೀತಿ ರಕ್ತನಾಳದಲ್ಲಿ ರಕ್ತ ಕೂಡ ಸರಾಗವಾಗಿ ಹರಿಯಬೇಕು. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ, ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿಕೊಳ್ಳುತ್ತದೆ. ಆಗ ಹೃದಯಕ್ಕೆ ಸರಿಯಾಗಿ ರಕ್ತ ಸರಬರಾಜು ಆಗದೇ, ಹಾರ್ಟ್ ಅಟ್ಯಾಕ್ ಆಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ವೀಡಿಯೋ ನೋಡಿ..




