Friday, March 14, 2025

Latest Posts

ಕಣ್ಣಿನ ಪೊರೆಗೆ treatment ಏನು..?

- Advertisement -

Health Tips: ವಯಸ್ಸಾಗುತ್ತಾ ಹೋದಂತೆ, ಕಣ್ಣಿನ ಆರೋಗ್ಯ ಹದಗೆಡುತ್ತಾ ಬರುತ್ತದೆ. ಅದು ಸಾಮಾನ್ಯ ಸಂಗತಿ. ಅದರಲ್ಲೂ ಕೆಲವರಿಗೆ ಕಣ್ಣಿನ ಪೊರೆ ಬರುತ್ತದೆ. ಕಣ್ಣಿನ ಪೊರೆ ಬಂತಂದ್ರೆ, ಕಣ್ಣು ಕಾಣಿಸುವುದಿಲ್ಲ. ಅದಕ್ಕಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ, ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಕಣ್ಣಿನ ಪೊರೆಗೆ ಹೇಗೆ ಚಿಕಿತ್ಸೆ ಕೊಡಲಾಗುತ್ತದೆ ಎಂಬ ಬಗ್ಗೆ ವೈದ್ಯೆಯಾದ ಡಾ. ತೇಜಲ್ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ಒಮ್ಮೆ ಕಣ್ಣಿನ ಪೊರೆ ಬಂದರೆ, ಅದಕ್ಕೆ ಆಪರೇಷನ್ ಮಾಡಲೇಬೇಕು. ಕಣ್ಣಲ್ಲಿರುವ ಲೆನ್ಸ್ ತೆಗೆದು, ನಕಲಿ ಲೆನ್ಸ್ ಕೂರಿಸಲಾಗುತ್ತದೆ. ಸರ್ಜರಿ ಮೂಲಕ ನಕಲಿ ಲೆನ್ಸ್ ಅಳವಡಿಸಲಾಗುತ್ತದೆ. ಇದು ಜೀವನಪೂರ್ತಿ ಹಾಗೆ ಇರುತ್ತದೆ. ಮತ್ತೆ ಬೆಳ್ಳಗಾಗುವುದಿಲ್ಲ. ಆದರೆ ಸಮಯ ಸಮಯಕ್ಕೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಇನ್ನು ನಮಗೆ ವಯಸ್ಸಾಗುತ್ತಿದ್ದಂತೆ, ನಾವು ಒಂದು ಕಣ್ಣು ಮುಚ್ಚಿ, ನಮ್ಮ ದೃಷ್ಟಿಯನ್ನ ಪರೀಕ್ಷಿಸಿಕೊಳ್ಳುವುದು ಉತ್ತಮ. ನಮ್ಮ ಜೀವನ ಶೈಲಿ ಸರಿಯಾಗಿದ್ದು, ನಾವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದಲ್ಲಿ, ಹೆಚ್ಚು ಮೊಬೈಲ್, ಲ್ಯಾಪ್‌ಟಾಪ್ ಬಳಸದೇ ಇದ್ದಲ್ಲಿ, ಕತ್ತಲಲ್ಲಿ ಮೊಬೈಲ್ ಬಳಸದೇ ಇದ್ದಲ್ಲಿ ನಮ್ಮ ಕಣ್ಣಿನ ಆರೋಗ್ಯ ಅತ್ಯುತ್ತಮವಾಗಿ ಇರಿಸಿಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss