Sunday, December 22, 2024

Latest Posts

ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನು ಸೂಚನೆ ಸಿಗುತ್ತದೆ..? ಯಾವ ಕೆಲಸ ಮಾಡಬೇಕು..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್ ಹಲವು ಜನರಲ್ಲಿ ಕಾಣುತ್ತಿದ್ದೇವೆ. ಮೊದಲೆಲ್ಲ ವಯಸ್ಸಾದವರಿಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ನೋಡುತ್ತಿದ್ದೆವು. ಇತ್ತೀಚಿಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹಾರ್ಟ್ ಅಟ್ಯಾಕ್ ಬರುತ್ತಿದೆ.

ಹಾಗಾದ್ರೆ ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನೇನು ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ. ಹಾರ್ಟ್ ಆಟ್ಯಾಕ್ ಬರುವ ಮುನ್ನ ಎದೆ ಉರಿ ಶುರುವಾಗುತ್ತದೆ. 5ರಿಂದ 6 ನಿಮಿಷ ಬರುವ ಎದೆ ಉರಿ ಗ್ಯಾಸ್ಟಿಕ್ ಆಗಬಹುದು. ಆದರೆ ಹತ್ತರಿಂದ 20 ನಿಮಿಷ, ಅಥವಾ ಅರ್ಧಗಂಟೆ ಬರುವ ಎದೆ ಉರಿ, ಹಾರ್ಟ್ ಅಟ್ಯಾಕ್ ಬರುವ ಸಂಕೇತವಾಗಿದೆ.

ಎದೆ ಉರಿ, ಎರಡೂ ಕೈನೋವು ಶುರುವಾದರೆ, ನೀವು ತಡ ಮಾಡದೇ, ವೈದ್ಯರ ಬಳಿ ಆ ವ್ಯಕ್ತಿಯನ್ನು ಕೊಂಡೊಯ್ಯಬೇಕು. ಇನ್ನು ಕೆಲವರಿಗೆ ಉಸಿರಾಡಲು ಸಮಸ್ಯೆಯಾಗುತ್ತದೆ. ಎದೆ ನೋವು ಬರದಿದ್ದರೂ, ಉಸಿರಾಡಲು ಕಷ್ಟವಾಗಬಹುದು. ತಲೆ ಸುತ್ತು ಬಂದು ಎಚ್ಚರ ತಪ್ಪಬಹುದು. ಕೆಲವರಿಗೆ ವಾಂತಿಯೂ ಆಗುತ್ತದೆ. ಇದೆಲ್ಲ ಸೂಚನೆ ಇದ್ದರೆ, ತಡ ಮಾಡದೇ ಅಂಥವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು.

ಏಕೆಂದರೆ, ಅಂಥ ವ್ಯಕ್ತಿಯನ್ನು ಬದುಕಿಸಿಕೊಳ್ಳಲು ಇರುವ ಸಮಯವನ್ನು ಗೋಲ್ಡನ್ ಅವರ್ ಎನ್ನುತ್ತಾರೆ. ನೀವು ಎಷ್ಟು ಬೇಗ ಅವರನ್ನು ಕೊಂಟೊಯ್ಯುತ್ತೀರೋ, ಅಷ್ಟು ಬೇಗ ಅವರ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು. ಹಾರ್ಟ್ ಡ್ಯಾಮೇಜ್ ಆಗದ ರೀತಿ ಮಾಡಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ.

ಸಕ್ಕರೆ ಖಾಯಿಲೆ ಇದ್ದವರು ಈ 6 ಆಹಾರಗಳನ್ನು ಎಂದಿಗೂ ಸೇವಿಸಬಾರದು..

ಹಿಂಗಿನ ಆರೋಗ್ಯಕರ ಲಾಭ ತಿಳಿದರೆ, ಇಂದಿನಿಂದಲೇ ನೀವೂ ಹಿಂಗು ಬಳಸಲು ಶುರು ಮಾಡುವಿರಿ..

ನೆನೆಸಿಟ್ಟ ಖರ್ಜೂರ ಸೇವನೆಯಿಂದಾಗುವ ಆರೋಗ್ಯಕರ ಲಾಭವೇನು..?

- Advertisement -

Latest Posts

Don't Miss