ದೃಷ್ಟಿದೋಷ ಅಂದ್ರೆ ಏನು!?

Health Tips: ವೈದ್ಯೆಯಾದ ಡಾ.ಮೈತ್ರಿ ಮಕ್ಕಳಿಗೆ ದೃಷ್ಟಿದೋಷ ಬರುವ ಬಗ್ಗೆ ನಿಮಗೆ ಮಾಹಿತಿ ನೀಡಿದ್ದರು. ಚಿಕ್ಕಂದಿನಲ್ಲೇ ಕಾರ್ಟೂನ್, ಟಿವಿ, ಮೊಬೈಲ್ ನೋಡುವ ಅಭ್ಯಾಸ ಬೆಳೆದಲ್ಲಿ, ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಕಣ್ಣಿನ ಸಮಸ್ಯೆ ಬಂದು, ಅವರಿಗೆ ಕನ್ನಡಕ ಬರುತ್ತದೆ ಎಂದು ಅವರು ವಿವರಿಸಿದ್ದರು. ಇದೀಗ ಡಾ.ಮೈತ್ರಿ, ದೃಷ್ಟಿದೋಷ ಎಂದರೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ದೃಷ್ಟಿದೋಷದಲ್ಲಿ ಎರಡು ಬಗೆ ಇದೆ. ದೂರ ದೃಷ್ಟಿ ದೋಷ, ಸಮೀಪ ದೃಷ್ಟಿ ದೋಷ. ದೂರದೃಷ್ಟಿ ದೋಷ ಅಂದ್ರೆ, ದೂರವಿರುವ ಅಕ್ಷರಗಳು, ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಹತ್ತಿರವಿದ್ದ ಅಕ್ಷರ, ವಸ್ತುಗಳಷ್ಟೇ ಕಾಣಿಸುತ್ತದೆ. ಸಮೀಪ ದೃಷ್ಟಿ ದೋಷವೆಂದರೆ, ಹತ್ತಿರವಿರುವ ವಸ್ತುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹತ್ತಿರವಿರುವ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ದೂರವಿರುವ ವಸ್ತು, ಅಕ್ಷರಗಳು ಕಾಣಿಸುತ್ತದೆ.

ಇನ್ನು ಮಕ್ಕಳಿಗೆ ದೃಷ್ಟಿದೋಷ ಬಂದಾಗ, ಸಮೀಪ ದೃಷ್ಟಿ ದೋಷವಿರಲಿ, ದೂರ ದೃಷ್ಟಿ ದೋಷವಿರಲಿ, ಯಾವಾಗಲು ಕನ್ನಡ ಹಾಕಿಕೊಂಡಿರಲೇಬೇಕು. ಇಡೀ ದಿನವೂ ಅವರು ಕನ್ನಡಕ ಧರಿಸಿರಲೇಬೇಕು. ಆಗಲೇ ಅವರ ಕಣ್ಣಿನ ಆರೋಗ್ಯ ಸರಿಯಾಗಿ ಇರುತ್ತದೆ ಅನ್ನುತ್ತಾರೆ, ವೈದ್ಯೆ ಮೈತ್ರಿ. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

Joint Pain ಕಾಡ್ತಿದ್ಯಾ? ಇಲ್ಲಿದೆ ಮನೆಮದ್ದು..

ಮಕ್ಕಳ ಈ ಹುಚ್ಚಿಗೆ ಕಾರಣ ಯಾರು?

Liver Cancer ಅಂದ್ರೆ ಏನು? ವೈದ್ಯರ ವಿವರಣೆ ಇಲ್ಲಿದೆ ನೋಡಿ..

About The Author