Health Tips: ಯಾವುದಾದರೂ ತಿಂಡಿ ತಿಂದು, ವ್ಯತ್ಯಾಸವಾದಾಗ, ಲೂಸ್ ಮೋಷನ್ ಶುರುವಾಗುತ್ತದೆ. ಕೆಲವರಿಗೆ ಸಡೆನ್ ಆಗಿ ಲೂಸ್ ಮೋಷನ್ ಆದಾಗ, ಏನು ಸೇವಿಸಬೇಕು..? ಏನು ಸೇವಿಸಬಾರದು ಅಂತಾ ಗೊತ್ತಾಗುವುದಿಲ್ಲ. ಹಾಗಾಗಿ ನಾವಿಂದು ಲೂಸ್ ಮೋಷನ್ ಶುರುವಾದಾಗ, ಮೊದಲು ಮನೆಯಲ್ಲೇ ನಾವು ಏನನ್ನು ಸೇವಿಸಿ, ಅದನ್ನು ಕಂಟ್ರೋಲಿಗೆ ತರಬಹುದು ಅಂತಾ ಹೇಳಲಿದ್ದೇವೆ.
ನಮಗೆ ಮಲಬದ್ಧತೆ ಉಂಟಾದಾಗ, ನಾವು ಸುಲಭವಾಗಿ ಮಲವಿಸರ್ಜನೆಯಾಗಲು ಏನನ್ನು ಸೇವಿಸಬೇಕೋ, ಅಂಥ ಆಹಾರವನ್ನು ಸೇವಿಸುತ್ತೇವೆ. ಅಂತೆಯೇ, ಲೂಸ್ ಮೋಷನ್ ಆದಾಗ, ಮಲಬದ್ಧತೆಗೆ ಕಾರಣವಾಗುವ ಆಹಾರವನ್ನು ಮಿತವಾಗಿ ಸೇವಿಸಬೇಕು. ಇದರಿಂದ ನಮ್ಮ ದೇಹದಲ್ಲಿ ಸಮತೋಲನ ಉಂಟಾಗಿ, ಜೀರ್ಣಕ್ರಿಯೆ ಸರಿಯಾಗಿ ಆಗಿ, ಲೂಸ್ ಮೋಷನ್ ನಿಲ್ಲುತ್ತದೆ.
ಮೊದಲನೇಯದಾಗಿ ಲೂಸ್ ಮೋಷನ್ ಶುರುವಾಯಿತು ಎಂದು ನಿಮಗೆ ಗೊತ್ತಾದಾಗ, ನೀವು ಯಾವುದೇ ಕಾರಣಕ್ಕೂ ಬಿಸಿ ಬಿಸಿ ನೀರು, ಹಾಲು, ಟೀ, ಕಾಫಿ ಸೇರಿ, ಯಾವುದೇ ಬಿಸಿ ದ್ರವ ಪದಾರ್ಥವನ್ನು ಸೇವಿಸಲೇಬಾರದು. ಬದಲಾಗಿ ರೂಮ್ ಟೆಂಪ್ರೆಚರ್‌ನಲ್ಲಿರುವ ನೀರು, ತಣ್ಣಗಿನ ಹಾಲು, ಮೊಸರು, ಮಜ್ಜಿಗೆ, ಎಳನೀರು ಕುಡಿಯಬೇಕು. ಇವೆಲ್ಲವೂ ದೇಹಕ್ಕೆ ತಂಪು ನೀಡಿ, ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ದ್ರವ ಪದಾರ್ಥವನ್ನು ಸಾಕಷ್ಟು ಸೇವಿಸಿ.
ಏಕೆಂದರೆ ಲೂಸ್ ಮೋಷನ್ ಆದಾಗ, ದೇಹದಲ್ಲಿರುವ ನೀರು ಖಾಲಿಯಾಗುತ್ತದೆ. ಹಾಗೆ ನೀರು ಖಾಲಿಯಾಗಿ, ಜೀವ ಹೋಗುವ ಪರಿಸ್ಥಿತಿ ಬರಬಹುದು. ಹಾಗಾಗಿ ಸಾಕಷ್ಟು ತಂಪಗಿರುವ ದ್ರವ ಪದಾರ್ಥ ಸೇವಿಸಿ. ಏನೂ ಸಿಗದಿದ್ದಲ್ಲಿ, ನೀರು ಸೇವಿಸಿ. ಎರಡನೇಯದಾಗಿ ಹಸಿ ಖರ್ಜೂರ ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಲೂಸ್ ಮೋಶನ್ ಶುರುವಾದಾಗ, ಹಸಿ ಖರ್ಜೂರ ಸೇವನೆ ಮಾಡಿ.
ದಾಳಿಂಬೆ, ಸೇಬುಹಣ್ಣಿನ ಸೇವನೆ ಮಾಡುವುದರಿಂದಲೂ ಲೂಸ್ ಮೋಷನ್ ಕಂಟ್ರೋಲಿಗೆ ಬರುತ್ತದೆ. ಕೆಲವರು ಬಾಳೆಹಣ್ಣಿನ ಸೇವನೆ ಮಾಡುತ್ತಾರೆ. ಆದರೆ ಬಾಳೆಹಣ್ಣಿನ ಸೇವನೆ ಮಾಡಿದ್ದಲ್ಲಿ, ಕೆಲವರಿಗೆ ಲೂಸ್ ಮೋಷನ್ ಹೆಚ್ಚಾಗುತ್ತದೆ. ಅಂಥವರು ಬಾಳೆಹಣ್ಣು ಸೇವಿಸಬೇಡಿ. ಬಾಳೆಹಣ್ಣು ಸೇವಿಸಿದಾಗ, ನಿಮಗೆ ಶಕ್ತಿ ಬರುತ್ತದೆ ಎಂದಾದಲ್ಲಿ ಮಾತ್ರ, ಈ ವೇಳೆ ನೀವು ಬಾಳೆಹಣ್ಣು ಸೇವಿಸಬಹುದು. ಈ ಎಲ್ಲ ಪ್ರಯೋಗ ಮಾಡಿದಾಗ, ನಿಮ್ಮ ಆರೋಗ್ಯ ಸಮಸ್ಯೆ ಸ್ವಲ್ಪವಾದರೂ ಕಂಟ್ರೋಲಿಗೆ ಬರುತ್ತದೆ. ಬಳಿಕ ತಪ್ಪದೇ, ವೈದ್ಯರ ಬಳಿ ಹೋಗಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಿ.