Spiritual Story: ಉಪವಾಸ ಅನ್ನೋದು ಬರೀ ದೇವರಿಗೆ ಒಪ್ಪಿಸುವ ಭಕ್ತಿ ಅಲ್ಲ. ಇದರೊಂದಿಗೆ ಉಪವಾಸ ಅನ್ನೋದು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡುವ ಒಂದು ಕೆಲಸ. ಹಾಗಾಗಿ ಉಪವಾಸ ಮಾಡುವಾಗ ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಹಾಗಾದ್ರೆ ಉಪವಾಸವಿದ್ದಾಗ ಏನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ನಿಜವಾದ ಉಪವಾಸವೆಂದರೆ, ಇಡೀ ದಿನ ಏನನ್ನೂ ತಿನ್ನದೇ ಇರೋದು. ಆದರೆ ಇದು ಎಲ್ಲರಿಗೂ ಸಾಧ್ಯವಾಗುವ ವಿಷಯ ಅಲ್ಲ. ಕೆಲವೇ ಕೆಲವರು ಈ ರೀತಿ ಒಂದು ದಿನ ಏನನ್ನೂ ತಿನ್ನದೇ, ಉಪವಾಸ ಮಾಡಲು ಸಾಧ್ಯವಾಗುತ್ತದೆ. ಇನ್ನು ಕೆಲವರು ಈ ರೀತಿ ಮಾಡಲು ಹೋಗಿ, ತಿಂಗಳುಗಟ್ಟಲೇ, ಆರೋಗ್ಯ ಹಾಳುಮಾಡಿಕೊಂಡವರಿದ್ದಾರೆ. ಹಾಗಾಗಿ ಎಲ್ಲರೂ ಈ ರೀತಿ ಉಪವಾಸ ಮಾಡಲು ಹೋಗಬಾರದು.
ಇನ್ನು ಉಪವಾಸವಿದ್ದಾಗ, ಈರುಳ್ಳಿ, ಬೆಳ್ಳುಳ್ಳಿ, ಮಸಾಲೆ ಪದಾರ್ಥ, ಮಾಂಸ, ಮೊಟ್ಟೆ, ಚಹಾ, ಕಾಫಿ ಸೇವನೆ ಮಾಡಬಾರದು. ಏಕೆಂದರೆ ಇವುಗಳು ತಾಮಸಿಕ ಆಹಾರ. ಇವುಗಳ ಸೇವನೆಯಿಂದ, ನಮ್ಮ ಏಕಾಗೃತೆ ಹಾಳಾಗುತ್ತದೆ. ನಮ್ಮ ಮನಸ್ಸು ಪೂಜೆಯಲ್ಲಿ ಅಥವಾ ಭಕ್ತಿಯಲ್ಲಿರುವುದಿಲ್ಲ. ಹಾಗಾಗಿ ಉಪವಾಸದ ದಿನ ಇಂಥ ತಾಮಸಿಕ ಆಹಾರವನ್ನು ಸೇವಿಸಬಾರದು.
ಹಾಾಗಂತ ಇದನ್ನು ಬಿಟ್ಟು ಬೇರೆ ಏನೂ ಬೇಕಾದ್ರೂ ಸೇವಿಸಬಹುದು ಅಂತಾ ಉಪವಾಸದ ಹೆಸರಿನಲ್ಲಿ ನೀವು ಪದೇ ಪದೇ ತಿಂದರೆ, ಅದಕ್ಕೆ ಅರ್ಥವಿರುವುದಿಲ್ಲ. ಹಾಗಾಗಿ ಭಕ್ತಿಯಿಂದ ದೇವರನ್ನು ನೆನೆಯುತ್ತ, ದೇಹಕ್ಕೆ ಅಗತ್ಯವಿದ್ದಷ್ಟು ಆಹಾರ ಮತ್ತು ನೀರಿನ ಸೇವನೆ ಮಾಡಬೇಕು.
ಶ್ರೀರಾಮನಿಗೂ ಇದ್ದಳು ಓರ್ವ ಸಹೋದರಿ.. ರಾಣಿ ಶಾಂತಾಳ ಬಗ್ಗೆ ನಿಮಗೆ ಗೊತ್ತೇ..?

