Saturday, April 19, 2025

Latest Posts

ಅಯ್ಯಪ್ಪ ಮಾಲೆ ಧರಿಸಿದವರು ಯಾವ ಯಾವ ನಿಯಮಗಳನ್ನು ಅನುಸರಿಸಬೇಕು..?

- Advertisement -

Spiritual : ನವೆಂಬರ್‌ನಿಂದ ಹಲವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ, ಪದ್ಧತಿಗಳನ್ನು ಅನುಸರಿಸಿ, ಅಯ್ಯಪ್ಪನ ದರ್ಶನ ಪಡೆದು ಬರುತ್ತಾರೆ. ಹಲವರು ಸಂಕ್ರಾಂತಿ ಸಮಯಕ್ಕೆ ಅಯ್ಯಪ್ಪನ ದರ್ಶನ ಪಡೆಯುವುದು ವಾಡಿಕೆ. ಏಕೆಂದರೆ, ಅಲ್ಲಿ ಬೆಳಗುವ ಜ್ಯೋತಿ ಕಾಣಲು ಹಲವರು ಹೋಗುತ್ತಾರೆ. ಇನ್ನು ಮೊದಲ ಬಾರಿ ಮಾಲೆ ಧರಿಸಿದವರನ್ನು ಕನ್ನಿ ಸ್ವಾಮಿ ಎಂದು ಕರೆಯಲಾಗುತ್ತದೆ. ಹಾಗಾದರೆ ಅಯ್ಯಪ್ಪ ಮಾಲೆ ಧರಿಸಿದವರು ಯಾವ ಯಾವ ನಿಯಮಗಳನ್ನು ಅನುಸರಿಸಬೇಕು ಅಂತಾ ತಿಳಿಯೋಣ ಬನ್ನಿ..

ಸ್ನಾನಾದಿ. ಅಯ್ಯಪ್ಪ ಮಾಲೆ ಧರಿಸುವವರು 41 ದಿನಗಳ ಕಾಲ ವೃತಾಚರಣೆ ಮಾಡಬೇಕು. ಇವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ, ಮಡಿಯನ್ನು ಆಚರಿಸಬೇಕು. ಎರಡು ಬಾರಿ ಅಯ್ಯಪ್ಪನ ಪೂಜೆಯನ್ನೂ ಮಾಡಬೇಕು. ಮಾಲೆ ಧರಿಸಿದವರು ಮನೆಗೆ ಹೋಗುವಂತಿಲ್ಲ. ಅಯ್ಯಪ್ಪನ ದೇವಸ್ಥಾನದಲ್ಲಿ ವಸತಿ ಇರಬೇಕು ಎಂಬ ನಿಯಮವಿದೆ. ಏಕೆಂದರೆ, ಮನೆಗೆ ಹೋದರೆ, ಅಲ್ಲಿ ಹೆಣ್ಣು ಮಕ್ಕಳು ಋತುಮತಿಯಾಗಿದ್ದಲ್ಲಿ ಇವರನ್ನು ಮುಟ್ಟುವಂತಿಲ್ಲ. ಅವರು ಮುಟ್ಟಿದ ಬಟ್ಟೆ, ಆಹಾರ ಯಾವುದೇ ವಸ್ತುಗಳನ್ನು ಸಹ, ಸ್ವಾಮಿಗಳು ಮುಟ್ಟುಂವತಿಲ್ಲ. ಅಲ್ಲದೇ ಪತ್ನಿಯೊಂದಿಗೆ ಸಂಬಂಧ ಹೊಂದುವ ಹಾಗಿಲ್ಲ. 41 ದಿನಗಳ ಕಾಲ ಬ್ರಹ್ಮಚರ್ಯ ಪಾಲನೆ ಮಾಡಿ, ದೇವರ ದರ್ಶನ ಪಡೆಯಬೇಕಾಗುತ್ತದೆ.

ಇನ್ನು ಸ್ವಾಮಿಗಳು ಕೋಪ ಮಾಡುವಂತಿಲ್ಲ. ಅವರ ಮಾತಿನಲ್ಲಿ ಮಾಧುರ್ಯವಿರಬೇಕು. ಕೋಪ, ಕೆಟ್ಟ ಆಲೋಚನೆ, ಕಪಟತನದಿಂದ ಮಾಲೆ ಧರಿಸಿದವರು ದೂರವಿರಬೇಕು. ಸದಾ ಅಯ್ಯಪ್ಪನ ಭಜನೆ, ಜಪದಲ್ಲಿ ಕಾಲ ಕಳೆಯಬೇಕು. ದೇವರ ಧ್ಯಾನದಲ್ಲೇ ಇರಬೇಕು. ಇನ್ನು ಅಯ್ಯಪ್ಪ ಮಾಲೆ ಧರಿಸಿದವರು, ಹೊಟೇಲ್‌ಗಳಲ್ಲಿ ಭೋಜನ ಮಾಡುವಂತಿಲ್ಲ. ಈರುಳ್ಳಿ, ಬೆಳ್ಳುಳ್ಳಿ, ಮೊಟ್ಟೆ , ಮಾಂಸಗಳ ಸೇವನೆ ಮಾಡುವಂತಿಲ್ಲ. ಅವರು ದೇವಸ್ಥಾನದಲ್ಲಿ ಪ್ರಸಾದ ಸ್ವೀಕಾರ ಮಾಡಬಹುದು. ಅಥವಾ ಸ್ವಾಮಿಗಳೆಲ್ಲ ಸೇರಿ, ತಾವೇ ಭೋಜನ ತಯಾರಿಸಿ ಸೇವಿಸಬಹುದು.

ಧರಿಸುವ ವಸ್ತ್ರ. ಸ್ವಾಮಿಗಳು ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ. ಚಪ್ಪಲಿ ಅಥವಾ ಬೂಟುಗಳನ್ನು ಧರಿಸುವಂತಿಲ್ಲ. ಬರಿಗಾಲಿನಲ್ಲಿ ಹೋಗಿ, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬೇಕು. 41 ದಿನಗಳ ವೃತಾಚರಣೆಯಲ್ಲಿ ಕೂದಲು ಮತ್ತು ಉಗುರು ಕತ್ತರಿಸಬಾರದು. ಇವಿಷ್ಟು ಅಯ್ಯಪ್ಪ ಮಾಲೆ ಧರಿಸುವವರು ಪಾಲಿಸಬೇಕಾದ ನಿಯಮಗಳು.

ಈ 2 ಸಮಯದಲ್ಲಿ ಮನುಷ್ಯ ತಾಳ್ಮೆಯಿಂದ ಇರಬೇಕು..

ಸಾವಿನ ಮನೆಗೆ ಹೋಗುವಾಗ ಬಿಳಿ ಬಟ್ಟೆಯನ್ನೇಕೆ ಧರಿಸಬೇಕು..?

ಲಕ್ಷ್ಮೀಯ ಕೃಪೆ ಬೇಕಾಗಿದ್ದಲ್ಲಿ, ಈ ಕೆಲಸ ಮಾಡಬೇಡಿ..

- Advertisement -

Latest Posts

Don't Miss