Health Tips: ವೈದ್ಯರಾದ ಡಾ.ದೀಪಿಕಾ ಸ್ಕಿನ್‌ಕೇರ್ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದಾರೆ. ಬೇಸಿಗೆ, ಮಳೆಗಾಲ, ಚಳಿಗಾಲ ಎಲ್ಲ ಕಾಲದಲ್ಲೂ ನಮ್ಮ ಸ್ಕಿನ್ ಹೇಗಿರಿಸಿಕೊಳ್ಳಬೇಕು..? ಯಾವ ಮಾಯಿಶ್ಚರೈಸಿಂಗ್ ಕ್ರೀಮ್ ಬಳಸಬೇಕು. ಯಾವ ರೀತಿ ನಮ್ಮ ಸೌಂದರ್ಯ ಕಾಪಾಡಿಕೊಳ್ಳಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಹೈಡ್ರಾ ಫೇಶಿಯಲ್ ಬಗ್ಗೆ ವಿವರಿಸಿದ್ದಾರೆ.
ಹೈಡ್ರಾ ಫೇಶಿಯಲ್ ಬಗ್ಗೆ ಮಾತನಾಡಿರುವ ವೈದ್ಯರು, ಸ್ಕಿನ್ ಗ್ಲೋ ಆಗಲು ಈ ಫೇಶಿಯಲ್ ಮಾಡಲಾಗುತ್ತದೆ. ಹೈಡ್ರಾ ಫೇಶಿಯಲ್ ಶಾಶ್ವತವಲ್ಲ. 2ರಿಂದ 3 ತಿಂಗಳಿಗೊಮ್ಮೆ ಹೈಡ್ರಾ ಫೇಶಿಯಲ್ ಮಾಡಿಸಿಕೊಳ್ಳಬೇಕು.
ನೀವು ಸರಿಯಾದ ರೀತಿಯಲ್ಲಿ ಸ್ಕಿನ್ ಕೇರ್ ರೂಟಿನ್ ಫಾಲೋ ಮಾಡಿದ್ದಲ್ಲಿ, ನಿಮ್ಮ ಸ್ಕಿನ್ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ, ಫೇಸ್‌ವಾಶ್ ಬಳಸಿ, ಮುಖ ತೊಳೆಯಿರಿ. ವಿಟಾಮಿನ್ ಸಿ ಸೇರಮ್ ಬಳಸಿ. ಇದಾದ ಬಳಿಕ ಸನ್‌ಸ್ಕ್ರೀನ್ ಲೋಶನ್ ಬಳಸಿ. ಈ ರೀತಿ ಟೂಟಿನ್ ಇದ್ದರೆ, ನಿಮ್ಮ ಮುಖ ಕಾಂತಿಯುತವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..