Thursday, December 12, 2024

Latest Posts

ಕಾಮಾಲೆ ರೋಗ ಬಂದಾಗ ಏನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು..?

- Advertisement -

ಇತ್ತೀಚಿನ ದಿನಗಳಲ್ಲಿ ಕಾಮಾಲೆ ರೋಗ ಹೆಚ್ಚಾಗುತ್ತಿದೆ. ನಾವು ತಿನ್ನುವ ಆಹಾರ, ಕುಡಿಯುವ ನೀರು ಸ್ವಚ್ಛವಾಗಿರದಿದ್ದಲ್ಲಿ, ಕಾಮಾಲೆ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಶುದ್ಧವಾದ ನೀರು ಕುಡಿಯಬೇಕು, ಆರೋಗ್ಯಕರವಾದ ಆಹಾರ ಸೇವಿಸಬೇಕು ಅಂತಾ ಹೇಳೋದು. ಹಾಗಾದ್ರೆ ಕಾಮಾಲೆ ಬಂದಾಗ ಯಾವ ಆಹಾರವನ್ನು ಸೇವಿಸಬೇಕು ಮತ್ತು ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..

ಶುದ್ಧವಲ್ಲದ ನೀರನ್ನು ಸೇವಿಸುವುದು. ಮದ್ಯಪಾನ, ಧೂಮಪಾನ ಮಾಡುವುದು. ದೇಹದಲ್ಲಿ ರಕ್ತದ ಕೊರತೆ ಇರುವುದು. ಮಸಾಲೆಯುಕ್ತ ಆಹಾರವನ್ನೇ ಹೆಚ್ಚು ಸೇವಿಸುವುದು. ಬೀದಿ ಬದಿ ಸಿಗುವ ಆಹರವನ್ನು ಹೆಚ್ಚು ತಿನ್ನುವುದು. ಫಾಸ್ಟ್ ಫುಡ್ ತಿನ್ನುವುದರಿಂದ ಕಾಮಾಲೆ ರೋಗ ಬರುತ್ತದೆ. ಇನ್ನು ಈ ರೋಗದ ಲಕ್ಷಣ ಏನೆಂದರೆ, ಕೈ, ಉಗುರು, ಕಣ್ಣಿನ ಬಣ್ಣ ಹಳದಿಯಾಗಿ ಕಾಣುವುದು. ಜ್ವರ ಬರುವುದು. ಊಟ ಸೇರದಿರುವುದು, ಹೊಟ್ಟೆ ನೋವಾಗುವುದು, ತೂಕ ಕಡಿಮೆಯಾಗುವುದು ಕಾಮಾಲೆ ರೋಗದ ಲಕ್ಷಣವಾಗಿದೆ.

‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’…!

ಮೂಲಂಗಿಯ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ಕಡಿಮೆ ಮಾಡಿಕೊಳ್ಳಬಹುದು. ಅರ್ಧ ಗ್ಲಾಸ್‌ ಮೂಲಂಗಿ ಎಲೆಯ ಜ್ಯೂಸ್‌ ತಯಾರಿಸಿ, ಅದಕ್ಕೆ ಕೊಂಚ ಕಲ್ಲು ಸಕ್ಕರೆ ಸೇರಿಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಟೊಮೆಟೋ ಕೂಡ ಈ ರೋಗಕ್ಕೆ ಮನೆ ಮದ್ದಂತೆ ಕಾರ್ಯ ನಿರ್ವಹಿಸುತ್ತದೆ. ಟೊಮೆಟೋ ಜ್ಯೂಸ್‌ಗೆ ಕೊಂಚ ಉಪ್ಪು ಮತ್ತು ಪೆಪ್ಪರ್ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಅಲ್ಲದೇ ಪ್ರತಿದಿನ ಎರಡು ತುಳಸಿಯನ್ನ ತಿನ್ನಿ.

ನಿಮ್ಮ ಊಟದ ಬಟ್ಟಲಿನಲ್ಲಿ ಮೊಸರನ್ನು ಖಂಡಿತವಾಗಿ ಬಳಸಿ. ಕ್ಯಾರೆಟ್ ಜ್ಯೂಸ್ ಕೂಡ ಕಾಮಾಲೆಯನ್ನು ತೊಡೆದು ಹಾಕುವುದರಲ್ಲಿ ಸಹಾಯಕವಾಗಿದೆ. ಕಾಮಾಲೆ ಬಂದಾಗ ಕಬ್ಬಿನ ಹಾಲನ್ನ ಕುಡಿಯುವುದು ಉತ್ತಮ. ಆದ್ರೆ ಅದು ಕಡಿಮೆ ಪ್ರಮಾಣದಲ್ಲಿರಲಿ.

ಈ ದಿಕ್ಕಿನಲ್ಲಿ ಕುಳಿತುಕೊಂಡು ಊಟ ಮಾಡಬೇಡಿ..!

ಇನ್ನು ಈ ವೇಳೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ನೋಡೋದಾದ್ರೆ, ಮಸಾಲೆಯುಕ್ತ ಪದಾರ್ಥ, ತಂಪು ಪಾನೀಯ, ಕೂಲ್ ಡ್ರಿಂಕ್ಸ್, ಕರಿದ ಪದಾರ್ಥ, ಶುದ್ಧವಲ್ಲದ ನೀರು, ಫ್ರಿಜ್‌ನಲ್ಲಿರಿಸಿದ ಆಹಾರ, ಉದ್ದಿನ ಬೇಳೆ ಮತ್ತು ಮೈದಾದಿಂದ ತಯಾರಿಸಿದ ಪದಾರ್ಥವನ್ನು ತಿನ್ನಬಾರದು. ಯಾವಾಗಲೂ ಹೆಚ್ಚು ಎಣ್ಣೆ, ಉಪ್ಪು ಖಾರ ಬಳಸದ ಆರೋಗ್ಯಕರ ಆಹಾರ ಮತ್ತು ಕಾಯಿಸಿ, ತಣಿಸಿದ ಶುದ್ಧ ನೀರನ್ನೇ ಕುಡಿಯಿರಿ. ಚಾ ಕಾಫಿ ಸೇವನೆ ಬೇಡ. ಐಸ್ಕ್ರೀಮ್ ತಿನ್ನಬೇಡಿ. ವ್ಯಾಯಮ, ಜಾಗಿಂಗ್, ಜಿಮ್‌ಗೆಲ್ಲ ಬ್ರೆಕ್ ಕೊಡಿ. ಇನ್ನು ನೀವು ವೈದ್ಯರ ಬಳಿ ಚಿಕಿತ್ಸೆ ಪಡೆದ ನಂತರವೇ ಈ ಪಥ್ಯ ಮಾಡುವುದು ಉತ್ತಮ.

- Advertisement -

Latest Posts

Don't Miss