Wednesday, October 15, 2025

Latest Posts

ಲೋ ಬಿಪಿ ದೂರವಾಗಬೇಕು ಅಂದ್ರೆ ಏನು ಮಾಡಬೇಕು..? ಇಲ್ಲಿದೆ ನೋಡಿ ವೈದ್ಯರ ಸಲಹೆ..

- Advertisement -

Health Tips: ಇಂದಿನ ಕಾಲದಲ್ಲಿ ವಯಸ್ಸಾದವರಿಗೆ ಇರುವ ಸಮಸ್ಯೆ ಅಂದ್ರೆ ಲೋ ಬಿಪಿ. 40 ದಾಟುತ್ತಿದ್ದಂತೆ, ಬಿಪಿ ಸಮಸ್ಯೆ ಕಾಣಿಸಿಕೊಂಡು, ಜೀವನವೇ ಸಾಕು ಅನ್ನುವಷ್ಟು ಸಮಸ್ಯೆ ತಂದೊಡ್ಡುತ್ತದೆ. ಹಾಗಾಗಿ ಇಂದು ವೈದ್ಯರಾದ ಕಿಶೋರ್ ಅವರು, ಲೋ ಬಿಪಿ ಬಂದಾಗ, ಯಾವ ಮನೆಮದ್ದು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮಾಡರ್ನ್ ಲೈಫ್‌ಸ್ಟೈಲ್‌ಗೆ ಹೊಂದಿಕೊಂಡವರಿಗೆ ಹೆಚ್ಚಾಗಿ ಲೋ ಬಿಪಿ ಬರುತ್ತದೆ. ಈಗಿನ ಕಾಲದಲ್ಲಿ ಕಾಲೇಜು ಮೆಟ್ಟಲೇರಿರುತ್ತಾರಷ್ಟೇ, ಅಂಥವರಿಗೆ ಲೋ ಬಿಪಿ ಬಂದಿರುತ್ತದೆ. ದೇಹದಲ್ಲಿ ಶಕ್ತಿ ಇಲ್ಲ, ತುಂಬಾ ಸುಸ್ತಾಗತ್ತೆ ಎಂದು ನಮ್ಮ ಬಳಿ ಸಮಸ್ಯೆ ಹೇಳುತ್ತಾರೆ. ಮತ್ತು ಅದಕ್ಕೆ ಪರಿಹಾರ ಕೇಳುತ್ತಾರೆ ಎಂದು ಮಾಡರ್ನ್ ಲೈಫ್‌ಸ್ಟೈಲ್‌ನ ಅವಸ್ಥೆ ಹೇಳುತ್ತಾರೆ ಡಾ.ಕಿಶೋರ್.

ನಾವು ಆರೋಗ್ಯಕರ ಆಹಾರವನ್ನು ಚೆನ್ನಾಗಿ ತಿನ್ನುವ ಅರ್ಹತೆಯನ್ನು ಹೊಂದಿರುವುದಿಲ್ಲವೋ, ಆಗ ನಮ್ಮ ದೇಹದಲ್ಲಿ ಶಕ್ತಿಯೂ ಕಡಿಮೆ ಇರುತ್ತದೆ. ಹೀಗಾಗಿ ಲೋ ಬಿಪಿ ಬರಬಹುದು. ನೀವು ಇದಕ್ಕೆ ಮನೆಯಲ್ಲೇ ಮನೆಮದ್ದು ಮಾಡಬಹುದು. 5 ಗ್ರಾಮ್ ಅಶ್ವಗಂಧ ಚೂರ್ಣ 25ರಿಂದ 30 ಎಮ್‌ಎಲ್ ಹಾಲು, 80ರಿಂದ 100 ಎಮ್‌ ಎಲ್ ಅಷ್ಟು ನೀರು, ಇವಿಷ್ಟನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು. 65ರಿಂದ 70 ಎಂಎಲ್ ಕಶಾಯ ಇಂಗಬೇಕು. ಈಗ ಕಶಾಯ ರೆಡಿ. ಇದಕ್ಕೆ ನೀವು ಅವಶ್ಯಕತೆ ಇದ್ದಲ್ಲಿ ಕೊಂಚ ಕೆಂಪು ಕಲ್ಲುಸಕ್ಕರೆ ಬಳಸಬಹುದು. ಬೆಳಿಗ್ಗೆ ಒಂದು ಬಾರಿ ಸಂಜೆ ಒಂದು ಬಾರಿ ನೀವು ಈ ಕಶಾಯವನ್ನು ಕುಡಿದರೆ, ನಿಮ್ಮ ಲೋ ಬಿಪಿ ಕಂಟ್ರೋಲಿಗೆ ಬರುತ್ತದೆ. ನಿಮ್ಮ ದೇಹದಲ್ಲಿ ಶಕ್ತಿ ಬರುತ್ತದೆ. ರಕ್ತದೊತ್ತಡ ನಿವಾರಿಸುತ್ತದೆ.

ಇನ್ನು ಪ್ರತಿದಿನ ದಾಳಿಂಬೆ ಹಣ್ಣಿನ ಜೊತೆ ಕೊಂಚ ಸೈಂಧವ ಲವಣ ಮತ್ತು ನಿಂಬೆರಸ ಮಿಕ್ಸ್ ಮಾಡಿ ಸೇವಿಸಿ. ಇದು ಕೂಡ ಲೋ ಬಿಪಿಗೆ ರಾಮಬಾಣವಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

Lungs Pneumonia ಯಾಕೆ ಬರುತ್ತೆ? ಲಕ್ಷಣಗಳು ಏನೇನು?

ಮನುಷ್ಯರ Urine Color ಹೇಗಿರಬೇಕು? ಬಣ್ಣ ಬದಲಾಗಲು ಕಾರಣವೇನು..?

ಅಸ್ತಮಾ ಬರಲು ಕಾರಣವೇನು..? ವೈದ್ಯರಿಂದ ಸಂಪೂರ್ಣ ಮಾಹಿತಿ..

- Advertisement -

Latest Posts

Don't Miss