Saturday, April 19, 2025

Latest Posts

ಬಾಣಂತಿಯ ಆರೈಕೆ ಯಾವ ರೀತಿ ಇರಬೇಕು..?

- Advertisement -

Health Tips: ಗರ್ಭಿಣಿಯಾಗಿದ್ದಾಗ, ಹೆಣ್ಣು ಹೇಗೆ ತನ್ನ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ, ಹೆಚ್ಚು ಭಾರ ಹೊರದೆ ಕಾಳಜಿ ವಹಿಸುವುದು ಸೇರಿ, ಆರೋಗ್ಯ ಕಾಳಜಿ ತೆಗೆದುಕೊಳ್ಳುತ್ತಾಳೋ, ಅದೇ ರೀತಿ, ಮಗುವಾದ ಬಳಿಕ, ಬಾಣಂತನದ ಸಮಯದಲ್ಲಿ ಅತೀ ಹೆಚ್ಚು ಕಾಳಜಿ ಮಾಡಬೇಕು. ಹಾಗಾದ್ರೆ ಬಾಣಂತಿ ಆರೈಕೆ ಹೇಗಿರಬೇಕು ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ..

ಬಾಣಂತಿಯಾಗಿರುವ ತಾಯಿ, ಮಗುವಿಗೆ ಹಾಲು ಕುಡಿಸಬೇಕು. ನಿದ್ರಿಸಬೇಕು. ಉತ್ತಮ ಆಹಾರ ಸೇವಿಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ಇಷ್ಟು ಕೆಲಸ ಸರಿಯಾಗಿ ಮಾಡಿದರೆ, ಬಾಣಂತಿಗೆ ಯಾವ ತೊಂದರೆಯೂ ಇರುವುದಿಲ್ಲ.

ಮಗು ಮಲಗಿದಾಗಲೇ ಬಾಣಂತಿ ಸಹ ಮಲಗಬೇಕು. ಹೆರಿಗೆಯ ನಂತರ ಬಾಣಂತಿಗೆ ಹೆಚ್ಚು ವಿಶ್ರಾಂತಿ ಬೇಕಾಗುತ್ತದೆ. ಖಾರವಲ್ಲದ ಸಪ್ಪೆ ಆಹಾರ ಸೇವನೆ ಮಾಡಬೇಕು. ಕೊಂಚ ಬಿಸಿ ನೀರು ಸೇವನೆ, ಫ್ರೆಶ್ ಆಗಿರುವ ಬಿಸಿ ಬಿಸಿ ಆಹಾರ ಸೇವನೆ ಮಾಡಬೇಕು. 6 ವಾರಗಳ ಕಾಲ ಬಾಣಂತಿ ಹೀಗೆ ವಿಶ್ರಾಂತಿ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಬಾಣಂತಿ ಯಾವುದೇ ಕಾರಣಕ್ಕೂ ಊಟ ತಿಂಡಿ, ನಿದ್ದೆ ವಿಷಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬಾರದು.

ಹಣ್ಣು, ತರಕಾರಿ, ಹಾಲು, ಮೊಸರು, ಮಜ್ಜಿಗೆ, ಇಂಥ ಆರೋಗ್ಯಕರ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಇನ್ನು ಬೀದಿಬದಿ ತಿಂಡಿ, ಖಾರದ ತಿಂಡಿ ಯಾಕೆ ತಿನ್ನಬಾರದು ಅಂದ್ರೆ, ಅಂಥ ಆಹಾರ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಇದು ಬರೀ ನಿಮ್ಮ ಮೇಲಷ್ಟೇ ಅಲ್ಲ. ನಿಮ್ಮ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಭವಿಷ್ಯದಲ್ಲಿ ನಿಮ್ಮ ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ಬಾಣಂತಿ ಆರೋಗ್ಯಕರ ಆಹಾರವನ್ನೇ ಸೇವಿಸಬೇಕು. ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss