Health Story: ಇಂದಿನ ಕಾಲದಲ್ಲಿ ಮಧುಮೇಹ ಅನ್ನೋದು ತುಂಬಾ ಕಾಮನ್ ಆರೋಗ್ಯ ಸಮಸ್ಯೆಯಾಗಿದ್ದರೂ ಕೂಡ, ಇದು ನಿರ್ಲಕ್ಷ್ಯ ಮಾಡುವ ಅನಾರೋಗ್ಯ ಸಮಸ್ಯೆ ಅಲ್ಲ. ನಾವು ಮಧುಮೇಹದ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿ, ಡಯಟ್ ಮಾಡುತ್ತೇವೋ, ಅಷ್ಟು ಒಳ್ಳೆಯದು. ಹಾಗಾಗಿ ಆಹಾರ ತಜ್ಞೆ, ವೈದ್ಯೆಯಾದ ಡಾ.ಪ್ರೇಮಾ ಈ ಬಗ್ಗೆ ವಿವರಿಸಿದ್ದಾರೆ ನೋಡಿ..
ಸರಿಯಾಗಿ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮಧುಮೇಹಿಗಳು ಸೇವಿಸಬೇಕು. ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸಿಹಿ ಪದಾರ್ಥ ತಿನ್ನಬಾರದು. ಕೆಲವರು ಸಕ್ಕರೆ ಬದಲು ನಾನು ಬೆಲ್ಲ ಬಳಸಿ, ಸಿಹಿ ಪದಾರ್ಥ ಮಾಡಿಕೊಂಡು ತಿನ್ನುತ್ತೇನೆ ಎನ್ನುತ್ತಾರೆ. ಆದರೆ ಇದು ಕೂಡ ತಪ್ಪು. ಸಕ್ಕರೆ ಹೇಗೆ ಸಿಹಿಯೋ, ಬೆಲ್ಲವೂ ಸಿಹಿಯೇ. ಇದರಿಂದಲೂ ಮಧುಮೇಹಿಗಳ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಬೆಲ್ಲದ ಪದಾರ್ಥವಾದರೂ ಲಿಮಿಟಿನಲ್ಲಿ ಸೇವಿಸಿ. ಅಂದ್ರೆ ತಿಂಗಳಲ್ಲಿ ಎರಡು ಬಾರಿ ಸ್ವಲ್ಪವೇ ಸ್ವಲ್ಪ ಸಿಹಿ ಪದಾರ್ಥ ಸೇವಿಸಬಹುದು.
ಇನ್ನು ನೀವು ಸೇವಿಸುವ ಆಹಾರ, ನಿಧಾನವಾಗಿ, ಸುಲಭವಾಗಿ ಜೀರ್ಣವಾಗಿ, ರಕ್ತಕ್ಕೆ ಹೋಗುವಂಂತಿರಬೇಕು. ಆಗ ಮಧುಮೇಹಿಗಳ ಆರೋಗ್ಯ ಸುಧಾರಿಸುತ್ತದೆ. ಇನ್ನು ಹಸಿವಾದಾಾಗ ಮಾತ್ರ ಇವರು ಊಟ, ತಿಂಡಿ ಮಾಡಬೇಕು. ಯಾರಾದ್ರೂ ತಿನ್ನಲು ಕೊಟ್ಟರು ಅಂತಾನೋ, ಅಥವಾ ತಿನ್ನಬೇಕು ಅಂತಾ ಆಸೆ ಆಯ್ತು ಅಂತಾನೋ, ಅಥವಾ ಆಹಾರ ಹಾಳಾಗಿ ಹೋಗತ್ತೆ ಅಂತಾನೋ, ಆಹಾರ ಸೇವನೆ ಮಾಡುವುದು ತಪ್ಪು. ಇದರಿಂದ ಮಧುಮೇಹ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಪ್ರತಿದಿನ ನೀವು ಟೀ, ಕಾಫಿ ಕುಡಿಯುವಾಗ ಅದಕ್ಕೆ ಸಕ್ಕರೆ, ಬೆಲ್ಲ ಬಳಸುವುದನ್ನು ನಿಲ್ಲಿಸಿಬಿಡಿ. ಅನ್ನ ತಿನ್ನುವುದನ್ನು ಕಡಿಮೆ ಮಾಡಿ, ಅದನ್ನು ತಿರಸ್ಕರಿಸಿದರೆ ಇನ್ನೂ ಉತ್ತಮ. ರಾಗಿ ರೊಟ್ಟಿ ಮಾಡಿ, ಹಸಿ ತರಕಾರಿೊಯೊಂದಿಗೆ ಸೇವಿಸಿ. ಇದಕ್ಕಿಂದ ಉತ್ತಮ ಆಹಾರ, ಮಧುಮೇಹಿಗಳಿಗೆ ಬೇರೊಂದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..