Health Tips: ವೈದ್ಯೆಯಾದ ದೀಪಿಕಾ ಅವರು, ಸ್ಕಿನ್, ಲೇಸರ್ ಟ್ರೀಟ್ಮೆಂಟ್‌ಗೆ ಸಂಬಂಧಪಟ್ಟಂತೆ, ಹಲವು ಮಾಹಿತಿಗಳನ್ನು ನಿಮಗೆ ನೀಡಿದ್ದಾರೆ. ಅದೇ ರೀತಿ, ಬೇಸಿಗೆಯಲ್ಲಿ ಆಹಾರ ಪದ್ಧತಿ ಹೇಗಿರಬೇಕು ಅನ್ನೋ ಬಗ್ಗೆ ಇಂದು ಮಾಹಿತಿ ನೀಡಲಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ಬೇಸಿಗೆಯಲ್ಲಿ ನಮ್ಮ ದೇಹ, ಅದೇ ಟೆಂಪರೇಚರ್‌ಗೆ ಅಡ್ಜಸ್ಟ್ ಆಗಬೇಕು. ಹಾಗಾಗಬೇಕು ಅಂದ್ರೆ, ನಮ್ಮ ದೇಹದಿಂದ ಬೆವರು ಹೋಗಬೇಕು. ಹಾಗೆ ಬೆವರು ಹೋದಾಗ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಆದ್ದರಿಂದಲೇ, ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕು. ನೀರಿನ ಅಂಶ ಹೆಚ್ಚಿರುವ ತರಕಾರಿ, ಹಣ್ಣುಗಳ ಸೇವನೆ ಮಾಡಬೇಕು.
ಹಾಗಾಗಿ ಊಟದಲ್ಲಿ ಮೊಸರು, ಮಜ್ಜಿಗೆ ಇರಬೇಕು. ಎಳನೀರಿನ ಸೇವನೆ ಮಾಡಬೇಕು. ಮಸಾಲೆಭರಿತ ಆಹಾರ ಸೇವನೆ ಮಾಡಿದ ಬಳಿಕ, ನಿಂಬೆಹಣ್ಣಿನ ಜ್ಯೂಸ್ ಕುಡಿಯಬೇಕು. ದೇಹದಲ್ಲಿ ಉಷ್ಣತೆ ಹೆಚ್ಚಿದರೆ, ಮಲಬದ್ಧತೆ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ಚರ್ಮ ಸುಕ್ಕುಗಟ್ಟುವುದೆಲ್ಲ ಆಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ತಂಪು ಆಹಾರ ಮತ್ತು ನೀರಿನ ಸೇವನೆ ಹೆಚ್ಚಾಗಿ ಮಾಡಬೇಕು. ಬೇಸಿಗೆ ಆಹಾರದ ಕುರಿತು ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..