Health Tips: ಹುಟ್ಟುವ ಮಗು ಆರೋಗ್ಯವಾಗಿರಬೇಕು, ಚುರುಕಾಗಿರಬೇಕು ಅಂದ್ರೆ, ತಾಯಿಯಾದವಳು ಉತ್ತಮ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಆಹಾರ, ನೀರು, ಹಾಲು, ಮೊಸರು, ಮಜ್ಜಿಗೆ, ತುಪ್ಪ, ಹಣ್ಣು, ತರಕಾರಿ, ಮೊಳಕೆ ಕಾಳು ಎಲ್ಲವನ್ನೂ ಸೇವಿಸಬೇಕು. ಆಗ ಮಾತ್ರ ಮಗು ಆರೋಗ್ಯವಾಗಿ, ಚುರುಕಾಗಿ ಇರುತ್ತದೆ. ಇಂದು ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಮಕ್ಕಳ ತಜ್ಞರಾದ ಡಾಕ್ಟರ್ ಸುರೇಂದ್ರ, ಹುಟ್ಟುವ ಮಕ್ಕಳು ಎಷ್ಟು ತೂಕದವರಿರಬೇಕು ಎನ್ನುವ ಬಗ್ಗೆ ಹೇಳಿದ್ದಾರೆ. ಆರೋಗ್ಯಕರವಾಗಿರುವ ಮಕ್ಕಳ ತೂಕ 2.8 ರಿಂದ 3.2 ಕೆಜಿ ಇರಬೇಕು. ಆದರೆ ಕೆಲ ಮಕ್ಕಳು 1 ಕೆಜಿಯ ಒಳಗಿರುತ್ತಾರೆ, ಇನ್ನು ಕೆಲವರು 2 ಕೆಜಿಯೊಳಗಿರುತ್ತಾರೆ. ಇದು ಆರೋಗ್ಯಕರ ಮಗುವಿನ ಲಕ್ಷಣವಲ್ಲ. ಹಾಗಾದ್ರೆ ಹೀಗೆ ತೂಕ ಕಡಿಮೆಯಾಗಲು ಕಾರಣವೇನು ಅಂದ್ರೆ, ತಾಯಿಗೆ ಕೆಲಸದ ಒತ್ತಡ, ಕುಟುಂಬದ ಕಿರಿಕಿರಿ ಇದ್ದಲ್ಲಿ, ಆಕೆ ಸರಿಯಾಗಿ ಆಹಾರ ಸೇವಿಸುವುದಿಲ್ಲ. ಮಾನಸಿಕ ತೊಂದರೆಯಿಂದ ಬಳಲುತ್ತಾಳೆ. ಈ ಕಾರಣಕ್ಕೆ ಹುಟ್ಟುವ ಮಗುವಿನ ತೂಕ ಕಡಿಮೆಯಾಗುತ್ತದೆ.
ಇನ್ನು ಮಗುವಿನ ತೂಕ ಅತೀ ಕಡಿಮೆ ಇದ್ದಲ್ಲಿ, ಕಾಂಗರೋ ಚಿಕಿತ್ಸೆ ಕೊಡಿಸುತ್ತಾರೆ. ಈ ವೇಳೆ ತಾಯಿ ಮಗುವಿನೊಂದಿಗೆ ತಾಗಿಕೊಂಡೇ ಇರಬೇಕು. ಈ ರೀತಿ ಇದ್ದಾಗ, ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಕೈ ಮದ್ದು ಹೇಗೆ ತಯಾರಿಸುತ್ತಾರೆ..? ಇದಕ್ಕೆ ಏನೆಲ್ಲ ಬಳಸುತ್ತಾರೆ..?- ಭಾಗ 2