Sunday, September 8, 2024

Latest Posts

ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..

- Advertisement -

Spiritual: ಶ್ರೀಮಂತಿಕೆ ಸುಮ್ಮನೆ ಬರುವುದಿಲ್ಲ. ಅದನ್ನು ಓರ್ವ ವ್ಯಕ್ತಿ ಕಷ್ಟಪಟ್ಟು ಸಂಪಾದಿಸುತ್ತಾನೆ. ಆದರೆ ಆ ಸಂಪಾದನೆಯ ಮಹತ್ವ ಗೊತ್ತಿರದ ವ್ಯಕ್ತಿ, ಅದನ್ನು ಮನಬಂದಂತೆ ಖರ್ಚು ಮಾಡುತ್ತಾನೆ. ಆಗ ಇದ್ದ ಶ್ರೀಮಂತಿಕೆಯೂ ಹೋಗಿ, ಬಡತನ ಬರುತ್ತದೆ. ಹಾಗಾಗಿ ನಮಗೆ ಶ್ರೀಮಂತಿಕೆ ಇದ್ದಾಗ, ಅದನ್ನು ಉಳಿಸಿಕೊಳ್ಳಲು ಕೆಲ ಕೆಲಸಗಳನ್ನು ಮಾಡಬೇಕು ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಅದೇನು ಕೆಲಸ ಅಂತಾ ತಿಳಿಯೋಣ ಬನ್ನಿ..

ಹಣ ಉಳಿಸುವುದನ್ನು ಕಲಿಯಿರಿ. ಶ್ರೀಮಂತರಾದರೂ ಸರಿ, ಬಡವರಾದರೂ ಸರಿ, ಹಣ ಉಳಿಸುವುದನ್ನು ಕಲಿಯಬೇಕು. ಏಕೆಂದರೆ, ಯಾವಾಗ ಶ್ರೀಮಂತಿಕೆ ಹೋಗಿ, ಬಡತನ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅಥವಾ ಬಡವ, ಮಧ್ಯಮವರ್ಗದವರಿಗೆ ಯಾವಾಗ, ಯಾವ ರೀತಿಯ ಕಷ್ಟ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ಹಣ ಉಳಿಸುವುದನ್ನು ಕಲಿಯಬೇಕು. ಅವಶ್ಯಕತೆ ಇರುವ ವಸ್ತುಗಳನ್ನಷ್ಟೇ ಖರೀದಿಸಿ, ಕಡಿಮೆ ಬೆಲೆಯ ಉತ್ತಮ ವಸ್ತುಗಳನ್ನು ಖರೀದಿಸುವ ಮೂಲಕವೂ ನೀವು ಹಣ ಉಳಿತಾಯ ಮಾಡಬಹುದು.

ಹಣ ಖರ್ಚು ಮಾಡುವಾಗ ಈ ವಿಷಯ ಗಮನದಲ್ಲಿಟ್ಟುಕೊಳ್ಳಿ. ಹಣ ಖರ್ಚು ಮಾಡುವಾಗ, ಅಷ್ಟು ಹಣ ಖರ್ಚು ಮಾಡುವ ಅಗತ್ಯತೆ ಇದೆಯಾ..? ಆ ವಸ್ತುವನ್ನು ಖರೀದಿಸುವ ಅವಶ್ಯಕತೆ ಇದೆಯಾ..? ಅಥವಾ ಆ ಸ್ಥಳಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆಯಾ ಅನ್ನುವುದನ್ನು ಯೋಚಿಸಬೇಕು. ಅದೆಲ್ಲ ಅನಾವಶ್ಯಕ ಖರ್ಚಾದಲ್ಲಿ, ಅಂಥ ಕಡೆ ಹಣ ಖರ್ಚು ಮಾಡಬಾರದು. ಬದಲಾಗಿ, ಅವಶ್ಯಕತೆ ಇರುವ ಕಡೆ ಮಾತ್ರ ಹಣ ಖರ್ಚು ಮಾಡಬೇಕು.

ಕೊಂಚ ಹಣವಾದ್ರೂ ದಾನ ಮಾಡಿ. ನಾವು ದುಡಿ ಹಣದಲ್ಲಿ, ಕೊಂಚ ಹಣ ನಮ್ಮ ಅವಶ್ಯಕತೆಗೆ, ಕೊಂಚ ಹಣ ಉಳಿತಾಯಕ್ಕೆ ಮತ್ತೆ ಕೊಂಚ ಹಣ ದಾನಕ್ಕಾಗಿ ಬಳಸಬೇಕಂತೆ. ಅದರಲ್ಲೂ ಶ್ರೀಮಂತನಿಗೆ ಕೊಂಚವಾದ್ರೂ ಉದಾರತೆ ಇರಬೇಕು ಅಂತಾರೆ ಚಾಣಕ್ಯರು. ಇದರಿಂದ ಆ ಬಡವರ ಆಶೀರ್ವಾದದ ಪುಣ್ಯ ಲಭ್ಯವಾಗಿ, ಆರ್ಥಿಕ ಬಲ ಉತ್ತಮವಾಗಿರುತ್ತದೆ.

ಹಣ ಹೂಡಿಕೆ ಮಾಡಿ. ಹಣವನ್ನು ಭದ್ರವಾಗಿ ಇಡಬೇಕು. ಆ ಹಣ ನಮ್ಮ ಭವಿಷ್ಯಕ್ಕೆ ಅನುಕೂಲವಾಗಿರಬೇಕು ಅಂದ್ರೆ ನೀವು ಹೂಡಿಕೆ ಮಾಡಲು ಕಲಿಯಬೇಕು. ಇತ್ತೀಚಿನ ದಿನಗಳಲ್ಲಿ ಹಲವು ರೀತಿಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಬಹುದು. ಮೊದಲಿನ ಕಾಲದಲ್ಲಿ ಚಿನ್ನವನ್ನು ಮಾಡಿಸಿಟ್ಟುಕೊಂಡು, ಕಷ್ಟಕಾಲದಲ್ಲಿ ಅದನ್ನು ಮಾಡಿ, ಹಣ ಪಡೆಯುತ್ತಿದ್ದರು. ಏಕೆಂದರೆ, ಚಿನ್ನದ ದರ ಏರುತ್ತಲೇ ಇರುತ್ತದೆ. ಅದೇ ರೀತಿ ಇಂದಿನವರು, ಮ್ಯೂಚಲ್ ಫಂಡ್, ಫಿಕ್ಸ್ಡ್ ಡಿಪಾಸಿಟ್, ಚಿನ್ನದ ಖರೀದಿ ಮಾಡಿ, ಹಣ ಹೂಡಿಕೆ ಮಾಡಬಹುದು.

ಮನೆಯ ಉದ್ಧಾರದ ವಿಷಯದಲ್ಲಿ ಹೆಣ್ಣು ಮಕ್ಕಳು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..

ಬ್ರಾಹ್ಮಿ ಮುಹೂರ್ತದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬಾರದು ಗೊತ್ತಾ..?

- Advertisement -

Latest Posts

Don't Miss