Friday, December 13, 2024

Latest Posts

ನಿಮ್ಮ ಮುಖ ಹೊಳಪಿನಿಂದ ಕೂಡಿರಬೇಕು ಅಂದ್ರೆ ಏನು ತಿನ್ನಬೇಕು..? ಏನು ತಿನ್ನಬಾರದು..?

- Advertisement -

ಯಾರಿಗೆ ತಾನೇ ತಮ್ಮ ಮುಖ ಚೆಂದವಾಗಿರಬೇಕು..? ನಾಲ್ಕು ಜನರ ಮಧ್ಯದಲ್ಲಿ ತಾವು ಎದ್ದುಗಾಣಿಸಬೇಕು ಅಂತಾ ಮನಸ್ಸಿರುವುದಿಲ್ಲ ಹೇಳಿ. ಆದರೆ ನಾವು ತಿನ್ನುವ ತಪ್ಪು ಆಹಾರಗಳು, ನಮ್ಮನ್ನು ಚೆಂದಗಾಣಲು ಬಿಡುವುದಿಲ್ಲ. ಹಾಗಾಗಿ ನಾವಿಂದು ಚೆಂದಗಾಣಿಸಲು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ.

ಮೊಟ್ಟ ಮೊದಲನೇಯದಾಗಿ ನೀವು ಚೆಂದಗಾಣಬೇಕು ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಚಹಾ ಸೇವನೆ ಮಾಡಲೇಬೇಡಿ. ಯಾಕಂದ್ರೆ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏನು ಸೇವನೆ ಮಾಡುತ್ತೇವೋ, ಅದೇ ನಮ್ಮ ಮುಖದ ಅಂದ ಕೆಡಲು, ಮತ್ತು ಅಂದ ಹೆಚ್ಚಲು ಕೂಡ ಕಾರಣವಾಗತ್ತೆ.

ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಹಣ್ಣು, ತರಕಾರಿ ತಿಂದರೆ, ನಿಮ್ಮ ಮುಖದಲ್ಲಿ ಗ್ಲೋ ಇರುತ್ತದೆ. ಅದನ್ನು ಬಿಟ್ಟು ಬೆಳಿಗ್ಗೆ ಬೆಳಿಗ್ಗೆ ಟೀ, ಕಾಫಿ ಸೇವನೆ ಮಾಡಿದ್ರೆ, ನಿಮ್ಮ ಮುಖದ ಮೇಲೆ ಯಾವ ಕಾಂತಿಯೂ ಮೂಡುವುದಿಲ್ಲ. ರಾತ್ರಿ ತಾಮ್ರದ ತಂಬಿಗೆಯಲ್ಲಿ ನೀರು ತುಂಬಿಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ನಿಮ್ಮ ಮುಖ ಕಾಂತಿಯುತವಾಗಿರುತ್ತದೆ. ಮಂಡಿ ನೋವು, ಸೊಂಟ ನೋವು ಬರುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಇಷ್ಟೇ ಅಲ್ಲದೇ, ನೀವು ನೀರು ಕುಡಿದ ಬಳಿಕ, ನೆನೆಸಿಟ್ಟ ಡ್ರೈಫ್ರೂಟ್ಸ್ ತಿನ್ನಬಹುದು. ಪ್ರತಿದಿನ ಒಂದೊಂದರಂತೆ, ತರಹೇವಾರಿ ಹಣ್ಣು ತಿನ್ನಬಹುದು. ಅಥವಾ ನೆನೆಸಿಟ್ಟ ನೆಲಗಡಲೆ, ಕಡಲೆ ಕಾಳು, ಹೆಸರು ಕಾಳನ್ನ ಕೂಡ ಸೇವಿಸಿ. ಇವೆಲ್ಲದರ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿರುವುದಲ್ಲದೇ, ನಿಮ್ಮ ಸೌಂದರ್ಯ ಕೂಡ ಇಮ್ಮಡಿಯಾಗುತ್ತದೆ.

ಸೌತೇಕೌಯಿ ಸೇವನೆ ಬಗ್ಗೆ ನಿಮಗಿರಲಿ ಈ ಎಚ್ಚರಿಕೆಯ ಮಾಹಿತಿ..

ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ..? ಕೆಟ್ಟದ್ದಾ..?

ಮೆಂತ್ಯೆ ಬೀಜದ ಸೇವನೆ ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

- Advertisement -

Latest Posts

Don't Miss