Recipe: ಹಲವು ತಂದೆ ತಾಯಿಯರಿಗೆ ಮಕ್ಕಳು ಶಾಲೆಗೆ ಹೋಗುವಾಗ, ಏನು ಟಿಫನ್ ರೆಡಿ ಮಾಡಿಕೊಡಬೇಕು ಎಂಬುವುದೇ ದೊಡ್ಡ ಗೊಂದಲದ ವಿಷಯವಾಗಿರುತ್ತೆ. ಹಾಗಾಗಿ ಇಂದು ನಾವು ಆರೋಗ್ಯಕರವೂ, ರುಚಿಕರವೂ ಆದ ಟಿಫನ್ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.
ಶಾಲೆಗೆ ಹೋಗುವಾಗ ಮಕ್ಕಳಿಗೆ ಕಾಳುಗಳ ಉಸುಳಿ, ಎಲ್ಲ ಕಾಳು ನೆನೆಸಿ ಅರೆದು ಮಾಡಿದ ದೋಸೆ, ಲೈಟ್ ಆಗಿ ತವ್ವಾ ಫ್ರೈ ಮಾಡಿದ ತರಕಾರಿ, ತರಹೇವಾರಿ ಸೊಪ್ಪು ಬಳಸಿ ಮಾಡಿದ ಇಡ್ಲಿ, ದೋಸೆ, ಚಪಾತಿ, ನುಚ್ಚಿನ ಉಂಡೆ. ಇತ್ಯಾದಿಗಳನ್ನು ಮಾಡಿಕೊಡಬಹುದು. ಇದೇ ರೀತಿ ತರಕಾರಿ, ಸೊಪ್ಪು, ಕಾಳು, ತುಪ್ಪ, ಬೆಣ್ಣೆ, ಮೊಸರು ಬಳಸಿ ಮಾಡುವಂಥ ಪದಾರ್ಥಗಳನ್ನು ಮಾಡಿ ಕೊಡುವುದರಿಂದ ಮಗುವಿಗೆ ಬೇಕಾದ ಪೋಷಕಾಂಶಗಳು ಸಿಗುತ್ತದೆ.
ಪಾಲಕ್ ಸೊಪ್ಪಿನ ಪೇಸ್ಟ್ ತಯಾರಿಸಿ, ಅದನ್ನು ದೋಸೆ ಹಿಟ್ಟಿಗೆ ಮಿಕ್ಸ್ ಮಾಡಿ ದೋಸೆ ಮಾಡಿ ಕೊಡಿ. ಇದಕ್ಕೆ ತರಕಾರಿ ಪಲ್ಯ, ತುಪ್ಪ ಅಥವಾ ಮೊಸರು ಕೊಡಿ. ಮಡಿಕೆ ಕಾಳು, ಕಡಲೆ ಕಾಳು, ಹೆಸರು ಕಾಳು, ಶೇಂಗಾ, ಬಟಾಣಿ ಇವೆಲ್ಲವನ್ನೂ ಸೇರಿಸಿ, ಉಸುಳಿ ಮಾಡಿಕೊಡಿ. ರಾಗಿ ಇಡ್ಲಿ, ಬೇಳೆ ಕಾಳು, ಸೊಪ್ಪು ಬಳಸಿ ಮಾಡುವ ನುಚ್ಚಿನ ಉಂಡೆ-ತುಪ್ಪ ಮಾಡಿಕೊಡಿ.
ಚಪಾತಿ ಮಾಡುವಾಗ ಅದಕ್ಕೆ ಜೀರಿಗೆ, ಮೆಂತ್ಯೆಸೊಪ್ಪು ಸೇರಿಸಿ. ಪಾಲಕ್ ಸೊಪ್ಪು ಸೇರಿಸಿ. ರಾಗಿ ರೊಟ್ಟಿ, ಅಕ್ಕಿ ಹಿಟ್ಟು ಹಬೆ ಬರಿಸಿದ ರೊಟ್ಟಿ, ತರಕಾರಿ-ಕಾಳು ಬೆರೆಸಿದ ಪಲಾವ್ ಮಾಡಿಕೊಡಿ. ಪ್ರತಿದಿನ ನೀವು ಮಾಡುವ ಅಡುಗೆಯಲ್ಲಿ, ವೆರೈಟಿ ತರಕಾರಿ, ಸೊಪ್ಪು, ಕಾಳುಗಳನ್ನು ಬೆರೆಸಿದರೆ, ಅದು ಆರೋಗ್ಯಕರವೂ ಆಗುತ್ತದೆ. ರುಚಿಯೂ ಇರುತ್ತದೆ. ಬ್ರೆಡ್- ಬಿಸ್ಕೇಟ್- ಕೇಕ್ ಬದಲು ನೀವು ಮನೆಯಲ್ಲೇ ತಯಾರಿಸಿದ ಕುರುಕಲು ತಿಂಡಿ, ಸ್ವೀಟ್ಸ್ ಕೊಡಿ. ಹೊರಗಿನ ತಿಂಡಿ ಆದಷ್ಟು ಕಡಿಮೆ ಮಾಡಿ.

