Thursday, April 17, 2025

Latest Posts

ಹಣೆಗೆ ಯಾವ ತಿಲಕವಿಡಬೇಕು..? ಇದರಿಂದ ಏನು ಪ್ರಯೋಜನ..?

- Advertisement -

Spiritual: ಹಿಂದೂಗಳಲ್ಲಿರುವ ಎಲ್ಲ ಪದ್ಧತಿಯ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಹಣೆಗೆ ತಿಲಕವಿಡುವುದು ಹಿಂದೂಗಳ ಪದ್ಧತಿ. ಆದರೆ ಈ ಪದ್ಧತಿಯ ಹಿಂದೆ ಕೆಲ ವೈಜ್ಞಾನಿಕ ಕಾರಣಗಳಿದೆ. ಹಿಂದೂಗಳು ತಮ್ಮ ಹಣೆಗೆ ವಿಭೂತಿ, ಅರಿಶಿನ, ಕುಂಕುಮ, ಗಂಧಗಳನ್ನು ತಿಲವನ್ನಾಗಿ ಇಟ್ಟುಕೊಳ್ಳುತ್ತಾರೆ. ಹಾಗಾದ್ರೆ ಯಾವ ತತಿಲಕವಿಟ್ಟರೆ, ಏನು ಪ್ರಯೋಜನ ಅಂತಾ ತಿಳಿಯೋಣ ಬನ್ನಿ..

ಅರಿಶಿನ: ಹಣೆಗೆ ಅರಿಶಿನವನ್ನಿಡಿವುದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ, ಅರಿಶಿನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಿಶಿನವನ್ನು ಹಣೆಗೆ ಹಚ್ಚುವುದರಿಂದ ಚರ್ಮ ಶುದ್ಧಿಯಾಗುತ್ತದೆ. ಸಿಟ್ಟಿದ್ದವರು ಹಣೆಗೆ ಅರಿಶಿನ ಹಚ್ಚುವುದರಿಂದ, ತಾಳ್ಮೆ ಬರುತ್ತದೆ.

ಕುಂಕುಮ: ಹಣೆಯ ಮಧ್ಯಭಾಗದಲ್ಲಿ ಕುಂಕುಮ ಹಚ್ಚುವುದರಿಂದ ಅಕಾಗೃತೆ ಹೆಚ್ಚುತ್ತದೆ. ಮುಖದಲ್ಲಿ ಕಳೆ ಬರುತ್ತದೆ. ಅಲ್ಲದೇ, ಬುದ್ಧಿಶಕ್ತಿ ಹೆಚ್ಚಾಾಗುತ್ತದೆ. ನಮ್ಮ ಕೈಯಲ್ಲಿರುವ ಮಧ್ಯದ ಬೆರಳಲ್ಲಿ ತೇಜದ ಬಲವಿರುತ್ತದೆ. ಆ ಕಾರಣಕ್ಕೆ ಮಧ್ಯ ಬೆರಳನ್ನೇ ಬಳಸಿ, ಕುಂಕುಮ ಹಚ್ಚಿಕೊಳ್ಳಬೇಕು.

ಗಂಧ: ಶ್ರೀಗಂಧ ದೇಹಕ್ಕೆ ತಂಪು ನೀಡುವಂಥದ್ದು, ಹಾಗಾಗಿ ಹಣೆಗೆ ಶ್ರೀಗಂಧ ಹಚ್ಚುವುದರಿಂದ ನಮ್ಮ ದೇಹ ಕೂಡ ತಂಪಾಗಿರುತ್ತದೆ. ನಮ್ಮಲ್ಲಿ ತಾಳ್ಮೆ ಹೆಚ್ಚಾಗುತ್ತದೆ. ಮುಖದಲ್ಲಿ ತೇಜಸ್ಸು ಬರುತ್ತದೆ.

ವಿಭೂತಿ: ನಕಾರಾತ್ಮಕತೆ ನಾಶ ಮಾಡುವ ಶಕ್ತಿ ವಿಭೂತಿಗಿದೆ. ಹಾಗಾಗಿ ಹಣೆಗೆ ವಿಭೂತಿ ಹಚ್ಚಲಾಾಗುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವಿಭೂತಿ ಹಚ್ಚಿದ್ದಲ್ಲಿ, ಭಯಭೀತರಾದವರಿಗೆ ವಿಭೂತಿ ಹಚ್ಚಿದ್ದಲ್ಲಿ, ಅವರಲ್ಲಿ ಧೈರ್ಯ ಮತ್ತು ಆರೋಗ್ಯ ವೃದ್ಧಿಸುತ್ತದೆ.

ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ಏನರ್ಥ ಗೊತ್ತಾ..?

ನಾವು ಈ ಕೆಲಸ ಮಾಡುವಾಗ ಮೌನ ವಹಿಸಲೇಬೇಕು ಅನ್ನುತ್ತೆ ಹಿಂದೂ ಧರ್ಮ

ಉಪವಾಸವಿದ್ದಾಗ ಏನನ್ನು ಸೇವಿಸಬಾರದು..?

- Advertisement -

Latest Posts

Don't Miss