Health Tips: ವೈದ್ಯರಾದ ಡಾ.ಆಂಜೀನಪ್ಪ ಅವರು ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ಪರಿಹಾರಗಳನ್ನು ಕೂಡ ಹೇಳಿದ್ದಾರೆ. ಅದೇ ರೀತಿ ಅಪೆಂಡಿಕ್ಸ್ ಖಾಯಿಲೆ ಇದ್ದಲ್ಲಿ ಏನು ಮಾಡಬೇಕು..? ಅದನ್ನು ಹೇಗೆ ಗುಣಪಡಿಸಬೇಕು ಅಂತಲೂ ವಿವರಿಸಿದ್ದಾರೆ.
ಅಪೆಂಡಿಕ್ಸ್ ಬಂದಾಗ, ಆ್ಯಂಟಿ ಬಯೋಟಿಕ್ಸ್ ಕೊಡಲಾಗುತ್ತದೆ. ಆ್ಯಂಟಿ ಫಿವರ್ ಡ್ರಗ್ಸ್ ಕೊಡಲಾಗುತ್ತದೆ. ಹೀಗೆ ಮಾಡಿದಾಗ, ಕೊಂಚ ತಿಂಗಳಿಗೆ ಅಪೆಂಡಿಕ್ಸ್ ಹೊರಟು ಹೋಗುತ್ತದೆ. ಬಳಿಕ ಮತ್ತೆ ಅಪೆಂಡಿಕ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ವೈದ್ಯರ ಬಳಿ ವಿಚಾರಿಸಿ, ಇದಕ್ಕೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯವಾಗಿದೆ.
ಏಕೆಂದರೆ ಅಪೆಂಡಿಕ್ಸ್ ಇನ್ಫೆಕ್ಷನ್ ಆದರೆ, ಅದು ಪ್ರಾಣಕ್ಕೆ ಸಂಚಕಾರ ತರುತ್ತದೆ. ಹಾಗಾಗಬಾರದು ಅಂದ್ರೆ ಅಪೆಂಡಿಕ್ಸ್ ಕಡೆಗಣಿಸದೇ, ಚಿಕಿತ್ಸೆ ಪಡೆಯಬೇಕು. ಇನ್ನು ಅಪೆಂಡಿಕ್ಸ್ ಲಕ್ಷಣವೇನೆಂದರೆ, ಜ್ವರ, ವಾಂತಿ, ಹೊಟ್ಟೆನೋವು ಕಾಣಿಸಿಕೊಂಡರೆ, ಅದು ಅಪೆಂಡಿಕ್ಸ್ ಬಂದಿರುವ ಸೂಚನೆಯಾಗಿರುತ್ತದೆ. ಅಪೆಂಡಿಕ್ಸ ಜಂತು ಹುಳದಂತೆ ಇರುತ್ತದೆ.
ಇನ್ನು ಅಪೆಂಡಿಕ್ಸ್ ಏಕೆ ಬರುತ್ತದೆ ಅಂತಾ ತಿಳಿಯೋದಾದ್ರೆ, ಬೀದಿಬದಿ ತಿಂಡಿ, ಸ್ವಚ್ಛತೆ ಇಲ್ಲದೇ ಮಾಡಿದ ತಿಂಡಿ, ಸ್ವಚ್ಛವಿಲ್ಲದ ನೀರು ಕುಡಿಯುವುದರಿಂದ ಅಪೆಂಡಿಕ್ಸ್ ಬರುತ್ತದೆ. ಸರಿಯಾಗಿ ಬೇಯಿಸದೇ, ಅರ್ದಂಬರ್ಧ ಬೇಯಿಸಿದ ಪದಾರ್ಥ ತಿಂದರೂ ಕೂಡ ಈ ಖಾಯಿಲೆ ಬರುತ್ತದೆ. ಹಾಗಾಗಿ ಸೇವಿಸುವ ಆಹಾರ ಆರೋಗ್ಯಕರವಾಗಿದ್ದರೆ, ನಾವು ಕೂಡ ಆರೋಗ್ಯವಂತರಾಗಿರುತ್ತೇವೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




