Friday, June 20, 2025

Latest Posts

ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು..?

- Advertisement -

Devotional Stories: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ನಿಮಗೆ ದುಡ್ಡು ಸಿಗಬಹದು. ಅದು 1 ರೂಪಾಯಿ ಇರಬಹುದು ಅಥವಾ 100 ರೂಪಾಯಿ ಇರಬಹುದು. ಅದೆಷ್ಟೇ ಇದ್ದರೂ, ನೀವು ಆ ದುಡ್ಡನ್ನು ತೆಗೆದುಕೊಳ್ಳುವ ಮುನ್ನ ಕೆಲ ವಿಷಯಗಳನ್ನ ತಿಳಿದಿರಬೇಕು. ಅದೇನು..? ರಸ್ತೆಯಲ್ಲಿ ಸಿಕ್ಕ ದುಡ್ಡನ್ನ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..

ನಿಮಗೆ ರಸ್ತೆಯಲ್ಲಿ ದೊಡ್ಡ ಅಮೌಂಟ್ ಸಿಕ್ಕಾಗ, ನೀವು ಅದ್ಯಾರದ್ದು ಅಂತಾ ತಿಳಿದುಕೊಂಡು, ಅದನ್ನ ಅವರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಆದರೆ ಒಂದು ರೂಪಾಯಿ, 10 ರೂಪಾಯಿ ಹೀಗೆ ಸಣ್ಣ ಪ್ರಮಾಣದ ದುಡ್ಡು ಸಿಕ್ಕಾಗ,ಅಲ್ಲಿ ದುಡ್ಡಷ್ಟೇ ಇದೆಯಾ..? ಅಥವಾ ಅದರ ಅಖ್ಕಪಕ್ಕ ನಿಂಬೆಹಣ್ಣು, ಅರಿಶಿನ, ಕುಂಕುಮ ಏನಾದರೂ ಇದೆಯಾ ಅಂತಾ ನೋಡಬೇಕು. ಬರೀ ದುಡ್ಡು ಬಿದ್ದಿದ್ದರೆ ನೀವು ಅದನ್ನ ತೆಗೆದುಕೊಳ್ಳಬಹುದು. ಆದರೆ ಅದರ ಅಕ್ಕಪಕ್ಕ ನಿಂಬೆಹಣ್ಣು, ಅರಿಶಿನ, ಕುಂಕುಮ ಏನಾದರೂ ಇದ್ದಲ್ಲಿ, ಅದನ್ನು ಮುಟ್ಟಲು ಹೋಗಬೇಡಿ. ಯಾಕಂದ್ರೆ ಅದು ಮಾಟ ಮಾಡಿದ್ದಾಗಿರಬಹುದು.

ಇನ್ನು ಬರೀ ದುಡ್ಡು ಸಿಕ್ಕಾಗ, ಅದನ್ನ ಮನೆಗೆ ತಂದು ಅರಿಶಿನ ನೀರಿನಿಂದ ತೊಳೆಯಬೇಕು. ನೋಟ್ ಆಗಿದ್ದಲ್ಲಿ, ಕೊಂಚ ನೀರು ಚುಮುಕಿಸಿದರೆ ಸಾಕು. ನೋಟು ಹರಿದುಹೋಗದಂತೆ ನೀರು ಚುಮುಕಿಸಿ.  ಈ ದುಡ್ಡನ್ನು ನೀವು ಅಪ್ಪಿ ತಪ್ಪಿಯೂ ಯಾರಿಗೂ ಕೊಡಬೇಡಿ. ಇದು ಒಂಥರಾ ಲಕ್ಕಿ ದುಡ್ಡು ಇದ್ದ ಹಾಗೆ. ಈ ದುಡ್ಡನ್ನ ನೀವು ಯಾವಾಗಲೂ ನಿಮ್ಮ ಪರ್ಸ್‌ನಲ್ಲೇ ಇರಿಸಿ.

ರಸ್ತೆಯಲ್ಲಿ ದುಡ್ಡು ಸಿಗುವುದರ ಸೂಚನೆ ಏನಂದ್ರೆ, ಇನ್ನು ಮುಂದೆ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ ಎಂದರ್ಥ. ಕೆಲವರಿಗೆ ಹೀಗೆ ರಸ್ತೆಯಲ್ಲಿ ದುಡ್ಡು ಸಿಕ್ಕ ಬಳಿಕ, ಆಕಸ್ಮಿಕವಾಗಿ ದುಡ್ಡು ಸಿಗಲು ಶುರುವಾಗುತ್ತದೆ. ಅಥವಾ ಸ್ಯಾಲರಿ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಾಗಾಗಿ ರಸ್ತೆಯಲ್ಲಿ ಸಿಕ್ಕ ಹಣವನ್ನು ನಿಮ್ಮ ಬಳಿ ಜೋಪಾನವಾಗಿ ಇರಿಸಿ.

ಅಡುಗೆ ಮನೆಯಲ್ಲಿ ಇಂಥ ಕೆಲಸಗಳನ್ನು ಮಾಡಲೇಬೇಡಿ..

ಪತಿ- ಪತ್ನಿಯಲ್ಲಿ ಈ ಗುಣವಿದ್ದಾಗಲೇ ಹೆಚ್ಚು ಜಗಳವಾಗೋದು..

ಮಹಾಭಾರತ ಯುದ್ಧದ ಸೂಚನೆ ಇದ್ದರೂ, ಪಾಂಡವರು ಜೂಜಾಡದಂತೆ ಕೃಷ್ಣನೇಕೆ ತಡೆಯಲಿಲ್ಲ..?

- Advertisement -

Latest Posts

Don't Miss