Beauty Tips: ಹಿಂದಿನ ಕಾಲದ ಹೆಣ್ಣು ಮಕ್ಕಳು ಮುಖಕ್ಕೆ ಯಾವ ಕ್ರೀಮ್ ಹಚ್ಚದಿದ್ದರೂ ಕೂಡ, ಅಂದವಾಗಿ ಕಾಣ್ತಿದ್ರು. ಯಾಕಂದ್ರೆ ಅವರ ಆಹಾರ ಕ್ರಮ ಸರಿಯಾಗಿ ಇತ್ತು. ಆದ್ರೆ ಇಂದಿನ ಹೆಣ್ಣು ಮಕ್ಕಳು ಚೆಂದ ಕಾಣಲು, ಮೇಕಪ್ ಸಹಾಯ ಪಡೆದುಕೊಳ್ಳುತ್ತಾರೆ. ಆದ್ರೆ ನಿಮಗೆ ನ್ಯಾಚುರಲ್ ಗ್ಲೋ ಬರಬೇಕು ಅಂದ್ರೆ, ನಾವಿಂದು ಹೇಳುವ ಟಿಪ್ಸ್ ನೀವು ಫಾಲೋ ಮಾಡ್ಬೇಕು. ಅದೇನು ಅಂತಾ ತಿಳಿಯೋಣ ಬನ್ನಿ..
ನಿಮ್ಮ ತ್ವಚೆ ನ್ಯಾಚುರಲ್ ಆಗಿ ಗ್ಲೋ ಆಗಬೇಕು ಅಂದ್ರೆ, ನೀವು ಮೊದಲು ಅನಾರೋಗ್ಯಕರ ಜೀವನದ ರೀತಿಯನ್ನು ಬದಲಿಸಬೇಕು. ಸಮಯಕ್ಕೆ ಸರಿಯಾಗಿ ಊಟ ತಿಂಡಿ, ನಿದ್ದೆ ಮಾಡಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿನ ಸೇವನೆ ಮಾಡಿ. ಯೋಗ, ವ್ಯಾಯಮವನ್ನು ಮಾಡಿ. ಬೆಳಿಗ್ಗೆ ಕರಿದ ತಿಂಡಿ ಅಥವಾ ಬ್ರೆಡ್, ಬನ್, ಕೇಕ್‌ನಂಥ ಜಂಕ್ ಫುಡ್ ಸೇವನೆ ಮಾಡಿದರೆ, ನಿಮ್ಮ ತ್ವಚೆಯಲ್ಲಿ ಎಂದಿಗೂ ಗ್ಲೋ ಬರಲು ಸಾಧ್ಯವಿಲ್ಲ. ಹಾಗಾಗಿ ಇಂಥ ಆಹಾರ ಸೇವನೆ ನಿಲ್ಲಿಸಿ. ಇಡ್ಲಿ, ದೋಸೆಯಂಥ ಹೆಚ್ಚು ಎಣ್ಣೆ ಬಳಸದ ಆಹಾರವನ್ನು ಸೇವಿಸಿ. ಸಾಧ್ಯವಾದರೆ, ಚಾ, ಕಾಫಿ ಬದಲು, ಮನೆಯಲ್ಲೇ ತಯಾರಿಸಿದ ಹಣ್ಣಿನ ಜ್ಯೂಸ್ ಕುಡಿಯಿರಿ.
ಇನ್ನು ಕೆಲವರಿಗೆ ಮದ್ಯಪಾನ, ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ಅಂಥವರು ಇಂಥ ಅಭ್ಯಾಸವನ್ನು ಬಿಡುವುದು ಉತ್ತಮ. ಏಕೆಂದರೆ ಮದ್ಯಪಾನ ಧೂಮಪಾನ ನಾವು ಬೇಗ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ಹಾಗಾಗಿ ಈ ದುರಭ್ಯಾಸವನ್ನು ಬಿಡುವುದು ಒಳಿತು.
ಇನ್ನು ಧ್ಯಾನ ಮಾಡುವುದರಿಂದ ಮುಖದಲ್ಲಿ ಗ್ಲೋ ಹೆಚ್ಚುತ್ತದೆ. ಜೊತೆಗೆ ಎಳನೀರು, ಮಜ್ಜಿಗೆ, ನೀರಿನ ಸೇವನೆಯಿಂದಲೂ ಮುಖ ಕಾಂತಿಯುತವಾಗಿರುತ್ತದೆ. ಇದರೊಂದಿಗೆ ನೀವು ಫೇಸ್‌ಪ್ಯಾಕ್ ಹಾಕುವುದು ಉತ್ತಮ. ಹಸುವಿನ ಹಸಿ ಹಾಲಿನಿಂದ, ಶ್ರೀಗಂಧವನ್ನು ತೇಯ್ದು, ಇದರೊಂದಿಗೆ ಪ್ಯೂರ್ ಅರಿಶಿನ ಸೇರಿಸಿ ಫೇಸ್‌ಪ್ಯಾಕ್ ಬಳಸಿ.
ಕಡಲೆ ಹಿಟ್ಟಿನಿಂದ ನಿಮ್ಮ ಸೌಂದರ್ಯ ಇಮ್ಮಡಿಗೊಳಿಸಬಹುದು. ಆದರೆ ಆ ಹಿಟ್ಟು ಆರೋಗ್ಯವಾಗಿರಬೇಕು. ಹಿಟ್ಟು ಸರಿಯಾಗಿ ಇಲ್ಲದಿದ್ದಲ್ಲಿ, ಮುಖದ ಮೇಲೆ ಮೊಡವೆ ಏಳುತ್ತದೆ. ಹಾಗಾಗಿ ಕಡಲೆ ಹಿಟ್ಟಿನ ಬಳಕೆ ಮಾಡುವ ಮುನ್ನ, ಅದರ ಕ್ವಾಲಿಟಿ ಸರಿಯಾಗಿ ಇದೆಯಾ ಅಂತಾ ನೋಡಿಕೊಳ್ಳಿ. ಒಂದು ಸ್ಪೂನ್ ಕಡಲೆ ಹಿಟ್ಟಿಗೆ, ಮೊಸರು ಸೇರಿಸಿ, ಫೇಸ್‌ಪ್ಯಾಕ್ ಹಾಕಿ. 15 ನಿಮಿಷ ಬಿಟ್ಟು, ತಣ್ಣೀರಿನಿಂದ ಮುಖ ತೊಳೆಯಿರಿ.
ಆಫರ್, ಡಿಸ್ಕೌಂಟ್ ಇಲ್ಲದೇ ಗ್ರಾಹಕರು ನಿಮ್ಮ ಬಳಿ ಬರಬೇಕೇ..? ಹೀಗೆ ಮಾಡಿ..
ತನ್ನ 29ನೇ ವಯಸ್ಸಿನಲ್ಲೇ ಕೋಟಿ ಕೋಟಿ ರೂಪಾಯಿ ಗಳಿಸಿದ ಹುಡುಗಿ.. ಹೇಗೆ..?