Health Tips: ಬಿಪಿ ಬಂದಾಗ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಹಾರ ಪಥ್ಯ ಹೇಗೆ ಮಾಡಬೇಕು. ಯಾವ ಆಹಾರ ಸೇವನೆ ಕಡಿಮೆ ಮಾಡಬೇಕು. ಲೋ ಬಿಪಿ ಬಂದಾಗ ದೇಹದಲ್ಲಿ ಏನೇನಾಗತ್ತೆ. ಅದಕ್ಕೆ ಪರಿಹಾರವೇನು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ಕೂಡ ಡಾ.ಕಿಶೋರ್ ಹೈ ಬಿಪಿ ಬಂದಾಗ, ಏನು ಮಾಡಬೇಕು..? ಹೇಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೈ ಬಿಪಿ ಇದೆ ಎಂದಾಗ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, ಯಾವುದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ ಮಾಡುವುದನ್ನ ಬಿಟ್ಟುಬಿಡಬೇಕು. ಟೆನ್ಶನ್ ತೆಗೆದುಕೊಳ್ಳುವದನ್ನು ಬಿಟ್ಟುಬಿಡಬೇಕು. ಹಣೆಬರಹದಲ್ಲಿ ಏನಿದೆಯೋ ಹಾಗೆ ಆಗುತ್ತದೆ ಎಂದು ಸುಮ್ಮನಿರಬೇಕು. ನೀವು ಹೆಚ್ಚು ಚಿಂತೆ ಮಾಡಿದಷ್ಟು ನಿಮ್ಮ ಆರೋಗ್ಯ ಇನ್ನಷ್ಟು ಹಾಳಾಗುತ್ತದೆ. ಬಿಪಿ ನಾರ್ಮಲ್ ರೋಗವೇ ಆಗಿದ್ರೂ, ಇದು ನಿಮ್ಮ ದೇಹದ ಹಲವು ಅಂಗಾಂಗಗಳಿದೆ ಧಕ್ಕೆ ತರುತ್ತದೆ. ಹಾಗಾಗಿ ಹೈ ಬಿಪಿ ಇದ್ದರೆ, ಮೊದಲು ಚಿಂತೆ ಮಾಡುವುದನ್ನು ಬಿಡಿ.
ಎರಡನೇಯದಾಗಿ ಉಪ್ಪು, ಖಾರ, ಮಸಾಲೆಯುಕ್ತ ಪದಾರ್ಥ ಸೇವನೆ ನಿಲ್ಲಿಸಿಬಿಡಿ. ಸಾರು, ಸಾಂಬಾರ್, ಪಲ್ಯ ಇವುಗಳಲ್ಲಿ ನೀವು ಬಳಸುವ ಉಪ್ಪಿನ ಪ್ರಮಾಣವನ್ನು ಸ್ವಲ್ಪವಾದರೂ ಕಡಿತಗೊಳಿಸಿ. ಕುರುಕಲು ತಿಂಡಿ ನೀವೇ ಮನೆಯಲ್ಲಿ ಮಾಡುವುದಿದ್ದಲ್ಲಿ, ಅದಕ್ಕೂ ಕಡಿಮೆ ಉಪ್ಪು ಹಾಕಿ. ಮಾರುಕಟ್ಟೆಯಲ್ಲಿ ಸಿಗುವ ಕುರುಕಲು ತಿಂಡಿ ಸೇವನೆ ನಿಲ್ಲಿಸಿಬಿಡಿ. ಏಕೆಂದರೆ, ಅದರಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ.
ಆಫೀಸಿನಲ್ಲಿ ಕೆಲಸ ಮಾಡುವವರು, ಕಾಲೇಜಿಗೆ ಹೋಗುವವರು ಹೆಚ್ಚಾಗಿ ಹೊರಗಿನ ತಿಂಡಿಗಳಲ್ಲೇ ತಿನ್ನುತ್ತಾರೆ. ಪಾಪ್‌ಕಾರ್ನ್, ಫ್ರೆಂಚ್‌ಫ್ರೈಸ್, ಬೇಕರಿ ತಿಂಡಿ, ಬರ್ಗರ್, ಸ್ಯಾಂಡ್‌ವಿಚ್‌ನಂಥ ತಿಂಡಿಗಳನ್ನು ತಿಂತಾರೆ. ಇಂಥ ಜಂಕ್ ಫುಡ್ ಸೇವನೆಯಿಂದಲೇ, ಸಣ್ಣ ವಯಸ್ಸಿಗೆ ಬಿಪಿ ಬರುತ್ತದೆ. ಇಂಥ ತಿಂಡಿಗಳನ್ನು ಅಪರೂಪಕ್ಕೆ ಮಿತವಾಗಿ ತಿನ್ನಬೇಕೆ ಹೊರತು, ಊಟದ ಹೊತ್ತಿಗೆ, ಊಟ ತಿಂದ ಹಾಗೆ ತಿನ್ನುವುದಲ್ಲ. ಹೀಗೆ ಊಟ ತಿಂದ ಹಾಗೆ ಜಂಕ್ ಫುಡ್ ತಿಂದಾಗಲೇ, ಬಿಪಿ, ಶುಗರ್‌ನಂಥ ರೋಗಗಳು ಬರುತ್ತದೆ.
ಬಿಪಿ ಕಂಟ್ರೋಲ್ ಮಾಡುವ ಇರುವ ಪರಿಹಾರ ಅಂದ್ರೆ, ನಿಮ್ಮ ತೂಕವನ್ನು ಹೆಚ್ಚಾಗದಂತೆ ನೋಡಿಕೊಳ್ಳುವುದು ಮತ್ತು ಉಪ್ಪಿನ ಸೇವನೆಯ ಪ್ರಮಾಣ ಕಡಿಮೆ ಮಾಡುವುದು. ಯೋಗ, ವ್ಯಾಯಾಮ, ವಾಕಿಂಗ್ ತಪ್ಪದೇ ಮಾಡಲೇಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..
ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..
ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ