ಕರ್ನಾಟಕದಲ್ಲಿ ಪಂಪ ರನ್ನ ಪೊನ್ನರು ಹೇಗೋ, ಅದೇ ರೀತಿ ಉತ್ತರ ಭಾರತದಲ್ಲಿ ತುಳಸಿದಾಸರು ಕೂಡ ಮಹಾನ್ ಕವಿಗಳು. ಅವರು ದೋಹಾ ಬರೆದು ಪ್ರಸಿದ್ಧರಾದವರು. ಹನುಮ ಭಕ್ತರಾದ ತುಳಸಿದಾಸರು ಹನುಮಾನ್ ಚಾಲೀಸಾವನ್ನ ಬರೆದವರು. ಇಂಥ ತುಳಸಿದಾಸರು, ತಮ್ಮ ಪತ್ನಿಯನ್ನ ತೊರೆದಿದ್ದರಂತೆ. ಹಾಗಾದ್ರೆ ಯಾಕೆ ಅವರು ತಮ್ಮ ಪತ್ನಿಯನ್ನ ತೊರೆದಿದ್ದರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತುಳಸಿದಾಸರ ಹೆಸರು ಗೋಸ್ವಾಮಿ ತುಳಸಿದಾಸ. ಅವರ ನಿಜ ನಾಮ, ರಾಮಬೋಲಾ ದುಬೆ. ಶ್ರಾವಣ ಮಾಸದ ಶುಕ್ಲಪಕ್ಷದ ಸಪ್ತಮಿಯಂದು ಸಂತ ತುಳಸಿದಾಸರ ಜನನವಾಗಿತ್ತು. ರತ್ನಾವಳಿ ಎಂಬಾಕೆಯನ್ನು ತುಳಸಿದಾಸರು ವಿವಾಹವಾದರು. ಆಕೆಯನ್ನ ಎಷ್ಟು ಪ್ರೀತಿಸುತ್ತಿದ್ದರೆಂದರೆ, ಇಡೀ ಪ್ರಪಂಚವನ್ನೇ ಮರೆಯುವಷ್ಟು ಪ್ರೀತಿಸುತ್ತಿದ್ದರು.
ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?
ಒಮ್ಮೆ ದಾಸರ ಪತ್ನಿ ತವರು ಮನೆಗೆ ಹೋಗಿದ್ದರು. ಆಕೆ ಬರುವುದು ಒಂದು ದಿನ ತಡವಾಗಿದ್ದಕ್ಕೆ, ತುಳಸಿದಾಸರು ಆಕೆಯ ತವರು ಮನೆಗೆ ಹೋಗಲು ನಿರ್ಧರಿಸಿದರು. ತುಳಸಿದಾಸರು ಹೊರಡುವಾಗ, ಸುಡು ಬಿಸಿಲಿತ್ತು. ಆ ಬಿಸಿಲಿಗೆ ತುಳಸಿದಾಸರು, ಪತ್ನಿಯ ತವರಿಗೆ ಹೊರಟರು. ಇನ್ನೇನು ಬಿಸಿಲು ಹೋಯಿತು ಎನ್ನುವಷ್ಟರಲ್ಲಿ ಧೋ ಎಂದು ಮಳೆ ಸುರಿಯಿರಿ. ಆ ಮಳೆಯಲ್ಲೇ ನೆನೆಯುತ್ತ, ದಾಸರು ನದಿಯ ಬಳಿ ಬಂದರು. ನದಿಯನ್ನ ದಾಟಿ ಹೋಗಲು ಅವರಿಗೆ ದೋಣಿ ಸಿಗದ ಕಾರಣ, ಒಂದು ಹೆಣದ ಸಹಾಯದಿಂದ ಅವರು ನದಿ ದಾಟಿದರು. ಅಲ್ಲದೇ, ಸರ್ಪವನ್ನು ಕೂಡ ಎದುರಿಸಿ ಕೊನೆಗೆ ಪತ್ನಿಯ ಮನೆ ಸೇರಿದರು.
ಮನೆಯಲ್ಲಿ ಎಲ್ಲರೂ ಮಲಗಿದ್ದರು. ಆದರೂ ದಾಸರು ತಮ್ಮ ಪತ್ನಿಯನ್ನು ಕಾಣಬೇಕೆಂದು ಹಲವಾರು ಕಸರತ್ತು ಮಾಡಿ, ಮನೆ ಒಳಗೆ ಹೋದರು. ಆದರೆ ಅವರ ಸ್ಥಿತಿಯನ್ನು ನೋಡಿದ ಅವರ ಪತ್ನಿ, ಅವರ ಮೇಲೆ ಅಸಹ್ಯ ಪಟ್ಟುಕೊಂಡಳು. ನೆಂದ ದೇಹ, ಹೆಣದ ವಾಸನೆ, ಬಟ್ಟೆಯೆಲ್ಲ ಕೊಳಕಾಗಿತ್ತು. ಇದನ್ನು ಕಂಡು ದಾಸರ ಪತ್ನಿ ಅವಮಾನ ಮಾಡುವಂತೆ ಚುಚ್ಚು ಮಾತನಾಡಿದಳು.
ದೇವರಿಗೆ ಹರಕೆ ತೀರಿಸಿದ ಎಡಿಜಿಪಿ ಅಲೋಕ್ ಕುಮಾರ್..!
ನನ್ನ ದೇಹ ಮಾಂಸ ಮತ್ತು ಮೂಳೆಯ ವಸ್ತುವಾಗಿದೆ. ನೀವು ನನ್ನ ಗಲೀಜು ಶರೀರಕ್ಕಾಗಿ ಮತ್ತು ರಾಮನಿಗಾಗಿ, ನಿಮ್ಮ ಪ್ರೀತಿಯನ್ನ ಸ್ವಲ್ಪವಾದರೂ ತೋರಿಸಿದ್ದಲ್ಲಿ, ನೀವು ಸಂಸಾರ ಸಾಗರವನ್ನು ಪಾರು ಮಾಡುತ್ತಿದ್ದಿರಿ. ಮತ್ತು ಅಮರತ್ವವನ್ನೂ ಪಡೆಯುತ್ತಿದ್ದಿರಿ ಎಂದು ಹಂಗಿಸುತ್ತಾಳೆ. ತಾನು ಪತ್ನಿಯನ್ನು ನೋಡಲು ಅಷ್ಟು ಕಷ್ಟಪಟ್ಟು ಬಂದರೂ ಕೂಡ, ಆಕೆ ಈ ರೀತಿ ಮಾತನಾಡಿದ್ದು ನೋಡಿ, ತುಳಸಿದಾಸರಿಗೆ ಅಪಮಾನವಾದಂತಾಯಿತು. ಅವರು ಆ ಕ್ಷಣವೇ ಪತ್ನಿಯನ್ನ ಬಿಟ್ಟು, ಸನ್ಯಾಸ ದೀಕ್ಷೆ ಪಡೆದರು. ನಂತರ ತನ್ನ ತಪ್ಪಿಗಾಗಿ ಅವರ ಪತ್ನಿ ಅವರ ಬಳಿ ಕ್ಷಮೆ ಕೇಳಿದಾಗ, ಆಕೆಯನ್ನು ತನ್ನ ಶಿಷ್ಯೆಯನ್ನಾಗಿ ತುಳಸಿದಾಸರು ಸ್ವೀಕರಿಸಿದರು.