ಗೋಧಿಹಿಟ್ಟನ್ನ ಬಳಸಿ, ಬರ್ಫಿ ಮಾಡಲಾಗತ್ತೆ. ಚಪಾತಿ, ಪರೋಠಾ ಮಾಡಬಹುದು. ಆದ್ರೆ ಇಂದು ನಾವು ಗೋಧಿ ಹಿಟ್ಟನ್ನ ಬಳಸಿ, ಹಲ್ವಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾದ ಸಾಮಗ್ರಿ: ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಸಕ್ಕರೆ, ಕೊಂಚ ಏಲಕ್ಕಿ ಪುಡಿ, ಡ್ರೈಫ್ರೂಟ್ಸ್, ಅರ್ಧ ಕಪ್ ತುಪ್ಪ.
ಮಾಡುವ ವಿಧಾನ: ಮೊದಲು ಸಕ್ಕರೆ ಪಾಕ ಮಾಡಿಕೊಳ್ಳಬೇಕು. ಅದಕ್ಕಾಗಿ ಪ್ಯಾನ್‌ಗೆ ಸಕ್ಕರೆ ಮತ್ತು ನೀರನ್ನು ಹಾಕಿ, ಪಾಕ ಹೆಚ್ಚು ಗಟ್ಟಿಯೂ ಆಗದಂತೆ, ಹೆಚ್ಚು ತೆಳ್ಳಗೂ ಆಗದಂತೆ ಪಾಕ ತಯಾರಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಪಕ್ಕಕ್ಕಿರಿಸಿ. ಈಗ ಇನ್ನೊಂದು ಪ್ಯಾನ್‌ಗೆ ತುಪ್ಪ ಮತ್ತು ಗೋಧಿ ಹಿಟ್ಟು ಹಾಕಿ ಹುರಿದುಕೊಳ್ಳಿ.
ಘಮ ಬಂದು, ಗೋಧಿ ಹಿಟ್ಟು ಗಾಢ ಬಣ್ಣವಾದ ಮೇಲೆ, ಇದಕ್ಕೆ ಮೊದಲೇ ರೆಡಿ ಮಾಡಿದ ಸಕ್ಕರೆ ಪಾಕ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಇದು ಹಲ್ವಾದ ರೀತಿಯಾದ ಮೇಲೆ ಇದಕ್ಕೆ ಡ್ರೈಫ್ರೂ್ಟ್ಸ್ ಮಿಕ್ಸ್ ಮಾಡಿ. ಈಗ ಹಲ್ವಾ ರೆಡಿ. ನೀವು ಇದನ್ನ ಹೀಗೆ ತಿನ್ನಬಹುದು. ಅಥವಾ ಪ್ಲೇಟ್‌ಗೆ ತುಪ್ಪ ಸವರಿ, ಇದನ್ನು ಹಾಕಿ, ಹಲ್ವಾದಂತೆ ಚೌಕಾಕಾರದಲ್ಲಿಯೂ ಸವಿಯಬಹುದು.
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1
Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 2
Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1