Friday, November 22, 2024

Latest Posts

ಗೋಧಿ ಹಿಟ್ಟಿನ ಗುಲಾಬ್ ಜಾಮೂನ್ ರೆಸಿಪಿ..

- Advertisement -

ಸಿಹಿ ಯಾರಿಗೆ ಇಷ್ಟವಾಗತ್ತೋ, ಅವರಿಗೆ ಗುಲಾಬ್ ಫೇವರಿಟ್ ಇದ್ದೇ ಇರತ್ತೆ. ಈಗೆಲ್ಲಾ ಗುಲಾಬ್ ಜಾಮೂನ್ ಮಾಡಬೇಕು ಅಂದ್ರೆ, ಮಾರುಕಟ್ಟೆಯಲ್ಲಿ ಸಿಗುವ ಇನ್‌ಸ್ಟಂಟ್‌ ಗುಲಾಬ್ ಜಾಮೂನ್ ಮಿಕ್ಸ್ ಪ್ಯಾಕೆಟ್ ತಂದು ಜಾಮೂನ್ ಮಾಡ್ತಾರೆ. ಆದ್ರೆ ನೀವು ಮನೆಯಲ್ಲೇ ಸಿಗುವ ಕೆಲ ವಸ್ತುಗಳನ್ನ ತೆಗೆದುಕೊಂಡು, ಗುಲಾಬ್ ಜಾಮೂನ್ ಮಾಡೋದು ಹೇಗೆ ಅಂತಾ ನಾವಿಂದು ನಿಮಗೆ ಹೇಳಲಿದ್ದೇವೆ.

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಹಾಲಿನ ಪುಡಿ, ಕಾಲು ಸ್ಪೂನ್ ಬೇಕಿಂಗ್ ಸೋಡಾ, ಕೊಂಚ ಏಲಕ್ಕಿ ಪುಡಿ, ಒಂದೂವರೆ ಸ್ಪೂನ್ ತುಪ್ಪ, ಅರ್ಧ ಕಪ್‌ ಹಾಲು, ಒಂದುಕಾಲು ಕಪ್ ಸಕ್ಕರೆ, ಎರಡು ಕಪ್ ನೀರು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಮೊದಲು ಗೋಧಿಹಿಟ್ಟು, ಹಾಲಿನ ಪುಡಿ, ಬೇಕಿಂಗ್ ಸೋಡಾ ಇವಿಷ್ಟನ್ನು ಒಂದು ಬೌಲ್‌ನಲ್ಲಿ ಜರಡಿ ಮಾಡಿಕೊಳ್ಳಿ. ಇದಕ್ಕೆ ಒಂದೂವರೆ ಸ್ಪೂನ್ ತುಪ್ಪ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಹಾಲು ಮತ್ತು ಅವಶ್ಯಕತೆ ಇದ್ದಷ್ಟು ನೀರು ಹಾಕಿ, ಜಾಮೂನ್ ಹಿಟ್ಟಿನ ಹದಕ್ಕೆ ಕಲಿಸಿ. ಜಾಮೂನ್‌ಗಾಗಿ ಉಂಡೆ ತಯಾರಿಸಿಕೊಳ್ಳಿ.

ಇದನ್ನು ಎಣ್ಣೆಯಲ್ಲಿ ಕರಿಯಿರಿ. ಈಗ ಸಕ್ಕರೆ ಮತ್ತು ನೀರು, ಹಾಕಿ ತೆಳ್ಳಗಿನ ಪಾಕ ಮಾಡಿ. ಈಗ ಏಲಕ್ಕಿ ಪುಡಿ ಆ್ಯಡ್ ಮಾಡಿ. ಇದರಲ್ಲಿ ರೆಡಿ ಮಾಡಿಕೊಂಡ ಜಾಮೂನ್ ಹಾಕಿ, 5 ಗಂಟೆ ಬಿಡಿ. ಈಗ ರುಚಿಯಾದ ಗೋಧಿಹಿಟ್ಟಿನ ಜಾಮೂನ್ ರೆಡಿ..

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 1

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 2

ಕಂಜೂಸು ವ್ಯಕ್ತಿ ಮತ್ತು ವಿಷ್ಣುವಿನ ಕಥೆ.. ಭಾಗ 3

- Advertisement -

Latest Posts

Don't Miss