ಹಣ್ಣುಗಳನ್ನು ಯಾವ ಸಮಯದಲ್ಲಿ ತಿಂದರೆ, ಸರಿಯಾಗಿ ಜೀರ್ಣವಾಗುತ್ತದೆ..?

Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣುಗಳನ್ನು ತಿನ್ನಬಾರದ ಸಮಯದಲ್ಲಿ ತಿಂದರೆ, ಅದರಿಂದ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ. ಹಾಗಾದರೆ ತಿಂದ ಹಣ್ಣು ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ, ಮಧ್ಯಾಹ್ನ ಊಟಕ್ಕೂ 2 ಗಂಟೆ ಮುನ್ನ, ಸಂಜೆ ಸೂರ್ಯಾಸ್ತವಾಗುವುದರೊಳಗೆ ಹಣ್ಣಿನ ಸೇವನೆ ಮಾಡಬೇಕು. ಬೆಳಿಗ್ಗೆ ಆ್ಯಪಲ್, ಕಿತ್ತಳೆ, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ ಇಂಥ ಹಣ್ಣುಗಳ ಸೇವನೆ ಮಾಡಬಹುದು. ಮಧ್ಯಾಹ್ನ ಊಟಕ್ಕೂ ಮುನ್ನ ಬಾಳೆಹಣ್ಣು, ಸೇಬು, ಚಿಕ್ಕು, ದಾಳಿಂಬೆ, ಬಟರ್‌ಫ್ರೂಟ್, ಸ್ಟ್ರಾಬೇರಿಯಂಥ ಹಣ್ಣುಗಳ ಸೇವನೆ ಮಾಡಬಹುದು.

ಬೆಳಿಗ್ಗೆ ಬಾಳೆಹಣ್ಣು ಮತ್ತು ಚಿಕ್ಕುವಿನ ಸೇವನೆ ಯಾಕೆ ಮಾಡಬಾರದು ಅಂದ್ರೆ, ಇದರಿಂದ ನೆಗಡಿ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೆಳಿಗ್ಗೆ ಈ ಹಣ್ಣುಗಳನ್ನು ತಿನ್ನಬಾರದು. ಇನ್ನು ನೀವು ತಿಂದ ಹಣ್ಣು ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಆ ಹಣ್ಣುಗಳನ್ನು ಸರಿಯಾಗಿ ಅಗಿದು ತಿನ್ನಬೇಕು.

ಇನ್ನು ಊಟವಾದ ಬಳಿಕ ಬಾಳೆಹಣ್ಣನ್ನು ಅಷ್ಟೇ ತಿನ್ನಬೇಕು. ಮಾವಿನ ಹಣ್ಣಿನ ಸೀಸನ್‌ನಲ್ಲಿ, ಊಟದೊಂದಿಗೆ ಮಾವನ್ನು ಸೇವಿಸಬಹುದು. ಆದರೆ ಕಲ್ಲಂಗಡಿ, ಸೇಬು, ಚಿಕ್ಕು, ಪಪ್ಪಾಯಿ, ಮಸ್ಕ್‌ ಮೆಲನ್ ಇಂಥ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮಾಡುವುದರಿಂದ ಹಣ್ಣಿನ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ.

ನುಗ್ಗೆಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು..

ಫರ್ಮೆಂಟೆಡ್ ಫುಡ್ ಎಂದರೇನು..? ಇದನ್ನು ನಾವು ಪ್ರತಿದಿನ ಸೇವಿಸುತ್ತೇವೆ. ಹಾಗಾದ್ರೆ ಇದು ಒಳ್ಳೆಯದಾ..?

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

About The Author