Wednesday, October 15, 2025

Latest Posts

ಶಿವನ ದೇವಸ್ಥಾನಕ್ಕೆ ಹೋದಾಗ ಪೂರ್ತಿಯಾಗಿ ಪ್ರದಕ್ಷಿಣೆ ಯಾಕೆ ಹಾಕಬಾರದು..?

- Advertisement -

ಶಂಭೋ ಎಂದು ಕರೆದರೆ, ಭಕ್ತರ ಕರೆಗೆ ಓಗೋಡುವ ಭೋಲೇನಾಥ, ಭಕ್ತರ ಎಲ್ಲ ಮನೋಕಾಮನೆಗಳನ್ನು ಪೂರ್ತಿ ಮಾಡುತ್ತಾನೆಂಬ ನಂಬಿಕೆ ಇದೆ. ಅಂಥ ಶಿವನ ದೇವಸ್ಥಾನಕ್ಕೆ ಹೋದಾಗ, ಕೆಲವರು ಅರ್ಧ ಪ್ರದಕ್ಷಿಮೆ ಹಾಕುತ್ತಾರೆ. ಯಾಕೆ ಹೀಗೆ..? ಯಾಕೆ ಶಿವಲಿಂಗವಷ್ಟೇ ಇರುವ ದೇವಸ್ಥಾನದಲ್ಲಿ ಅರ್ಧ ಪ್ರದಕ್ಷಿಣೆ ಹಾಕಲಾಗತ್ತೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಾನ್ ವೆಜ್ ತಿನ್ನದವರು ಇವುಗಳನ್ನು ತಿಂದರೆ ಪ್ರೊಟೀನ್ ಸಿಗುತ್ತದೆ…!

ಭೃಗು ಋಷಿಯ ಶಾಪದಿಂದಾಗಿ, ಶಿವ ಲಿಂಗದ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾನೆ. ಶಿವಲಿಂಗವನ್ನು ಶಿವಶಕ್ತಿ ಎಂದು ಕರೆಯಲಾಗತ್ತೆ. ಯಾಕಂದ್ರೆ ಅದರಲ್ಲಿ ಬರೀ ಶಿವನಷ್ಟೇ ಅಲ್ಲ, ಶಕ್ತಿದೇವಿಯಾಗಿರುವ ಪಾರ್ವತಿ ಕೂಡ ಉಪಸ್ಥಿತಳಿದ್ದಾಳೆಂಬ ನಂಬಿಕೆ ಇದೆ. ಹಾಗಾಗಿ ಶಿವಲಿಂಗವನ್ನು ಶಿವಶಕ್ತಿ ಎಂದೇ ಹೇಳಲಾಗುತ್ತದೆ. ಈ ಶಿವಶಕ್ತಿಯ ಶಕ್ತಿಯನ್ನು ಶಾಂತಗೊಳಿಸಲೆಂದೇ, ಶಿವಕ್ಕೆ ಜಲಾಭಿಷೇಕ ಮಾಡಲಾಗುತ್ತದೆ.

ಬೇಗ ಗರ್ಭಧಾರಣೆ ಮಾಡಬೇಕೆನ್ನುವವರು ಈ ಆಹಾರವನ್ನು ತಿನ್ನಿ..

ಹೀಗೆ ಅಭಿಷೇಕ ಮಾಡಿದ ಜಲವನ್ನು ಪವಿತ್ರ ಜಲವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ಯಾರೂ ತುಳಿಯುವಂತಿಲ್ಲ. ತುಳಿದರೆ ಪಾಪ ಸುತ್ತಿಕೊಳ್ಳುತ್ತದೆ ಅಂತಾ ಹೇಳಲಾಗುತ್ತದೆ. ಹಾಗಾಗಿ ಶಿವನ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಹಾಕಿದ ಜಲ, ತುಳಿಯ ಬಾರದೆಂದೇ ದಾರಿ ಮಾಡಲಾಗುತ್ತದೆ. ಈ ದಾರಿಯನ್ನು ಯಾರೂ ದಾಟುವಂತಿಲ್ಲ. ಇದೇ ಕಾರಣಕ್ಕೆ ಶಿವನ ದೇವಸ್ಥಾನದಲ್ಲಿ  ಅರ್ಧ ಪ್ರದಕ್ಷಿಣೆ ಹಾಕಲಾಗುತ್ತದೆ.

- Advertisement -

Latest Posts

Don't Miss