Health Tips: ಎಕ್ಸಸೈಜ್ ಅಥವಾ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ನಮ್ಮ ದೇಹ ಚೆಂದಗಾಣಿಸುತ್ತದೆ. ಅದಕ್ಕೆ ಒಳ್ಳೆಯ ಶೇಪ್ ಸಿಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದರೆ, ವ್ಯಾಯಾಮವನ್ನು ಯಾವಾಗ ಬೇಕೆಂದರೆ ಆವಾಗ ಮಾಡಬಾರದು. ಅದಕ್ಕಾಗಿಯೇ ಸಮಯವಿರುತ್ತದೆ. ಅದೇ ಸಮಯದಲ್ಲಿ ಮಾಡುವ ರೀತಿಯಲೇ, ವ್ಯಾಯಾಮ, ಯೋಗವನ್ನು ಮಾಡಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ಬೆಳಿಗ್ಗೆ 6 ಗಂಟೆಯಿಂದ 7ಗಂಟೆಯವರೆಗೂ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ, ಯೋಗ ಮಾಡಬೇಕು. ಇದು ದೇಹ ದಂಡಿಸಲು ಇರುವ ಸರಿಯಾದ ಸಮಯ ಅಂತಾರೆ ವೈದ್ಯರು. ಡಾ.ಸಿದ್ಧಾರ್ಥ ಗೋಸಾವಿ ಈ ಬಗ್ಗೆ ವಿವರಿಸಿದ್ದು, ಮುಂಜಾನೆ ವೇಳೆ ಎಲ್ಲರೂ ಫ್ರೆಶ್ ಆಗಿರುತ್ತಾರೆ. ಈ ವೇಳೆ ವ್ಯಾಯಾಮ ಮಾಡಿದರೆ, ಆರೋಗ್ಯಕ್ಕೆ ಒಳ್ಳೆಯದು.
ಪ್ರತಿದಿನ ಇದೇ ಸಮಯಕ್ಕೆ ಸರಿಯಾಗಿ ಯೋಗ ಅಥವಾ ವ್ಯಾಯಾಮ ಮಾಡಿದರೆ, ಹಲವು ಆರೋಗ್ಯ ಬಾಧೆಗಳು ದೂರವಾಗುತ್ತದೆ. ಇಷ್ಟೇ ಅಲ್ಲದೇ, ಪ್ರತಿದಿನ ಒಂದೇ ಸಮಯಕ್ಕೆ, ಆರೋಗ್ಯಕರ ಆಹಾರ ಸೇವನೆ ಮಾಡಿದರೆ, ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಗ್ಯಾಸ್ಟಿಕ್ ಪ್ರಾಬ್ಲಮ್ ಸೇರಿ, ಹೊಟ್ಟೆ ಸಮಸ್ಯೆಗಳು ಸಹ ಕಡಿಮೆಯಾಗುತ್ತದೆ.