Spiritual Story: ಕೆಲವರಿಗೆ ಹೀಗೆ ಅನ್ನಿಸಬಹುದು. ಏನೆಂದರೆ, ಪಾತ್ರೆಗೂ ನಮ್ಮ ನೆಮ್ಮದಿಗೂ ಏನು ಸಂಬಂಧ ಅಂತಾ. ಆದರೆ ಅಡುಗೆ ಕೋಣೆ, ದೇವರ ಕೋಣೆ ಇತ್ಯಾದಿ ನಮ್ಮ ಜೀವನದ ಸುಖ- ದುಃಖ, ನೆಮ್ಮದಿ ಎಲ್ಲವನ್ನೂ ನಿರ್ಧರಿಸುತ್ತದೆ. ಆ ಸ್ಥಳವನ್ನು ನಾವು ಆದಷ್ಟು ಸ್ವಚ್ಛವಾಗಿ ಇರಿಸಬೇಕು. ಆ ಸ್ಥಳದಲ್ಲಿ ಬಳಸುವ ವಸ್ತುವನ್ನು ನಾವು ಸರಿಯಾದ ಕ್ರಮದಲ್ಲಿ ಬಳಸಬೇಕು. ಹಾಗೆ ಮಾಡಿದಾಗ ಮಾತ್ರ ನಾವು ನೆಮ್ಮದಿಯಾಗಿ ಇರಲು ಸಾಧ್ಯ. ಹಾಗಾಗಿ ನಾವಿಂದು ಅಡುಗೆ ಕೋಣೆಯಲ್ಲಿ ಯಾವ ಪಾತ್ರೆಯನ್ನು ತಪ್ಪಾಗಿ ಬಳಸಬಾರದು ಅಂತಾ ತಿಳಿಸಲಿದ್ದೇವೆ.
ಊಟದ ಬಟ್ಟಲು. ಊಟದ ಬಟ್ಟಲನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ಇದು ಮನೆಗೆ ಒಳ್ಳೆಯದಲ್ಲ. ಹೀಗೆ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ. ನಾವು ತಿಂದ ಆಹಾರ ನಮ್ಮ ದೇಹಕ್ಕೆ ಸರಿಯಾಗಿ ಸೇರುವುದಿಲ್ಲ. ಅಲ್ಲದೇ ಮನೆಯಲ್ಲಿ ಹಣದ ಕೊರತೆಯುಂಟಾಗುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇರಬಹುದು. ಆ ಕಾರಣಕ್ಕಾಗಿ ಮನೆಯ ಹಿರಿಯರು ಈ ಮಾತನ್ನು ಹೇಳುತ್ತಾರೆ.
ಲೋಟ. ಲೋಟವನ್ನು ಕೂಡ ಉಲ್ಟಾ ಇಡಬಾರದು ಎನ್ನಲಾಗುತ್ತದೆ. ಇದು ಕೂಡ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.
ಬಾಣಲೆ, ತವಾ. ಪಲ್ಯ ಮಾಡಿದ ಬಾಣಲೆ, ರೊಟ್ಟಿ, ಚಪಾತಿ ಮಾಡಿದ ತವಾವನ್ನು ತೊಳೆದ ಬಳಿಕ ಉಲ್ಟಾ ಇಡಬಾರದು. ಈ ಪಾತ್ರೆಗಳು ನಮ್ಮ ಆರೋಗ್ಯದ ಮೇಲೆ, ಆರ್ಥಿಕ ಪರಿಸ್ಥಿತಿಯ ಮೇಲೆ ಋಣಾತ್ಮಕಕ ಪರಿಣಾಮ ಬೀರುತ್ತದೆ. ಇನ್ನು ಕಬ್ಬಿಣದ ಪಾತ್ರೆಯನ್ನು ಅಡುಗೆ ಮಾಡಲು ಬಳಸುವಂತಿಲ್ಲ. ಇದು ಮನೆಗೂ ದರಿದ್ರ, ಆರೋಗ್ಯಕ್ಕೂ ಹಾಳು.