Sunday, July 6, 2025

Latest Posts

ಯಾವ ಸಮಯದಲ್ಲಿ ಮಾತನಾಡಬೇಕು ಮತ್ತು ಮಾತನಾಡಬಾರದು..?- ಭಾಗ 1

- Advertisement -

ನಾವಿವತ್ತು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿ, ಹೇಗೆ ಮಾತು ಕಡಿಮೆ ಮಾಡಿ ಬದಲಾದ ಅನ್ನೋ ಬಗ್ಗೆ ಒಂದು ಕಥೆಯನ್ನ ಹೇಳಲಿದ್ದೇವೆ. ಈ ಕಥೆ ಯಾಕೆ ಹೇಳುತ್ತಿದ್ದೇವೆಂದರೆ, ಯಾವ ವ್ಯಕ್ತಿ ಹೆಚ್ಚು ಮಾತನಾಡುತ್ತಾನೋ, ಅವನಿಗಿಂತ ಯಾವ ವ್ಯಕ್ತಿ ಕಡಿಮೆ ಮಾತನಾಡುತ್ತಾನೋ, ಅವನಿಗೆ ಹೆಚ್ಚು ಬೆಲೆ ಸಿಗುತ್ತದೆ. ಹಾಗಾಗಿ ಇಂದು ನಾವು ಯಾವ 5 ಸಮಯದಲ್ಲಿ ಸುಮ್ಮನಿರಬೇಕು ಅನ್ನೋ ಬಗ್ಗೆ ತಿಳಿಯೋಣ..

ಓರ್ವ ವಿದ್ಯಾರ್ಥಿ ಅಗತ್ಯಕ್ಕಿಂತ ಹೆಚ್ಚು ಮಾತನಾಡುತ್ತಿದ್ದ. ಅವನ ಬಳಿ ಯಾರಾದರೂ ಏನನ್ನಾದರೂ ಹೇಳಲು ಬಂದರೆ, ಅವರು ತಮ್ಮ ಮಾತನ್ನು ಪೂರ್ತಿ ಮುಗಿಸುವ ಮುನ್ನವೇ, ಅವರಿ ಬುದ್ಧಿ ಹೇಳಲು ಹೋಗುತ್ತಿದ್ದ. ಆದರೆ ಅವನಿಗೆ ಯಾವ ವಿಷಯದ ಬಗ್ಗೆಯೂ ಅಷ್ಟು ತಿಳುವಳಿಕೆ ಇರಲಿಲ್ಲ. ಆ ವಿಷಯ ಅವನಿಗೂ ಗೊತ್ತಿತ್ತು. ಕೆಲ ದಿನಗಳು ಉರುಳಿದ ಬಳಿಕ, ಎಲ್ಲ ಸ್ನೇಹಿತರು ಅವನನ್ನು ಹಂಗಿಸಲು ಶುರು ಮಾಡಿದರು.

ನಂತರ ಅವನು ತನ್ನ ಗುರುಗಳ ಬಳಿ ಹೋಗಿ, ತನಗೆ ತೀವ್ರ ಮಾತನಾಡುವ ಚಟವಿದೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಹೇಳಿ ಎಂದು ಕೇಳಿದ. ಆಗ ಅವನ ಗುರುಗಳು ನೀನು 5 ಸಮಯದಲ್ಲಿ ಸುಮ್ಮನಿರುವುದನ್ನು ಕಲಿತುಕೋ. ನಂತರ ನೀನು ಮೌನಿಯಾಗಿ ಬಿಡುತ್ತಿ ಎಂದು ಹೇಳಿದರಂತೆ. ಆ 5 ಸಮಯ ಯಾವುದೆಂದರೆ,

ಮೊದಲನೇಯದಾಗಿ ನಮ್ಮ ಕಷ್ಟವನ್ನು ನಮ್ಮ ಮಾತಿಂದ ಯಾರೂ ಅರಿಯುವುದಿಲ್ಲ ಎಂದು ನಿಮಗೆ ಅರ್ಥವಾಗುತ್ತದೆಯೋ, ಅಂಥವರ ಎದುರು ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಸಮಯ ವ್ಯರ್ಥ ಮಾಡಬೇಡಿ. ಅಂಥವರ ಎದುರಷ್ಟೇ ಅಲ್ಲ ಬದಲಾಗಿ ಯಾರ ಬಳಿಯೂ ನೀವು ನಿಮ್ಮ ಕಷ್ಟವನ್ನು ಹೇಳಿಕೊಂಡು ಕಣ್ಣೀರಿಡಬೇಡಿ. ಯಾಕಂದ್ರೆ ಎಲ್ಲರೂ ತಮಗಾಗಿ ಬದುಕುತ್ತಾರೆ ಹೊರತು ಇತರಿಗಾಗಿ ಅಲ್ಲ. ಬೇಕಾದ್ರೆ ನೀವೇ ಆ ಜಾಗದಲ್ಲಿದ್ದು ಯೋಚಿಸಿ.

ನಿಮ್ಮ ಬಳಿ ಯಾರಾದ್ರೂ ಪದೇ ಪದೇ ತಮ್ಮ ಕಷ್ಟವನ್ನು ಹೇಳಲು ಬಂದರೆ ನಿಮಗೆ ಇಷ್ಟವಾಗತ್ತಾ..? ಅಯ್ಯೋ ಇವನು ಬಂದ್ನಾ..ಈ ಇವನ ಕಷ್ಟ ಹೇಳಿ ನನ್ನ ತಲೆ ತಿಂದು ಬಿಡ್ತಾನೆ. ಬೇಗ ಇಲ್ಲಿಂದ ಹೊರಡೋಣ ಎಂದು ಹೇಳಿ, ಆ ಜಾಗದಿಂದ ಕಾಲ್ಕಿತ್ತುತ್ತೀರಿ. ಇದೇ ಕಾರಣಕ್ಕೆ ಸಿಕ್ಕ ಸಿಕ್ಕವರ ಬಳಿ, ಅಥವಾ ಯಾರ ಬಳಿಯೂ ಕೂಡ ನೀವು ನಿಮ್ಮ ಕಷ್ಟವನ್ನು ಹೇಳಿಕೊಳ್ಳಬೇಡಿ.

ಎರಡನೇಯದಾಗಿ ನಿಮಗೆ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲವಾದಲ್ಲಿ, ಆ ಬಗ್ಗೆ ಸುದ್ದಿ ಹಬ್ಬಿಸಬೇಡಿ.. ಇದನ್ನೇ ಗಾಸಿಪ್ ಅಂತಾ ಹೇಳೋದು. ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದಿದ್ದರೂ, ಅದಕ್ಕೆ ಮತ್ತಷ್ಟು ಕಥೆ ಕಟ್ಟಿ ಹೇಳೋದು. ಇಂಥ ಬುದ್ಧಿ ಇದ್ದವರನ್ನ ಜನ ಎಂದಿಗೂ ಮೆಚ್ಚೊಲ್ಲ. ನಿಮಗೆ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿಲ್ಲದಿದ್ದಲ್ಲಿ, ಸುಮ್ಮನಿದ್ದು ಬಿಡಿ. ಅದನ್ನು ಬಿಟ್ಟು ಅಂದಾಜು ಮಾಡಿ ಹೇಳಲು ಹೋಗಬೇಡಿ.

ಇಷ್ಟೇ ಅಲ್ಲ, ನೀವು ಕೆಲಸದಲ್ಲಿ ಯಾವುದೋ ಮೀಟಿಂಗ್‌ನಲ್ಲಿರುತ್ತೀರಿ. ನಿಮಗೆ ಒಂದು ವಿಷಯದ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ನಿಮಗೆ ಅದರ ಪೂರ್ತಿ ಉತ್ತರ ಗೊತ್ತಿಲ್ಲದಿದ್ದಲ್ಲಿ ನೀವು ಸುಮ್ಮನಿರಬೇಕು. ಅದನ್ನು ಬಿಟ್ಟು ಅರ್ಧಂಬರ್ಧ ಉತ್ತರಿಸಿ, ನಗೆಪಾಟಲಿಗೀಡಾಗಬೇಡಿ. ಇನ್ನು ನಿಮಗೆ ಏನೂ ಗೊತ್ತಿಲ್ಲದಿದ್ದರೂ ಎಲ್ಲಾ ಗೊತ್ತು ಅನ್ನುವ ರೀತಿ ನೀವು ಮಾತನಾಡಿದರೆ, ಜನ ನಿಮಗೆ ಏನೂ ಗೊತ್ತಿಲ್ಲ ಅಂತಾ ಗುರುತಿಸಿ ಬಿಡ್ತಾರೆ. ಇದು ಒಳ್ಳೆ ವಿಷಯವಲ್ಲ.

ಇನ್ನುಳಿದ ವಿಷಯಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss