ಮೊದಲ ಭಾಗದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಮಾತನಾಡುವ ವಿದ್ಯಾರ್ಥಿಯ ಬಗ್ಗೆ ಕಥೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಆ ಕಥೆಯನ್ನು ಮುಂದುವರಿಸುತ್ತೇವೆ.
ಮೂರನೇಯದಾಗಿ ನಿಮ್ಮ ಬಳಿ ಯಾರಾದ್ರೂ ಮೂರನೇಯವರ ಬಗ್ಗೆ ಗಾಸಿಪ್ ಹೇಳೋಕ್ಕೆ ಬಂದ್ರೆ, ನೀವು ಅವರೊಟ್ಟುಗೂಡಿ ಮೂರನೇಯವರ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ. ಯಾಕಂದ್ರೆ ಯಾರು ನಿಮ್ಮ ಬಳಿ ಬಂದು ಮೂರನೇಯವರ ಬಗ್ಗೆ ಚಾಡಿ ಹೇಳಿರುತ್ತಾರೋ, ಅವರು ಮುಂದೊಂದು ದಿನ ಆ ಮೂರನೇಯ ವ್ಯಕ್ತಿ ಸಿಕ್ಕಾಗ, ಅವರ ಬಳಿ ನಿಮ್ಮ ಬಗ್ಗೆ ಚಾಡಿ ಹೇಳುತ್ತಾನೆ. ಹಾಗಾಗಿ ಹೀಗೆ ಪಿನ್ ಇಡುವ ವ್ಯಕ್ತಿಗಳ ಮಾತನ್ನ ಎಂದಿಗೂ ಕೇಳಬೇಡಿ.
ನಾಲ್ಕನೇಯದಾಗಿ ಯಾರಾದರೂ ನಿಮ್ಮ ಮೇಲೆ ಕೋಪ ತೋರಿಸುತ್ತಿದ್ದರೆ, ನಿಮ್ಮನ್ನು ಅವಮಾನಿಸಬೇಕು ಎಂದುಕೊಂಡಿದ್ದರೆ, ನಿಮ್ಮ ಬಗ್ಗೆ ಕೊಂಕು ಮಾತನಾಡಿ, ಹಂಗಿಸಿ, ನೀವೂ ಜಗಳಕ್ಕೆ ಬರಬೇಕು ಅಂತಾ ಬಯಸುವುನಿದ್ದರೆ, ಅಂಥವರ ಎದುರು ಮೌನವಾಗಿ ಕುಳಿತಿರಬೇಕು. ಅವರ ಕಿರುಚಾಟ, ಕೊಂಕು ಮಾತು, ಹಂಗಿಸುವಿಕೆಯಿಂದ ನಿಮಗೇನೂ ವ್ಯತ್ಯಾಸವಾಗುತ್ತಿಲ್ಲ ಎನ್ನುವಂತೆ ನೀವಿರಬೇಕು.
ಹೀಗೆ ಎದುರಿನವರು ಕೋಪ ತೋರಿಸುತ್ತಿರುವಾಗ, ನೀವು ಮೌನವಾಗಿದ್ದರೆ, ನೀವು ಬುದ್ಧಿವಂತರು, ನಿಮ್ಮ ಬುದ್ಧಿಮಟ್ಟ ಹೆಚ್ಚಿದ್ದವರು ಅನ್ನೋದು ಗೊತ್ತಾಗುತ್ತದೆ. ಮತ್ತು ಈ ಕಾರಣಕ್ಕೆ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ. ಅಲ್ಲದೇ, ಎದುರಿಗಿದ್ದವರಿಗೆ ತಮ್ಮ ಬಿಹೇವಿಯರ್ ಬಗ್ಗೆ ನಾಚಿಕೆಯಾಗುತ್ತದೆ. ಮತ್ತು ನೀವು ಮಾನಸಿಕವಾಗಿ ಎಷ್ಟು ಸ್ಟ್ರಾಂಗ್ ಇದ್ದೀರಿ ಅನ್ನೋದು ಇದು ತೋರಿಸುತ್ತದೆ. ಆದ್ರೆ ಕೆಲವರು ಅಗತ್ಯಕ್ಕಿಂತ ಹೆಚ್ಚು ಹಂಗಿಸಲು ಬರುತ್ತಾರೆ ಅಂಥವರಿಗೆ ಸರಿಯಾದ ಪಾಠ ಕಲಿಸಬೇಕು.
ಐದನೇಯದಾಗಿ ಯಾರಾದರೂ ನಿಮ್ಮ ಬಳಿ ಜೀವನಕ್ಕೆ ಉಪಯೋಗವಾಗುವ ಮಾತು ಹೇಳುವಾಗ, ಅಥವಾ ಅವರು ಅವರ ಕಷ್ಟ ಹೇಳುವಾಗ, ಅಥವಾ ನಿಮ್ಮ ಶಾಲಾ- ಕಾಲೇಜಿನಲ್ಲಿ ಅಥವಾ ಆಫೀಸಿನಲ್ಲಿ ಯಾರಾದರೂ ಹಿರಿಯರು ನಿಮಗೆ ಯಾವುದೋ ವಿಷಯದ ಬಗ್ಗೆ ವಿವರಣೆ ನೀಡುವಾಗ, ನೀವು ಗಮನವಿಟ್ಟು ಕೇಳಿಸಿಕೊಳ್ಳಬೇಕು. ಮಧ್ಯೆ ಮಧ್ಯೆ ಮಾತನಾಡುವುದು, ಅವರ ಮಾತನ್ನು ತಡೆದು ಪ್ರಶ್ನೆ ಕೇಳುವುದು ಇತ್ಯಾದಿ ಮಾಡುವುದೆಲ್ಲ ತಪ್ಪು.
ಹೀಗಾಗಿಯೇ ಹಿರಿಯರು, ಕಡಿಮೆ ಮಾತನಾಡು, ಹೆಚ್ಚು ಕೇಳಿಸಿಕೋ ಎಂದು ಹೇಳಿದ್ದಾರೆ. ಯಾಕಂದ್ರೆ ಯಾರು ಕಡಿಮೆ ಮಾತನಾಡಿ ಹೆಚ್ಚು ಕೇಳಿಸಿಕೊಳ್ಳುತ್ತಾರೋ, ಅಂಥವರು ಯಶಸ್ಸು ಕಾಣುತ್ತಾರೆ. ಮತ್ತು ಯಶಸ್ಸು ನಿಮ್ಮ ಪಾಲಾಗಬೇಕಾದರೆ, ಮಾತು ಮಿತಿಯಲ್ಲಿರಬೇಕು. ಮೌನವನ್ನ ನೀವು ಮೈಗೂಡಿಸಿಕೊಳ್ಳಬೇಕು.